ADVERTISEMENT

ಮೊದಲ ಓದು: ತಾಯ್ತನದ ಅನುಭವ ಕಥನ

ಪ್ರಜಾವಾಣಿ ವಿಶೇಷ
Published 27 ಸೆಪ್ಟೆಂಬರ್ 2025, 23:28 IST
Last Updated 27 ಸೆಪ್ಟೆಂಬರ್ 2025, 23:28 IST
<div class="paragraphs"><p><strong>ಮಿಲೇನಿಯಲ್ ಅಮ್ಮ:&nbsp;</strong>ಮುಖಪುಟ</p></div>

ಮಿಲೇನಿಯಲ್ ಅಮ್ಮ: ಮುಖಪುಟ

   

ತಾಯ್ತನ ಎಂಬ ಪದವೇ ಬೆಚ್ಚನೆಯ ಭಾವ ಮೂಡಿಸುವಂಥದ್ದು. ಹೆಣ್ಣು ಮಗಳಾಗಿ, ಮಡದಿಯಾಗಿ, ತಾಯಿಯಾಗಿ... ಹೀಗೆ ಜೀವನದ ಹಲವು ಘಟ್ಟಗಳನ್ನು ದಾಟಿ ಬರುವ ಪರಿಯೇ ಕೌತುಕದ್ದು. ಈ ನಿಟ್ಟಿನಲ್ಲಿ ‘ಮಿಲೇನಿಯಲ್ ಅಮ್ಮ’ ಕೌತುಕದ ಕಥಾನಕ ಎನ್ನಬಹುದು.

ಅವಳಿ ಮಕ್ಕಳು ಲೇಖಕಿಯ ಹೊಟ್ಟೆಯಲ್ಲಿದ್ದ ಕ್ಷಣದಿಂದ ಈಗಿನ ತನಕ ಬಹಳಷ್ಟು ಪಾಠಗಳನ್ನು, ಖುಷಿಯನ್ನು, ಅಗಾಧವಾದ ಭಾವನೆಗಳನ್ನು ಅನುಭವಿಸಲು ಕಾರಣರಾಗಿದ್ದಾರೆ. ಮಕ್ಕಳು ಗರ್ಭದಲ್ಲಿದ್ದಾಗಿನಿಂದ ಹಿಡಿದು ಅವು ಹುಟ್ಟಿ ಹೊರಬರುವ ತನಕದ ಭಾವನೆ, ಮಾನಸಿಕ ತುಮುಲ, ಮೇಲಾಗಿ ಗೊಂದಲಗಳನ್ನು ಈಗಿನ ತಲೆಮಾರಿನ ಹೆಣ್ಣುಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ದಾಖಲಿಸುವ ಪ್ರಯತ್ನ ಈ ಹೊತ್ತಗೆಯಲ್ಲಿ ನವಿರಾಗಿ ನಿರೂಪಿತವಾಗಿದೆ. ಈಗಿನ ಕಾಲದ ತಾಯಂದಿರ ಸವಾಲು, ಪ್ರಶ್ನೆ, ತವಕ ತಲ್ಲಣ, ಸೂಕ್ಷ್ಮ ಸಂವೇದನೆ, ಖುಷಿ, ಪಟ್ಟಪಾಡು, ಅನುಭವಿಸಿದ ದುಃಖ ಎಲ್ಲವನ್ನೂ ಇಲ್ಲಿ ದಾಖಲಿಸಲಾಗಿದೆ. ಇದು ಹೊಸ ತಲೆಮಾರಿನ ತಾಯಂದಿರ ತಾಯ್ತನದ ಕಥಾ ಹಂದರ.

ADVERTISEMENT

ಈ ಹೊತ್ತಗೆಯಲ್ಲಿ ಒಟ್ಟು ಹದಿನಾರು ಅಧ್ಯಾಯಗಳಿವೆ. ಗರ್ಭಿಣಿ ಎಂಬ ಸಮಾಚಾರ ತಿಳಿದಾಗಿನಿಂದ ಮಕ್ಕಳು ಹುಟ್ಟಿ ಬೆಳೆಯುವವರೆಗಿನ ಪಯಣವನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ‘ಕನ್‌ಸೀವ್’ ಆಗಿರುವುದು ‘ಕನ್‌ಫರ್ಮ್’ ಮಾಡಿಕೊಳ್ಳಲು ಮಾಡುವ ಸ್ವಯಂ ಪರೀಕ್ಷೆ ಬಗ್ಗೆ ‘ಪರೀಕ್ಷೆ ಒತ್ತಡ’ ಅಧ್ಯಾಯದಲ್ಲಿ ವಿವರಿಸಿದ್ದು, ‘ಎರಡು ಪಿಂಕ್ ಲೈನುಗಳು ಗಾಢವಾಗಿ ಕಂಡ ಮೇಲೆ ಡಬಲ್ ಶ್ಯೂರ್ ಆಗಬೇಕು’ ಎಂಬ ವಾಕ್ಯ ಗರ್ಭಿಣಿ ಎಂಬುದನ್ನು ಖಚಿತಪಡಿಸಲು ಮಾಡುವಂಥದ್ದಾಗಿದ್ದು, ಆರಂಭವೇ ಕೌತುಕ ಸೃಷ್ಟಿಸುತ್ತದೆ. ಹೀಗೆ ತಾಯ್ತನದ ಎಲ್ಲ ಆಯಾಮಗಳನ್ನು, ಒಳಹೊರಗನ್ನು ಕೂಲಂಕಷವಾಗಿ, ವಿಸ್ತೃತವಾಗಿ ವಿವರಿಸಿದ್ದು ಲೇಖಕಿಯ ಹೆಚ್ಚುಗಾರಿಕೆ ಎನ್ನಬಹುದು.

ಈ ಪುಸ್ತಕದಲ್ಲಿ ಲೇಖಕಿ ತನ್ನ ಸ್ವಾನುಭವವನ್ನು ಬರೆದಿರುವುದಾದರೂ ಇದು ಸಾರ್ವತ್ರಿಕವೂ ಆಗಿರುವುದರಿಂದ ಈ ಪುಸ್ತಕದ ಮೌಲಿಕತೆ ಹೆಚ್ಚಿದೆ. 

***

ಮಿಲೇನಿಯಲ್ ಅಮ್ಮ

ಲೇ: ಮೇಘನಾ ಸುಧೀಂದ್ರ

ಪ್ರ: ಹರಿವು ಬುಕ್ಸ್

ಪುಟ: 135

ಬೆಲೆ: ₹ 180

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.