ADVERTISEMENT

ಮೊದಲ ಓದು: ಬಯಲು ಸೀಮೆಯ ಶೋಷಿತರ ಕತೆ ಹೇಳುವ ಕೃತಿ

ಪ್ರಜಾವಾಣಿ ವಿಶೇಷ
Published 20 ಜುಲೈ 2025, 2:10 IST
Last Updated 20 ಜುಲೈ 2025, 2:10 IST
ಮುಖಪುಟ
ಮುಖಪುಟ   

ಚಿತ್ರದುರ್ಗ ಜಿಲ್ಲೆಯ ಜಡೇಕುಂಟೆ ಮೂಲದ ಮಂಜುನಾಥ್ ಅವರ ಎರಡನೇ ಕಥಾ ಸಂಕಲನ ‘ಕಾಡು ಕಾಯುವ ಮರ’. ಬಯಲುಸೀಮೆಯ ಜನರ ಬದುಕು, ಬವಣೆ, ಕಷ್ಟ-ಸುಖ, ಜನಜೀವನವು ಇಲ್ಲಿ ಕತೆಯ ಸ್ವರೂಪ ಪಡೆದಿವೆ. ಕತೆಗಾರರೇ ಮುನ್ನುಡಿಯಲ್ಲಿ ಹೇಳಿಕೊಂಡಿರುವಂತೆ ಗ್ರಾಮೀಣ ಬದುಕಿನ ಸಂಬಂಧಗಳು, ಅಲ್ಲಿನ ಜಾತಿ ವ್ಯವಸ್ಥೆ, ಜಿದ್ದು, ವೈಷಮ್ಯಗಳು ಈ ಕಥಾ ಸಂಕಲನದ ಎಲ್ಲಾ ಕತೆಗಳಲ್ಲೂ ಕಾಣಸಿಗುತ್ತದೆ.

ಅಪ್ಪನ ತಪ್ಪಡಿ, ದೇಗುಲದ ಗಂಟೆ ಮೊಳಗಲಿಲ್ಲ ಕತೆಗಳು ಗ್ರಾಮೀಣ ಭಾಗದ ದಲಿತರು ಹಾಗೂ ಮೇಲ್ಜಾತಿಯ ನಡುವಿನ ದೇವರ ಸಂಬಂಧವನ್ನು ಅನಾವರಣ ಮಾಡುತ್ತವೆ. ಈ ಕತೆಗಳು ದೇವರನ್ನು ಕೂಡ ಜಾತಿಯ ಹಿಡಿತದಲ್ಲಿಟ್ಟುರುವುದನ್ನು ಕಟ್ಟಿಕೊಡುತ್ತವೆ.
ಕಾಡು ಕಾಯುವ ಮರ, ಉಯ್ಯಾಲೆ ಕತೆಗಳು ಗ್ರಾಮೀಣ ಭಾಗದ ವಿಭಿನ್ನ ರೀತಿಯ ಪ್ರೇಮ ಕತೆಗಳಿಂದ ಗಮನ ಸೆಳೆಯುತ್ತವೆ.

ಮೊಳಕೆಯೊಡೆಯಿತು ಬೀಜ, ಗಂಗಣ್ಣನ ಸೈಕಲ್ ಶಾಪ್, ಕವಲು ದಾರಿಯ ತಿರುವು ಕತೆಗಳು ಗ್ರಾಮೀಣ ಭಾಗದಿಂದ ಜೀವನ ಸಾಗಿಸಲು ನಗರ ಬದುಕಿಗೆ ತಿರುಗಿಕೊಂಡವರ ಬದುಕಿನ ಬವಣೆಗಳ ಸುತ್ತಾ ಸುತ್ತುತ್ತವೆ.

ADVERTISEMENT

ಅಪ್ಪನ ತಪ್ಪಡಿ, ಕಳೆದು ಹೋದವಳ ಗುರುತು, ದೇಗುಲದ ಗಂಟೆ ಮೊಳಗಲಿಲ್ಲ, ಕಾಡು ಕಾಯುವ ಮರ, ‎ಗಂಗಣ್ಣನ ಸೈಕಲ್ ಶಾಪ್ ಕತೆಗಳು ಈ ಸಂಕಲನದ ಉತ್ತಮ ಕತೆಗಳಾಗಿವೆ.

ಸಂಕಲನದ ಒಂದೆರಡು ಕತೆಗಳ ನಿರೂಪಣಾ ಶೈಲಿಯನ್ನು ಬದಲಾವಣೆ ಮಾಡಿದ್ದರೆ, ಇನ್ನೂ ಉತ್ತಮ ಕತೆಗಳಾಗುವ ಸಾಧ್ಯತೆಯಿತ್ತು.‌ ಬಯಲುಸೀಮೆಯ ಗ್ರಾಮೀಣ ಭಾಷೆ ಮತ್ತು ಕಥಾ ವಸ್ತುಗಳನ್ನು ಈ ಸಂಕಲನದ ಕತೆಗಳು ಹೊಂದಿವೆ. ದಲಿತ ಬಂಡಾಯ ಸಾಹಿತ್ಯದ ನೆಲೆಗಟ್ಟಿನಲ್ಲಿ ಈ ಕಥನಗಳು ರೂಪುಗೊಂಡಿವೆ.

ಪುಸ್ತಕ: ಕಾಡು ಕಾಯುವ ಮರ

ಲೇ: ಜಡೇಕುಂಟೆ ಮಂಜುನಾಥ್‎

ಪ್ರ: ಮೈತ್ರಿ ಪುಸ್ತಕ ಮನೆ

‎ಸಂ: 9380593488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.