ADVERTISEMENT

ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ ದಿನ: ಅಮಾಯಕರ ರಕ್ಷಣೆಗೆ ವಿಶ್ವಸಂಸ್ಥೆ ಕರೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 10:36 IST
Last Updated 11 ಜನವರಿ 2022, 10:36 IST
ಸಾಂಕೇತಿ ಚಿತ್ರ
ಸಾಂಕೇತಿ ಚಿತ್ರ   

ಅಮೆರಿಕ ಹಾಗೂ ಇತರೆ ದೇಶಗಳಲ್ಲಿ ಪ್ರತಿ ವರ್ಷ ಜನವರಿ 11ರಂದು ’ರಾಷ್ಟ್ರೀಯ ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ’ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಮಕ್ಕಳು, ಅಮಾಯಕ ಮಹಿಳೆಯರು, ಅಪ್ರಾಪ್ತ ಹೆಣ್ಣುಮಕ್ಕಳು ಸೇರಿದಂತೆಶಿಕ್ಷಣದ ಕೊರತೆ, ಸಾಮಾಜಿಕ ತಿರಸ್ಕಾರ, ಆರ್ಥಿಕ ಸಂಕಷ್ಟಕ್ಕೆ ಒಳಗಾದವರು ಸುಲಭವಾಗಿ ಮಾನವಕಳ್ಳಸಾಗಾಣೆಗೆ ಸಿಲುಕುತ್ತಿದ್ದಾರೆ. ಅಂತಹವರನ್ನು ರಕ್ಷಿಸುವ ಹಾಗೂ ಸಮಾಜದಲ್ಲಿ ಮಾನವ ಕಳ್ಳಸಗಾಣೆ ಕುರಿತುಜಾಗೃತಿ ಮೂಡಿಸುವ ದಿನವನ್ನಾಗಿ (ಜ.11) ಆಚರಣೆ ಮಾಡಲಾಗುತ್ತದೆ.

ಜಾಗತಿಕವಾಗಿ ಸದ್ಯ 3 ಕೋಟಿಗೂ ಹೆಚ್ಚು ಜನರು ಮಾನವ ಕಳ್ಳಸಾಗಣೆಗೆ ಒಳ್ಳಗಾಗಿದ್ದಾರೆ. ಇವರಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚು.ಕಳ್ಳಸಾಗಣೆಗೆ ಒಳಗಾದ ಬಹುತೇಕ ಜನರು ತಮ್ಮ ಸ್ವಂತ ಸ್ಥಳ ಬಿಟ್ಟು ಬೇರೆ ಕಡೆ ಅಥವಾ ವಿದೇಶಗಳಲ್ಲಿ ವಾಸ ಮಾಡುತ್ತಾರೆ ಎಂದು ವಿಶ್ವಸಂಸ್ಥೆಅಂದಾಜಿಸಿದೆ.

ADVERTISEMENT

ಸುಳ್ಳು ಮದುವೆ, ಗು‍ಪ್ತ ಉದ್ಯೋಗ, ಲೈಂಗಿಕ ವೃತ್ತಿ, ಅಶ್ಲೀಲ ಚಿತ್ರೀಕರಣ, ಬಾರ್‌ಗಳಲ್ಲಿ ಅಶ್ಲೀಲ ನೃತ್ಯ, ಗುಲಾಮ ವೃತ್ತಿ, ಮಾದಕ ವಸ್ತುಗಳ ಕಳ್ಳ ಸಾಗಣೆ, ಅಂಗಾಂಗ ಮಾರಾಟ ದಂದೆಯಲ್ಲೂ ಅವರನ್ನು ದುರಪಯೋಗಪಡಿಸಿಕೊಳ್ಳಲಾಗುತ್ತಿದೆ. ಮಕ್ಕಳು ಮತ್ತು ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ದೂಡಲಾಗುತ್ತಿದೆ ಎಂದು ವಿಶ್ವಸಮುದಾಯಕ್ಕೆ ವಿಶ್ವಸಂಸ್ಥೆ ಮಾಹಿತಿ ನೀಡಿದೆ.

ಇಂತಹ ಜಾಲದ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಸಾಮಾಜಿಕ ಸಮಾನತೆ, ಶಿಕ್ಷಣ, ಉದ್ಯೋಗ, ಸ್ವಾವಲಂಬನೆ ಜೀವನಕ್ಕೆ ಪ್ರೋತ್ಸಾಹ ನೀಡುವಂತಹ ಕೆಲಸಗಳನ್ನು ಸರ್ಕಾರಗಳು ಮಾಡಬೇಕು ಎಂದ ವಿಶ್ವಸಂಸ್ಥೆ ಕರೆ ನೀಡಿದೆ.

2011ರಲ್ಲಿ ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ ಜನವರಿ 11ರಂದು’ರಾಷ್ಟ್ರೀಯ ಮಾನವ ಕಳ್ಳ ಸಾಗಣೆ ವಿರುದ್ಧ ಜಾಗೃತಿ’ ದಿನವನ್ನಾಗಿ ಘೋಷಣೆ ಮಾಡಲಾಯಿತು. ನಂತರ ಬಂದ ಸರ್ಕಾರಗಳು ಪ್ರತಿ ವರ್ಷ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡುತ್ತವೆ.

ಭಾರತದಲ್ಲೂ ಕೂಡ ಮಾನವ ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮೂಡಿಸಲು ಕಾನೂನು ಅರಿವು ಕಾರ್ಯಕ್ರಮಗಳು, ಜಾಥಗಳು, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.