ADVERTISEMENT

ಪುಸ್ತಕ ವಿಮರ್ಶೆ: ತಲ್ಲಣಿಸುವ ಮನಕೆ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 19:30 IST
Last Updated 4 ಡಿಸೆಂಬರ್ 2021, 19:30 IST
ಟೀನೇಜ್‌ ತಲ್ಲಣ
ಟೀನೇಜ್‌ ತಲ್ಲಣ   

ಹದಿಹರೆಯವನ್ನು ರಮ್ಯಕಾಲ ಎಂದು ಕವಿಗಳು ಬಣ್ಣಿಸಿದ್ದಾರೆ. ಎಚ್‌.ಎಸ್‌. ವೆಂಕಟೇಶಮೂರ್ತಿ ಅವರಂತೂ ‘ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು’ ಎಂದು ಹದಿಹರೆಯದ ವಯಸ್ಸಿನ ವಿಲಾಸವನ್ನು ಬಣ್ಣಿಸಿದ್ದಾರೆ. ಆದರೆ, ಯೌವನಾವಸ್ಥೆಗೆ ದಾಟುವ ‘ಅಡೋಲಸೆಂಟ್‌’ ಸಮಸ್ಯೆಗಳು ಕೂಡ ಹಲವು. ಅವುಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಸೊಗಸಾಗಿ ಕಟ್ಟಿಕೊಟ್ಟ ಕೃತಿ ‘ಟೀನೇಜ್‌ ತಲ್ಲಣ’.

ದೈಹಿಕ ಬೆಳವಣಿಗೆ, ಹದಿಹರೆಯದ ಹುಡುಗಿಯ ಆರೈಕೆ, ತುಸ್ರಾವದ ತೊಂದರೆ, ಮಾನಸಿಕ ಬೆಳವಣಿಗೆ, ಲೈಂಗಿಕತೆ, ಜೀವನ ಕೌಶಲದ ಕುರಿತು ಈ ಕೃತಿ ಮಾತನಾಡುತ್ತದೆ. ಸೌಂದರ್ಯ ಕಾಪಾಡಿಕೊಳ್ಳುವ ಅಮೂಲ್ಯ ಸಲಹೆಗಳು ಇಲ್ಲಿವೆ. ತ್ವಚೆ, ಕೇಶ, ದಂತ, ಕಣ್ಣಿನ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಂಬ ವಿಷಯವಾಗಿ ಕಿವಿಮಾತುಗಳೂಇವೆ. ಮೊಡವೆಗಳನ್ನು ಹೇಗೆ ನಿಯಂತ್ರಿಸಬೇಕು, ಬಾಯಿ ದುರ್ಗಂಧವನ್ನು ತಡೆಗಟ್ಟುವ ದಾರಿ ಯಾವುದು ಎಂಬುದರ ಮಾಹಿತಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT