ADVERTISEMENT

ಶ್ರೀರಾಮ ಮತ್ತು ಲೋಹಿಯಾ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 20:15 IST
Last Updated 12 ಏಪ್ರಿಲ್ 2019, 20:15 IST
   

‘ರಾಮ ಕೃಷ್ಣ ಶಿವ – ಈ ಮೂವರು ಇಂಡಿಯಾದ ಪೂರ್ಣತ್ವದ ಮೂರು ಮಹತ್‌ ಸ್ವಪ್ನಗಳು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ; ಕೃಷ್ಣನದ್ದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ; ಶಿವನಾದರೋ ಪ್ರಮಾಣಾತೀತ...

‘ರಾಮ ತನ್ನ ಅಧಿಕಾರದ ಸುತ್ತ ರೇಖಿತವಾಗಿದ್ದ ನಿಯಮ ಘಟನೆಗಳ ವೃತ್ತವನ್ನು ಎಂದೂ ಹೆಜ್ಜೆ ದಾಟ್ಟಿದ್ದಿಲ್ಲ ಮತ್ತು, ಅಂಥ ಕಟ್ಟಳೆಯ ಗೆರೆಗಳಿಗೆ ಪ್ರಶ್ನೆಯಿಲ್ಲದೆ ಶರಣಾಗುತ್ತಿದ್ದುದೇ ಅವನ ಜೀವನದಲ್ಲಿನ ಮೂರು ನಾಲ್ಕು ಮಹತ್‌ ಕಲಂಕಗಳಿಗೆ ಕಾರಣವಾಯಿತು...

‘ರಾಮ ವಕ್ತಾರನಾಗಿದ್ದಕ್ಕಿಂತ ಶ್ರೋತಾರನಾಗಿದ್ದದ್ದೇ ಹೆಚ್ಚು. ಮಾತನಾಡುವಾಗ ಎದುರಿನವರಿಗೆ ತಾಳ್ಮೆಯಿಂದ ಕಿವಿಗೊಡುವುದು ದೊಡ್ಡವರಿಗೆ ಸಹಜವೇ. ಅಷ್ಟಲ್ಲದೆ ಎಲ್ಲರ ಮಾತಿಗೂ ರಾಮ ಕಿವಿಗೊಡುತ್ತಿದ್ದ. ತನ್ನ ಕಡೆಯವರು ಮತ್ತು ಶತ್ರುಪಕ್ಷದವರು ಮಾತಿನ ಮಲ್ಲಯುದ್ಧಕ್ಕಿಳಿದಾಗ ರಾಮ ಆಸಕ್ತಿಯಿಂದ ಕೇಳುವವನಾಗಿ ನಿಲ್ಲುತ್ತಿದ್ದುದುಂಟು...

ADVERTISEMENT

‘ಅಪಹಾರವಿಲ್ಲದೆ ವಿಸ್ತರಣೆ, ರಾಜ್ಯದಾಹವಲ್ಲದ ಏಕೀಕರಣಸಾಧನೆ – ಇದು ರಾಮಕಥೆ... ಕಥಾನಾಯಕ ರಾಮ, ಉದ್ದಕ್ಕೂ, ಶತ್ರುಪಕ್ಷದಲ್ಲಿರುವ ಧಾರ್ಮಿಕರ ಸ್ನೇಹವನ್ನು ಹುಡುಕಿ ಎತ್ತಿಕೊಳ್ಳುವುದಕ್ಕೆ ಮುಂದಾಗು ತ್ತಿದ್ದುದನ್ನು ಕಾಣಬಹುದು...’

– ರಾಮಮನೋಹರ ಲೋಹಿಯಾ

(ಅನುವಾದ: ಕೆ. ವಿ. ಸುಬ್ಬಣ್ಣ)

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.