ADVERTISEMENT

ಏಣಗಿ ಬಾಳಪ್ಪ ರಂಗಯಾತ್ರೆ

​ಪ್ರಜಾವಾಣಿ ವಾರ್ತೆ
Published 11 ಮೇ 2019, 20:00 IST
Last Updated 11 ಮೇ 2019, 20:00 IST
   

ಏಣಗಿ ಬಾಳಪ್ಪ ರಂಗಯಾತ್ರೆ

ಸಂಪಾದನೆ: ಡಾ.ರಾಮಕೃಷ್ಣ ಮರಾಠೆ

ಪ್ರ: ನಾಟ್ಯಭೂಷಣ ಏಣಗಿ ಬಾಳಪ್ಪ , ಪ್ರತಿಷ್ಠಾನ, ಬೆಳಗಾವಿ

ADVERTISEMENT

ಮೊ: 7349759508

ಕನ್ನಡ ರಂಗಭೂಮಿಯ ಆಸ್ತಿಯೇ ಆಗಿದ್ದ ಏಣಗಿ ಬಾಳಪ್ಪನವರ ಆತ್ಮಕಥನವಿದು. ಆ ದಿನದ ನಾಟಕ, ಅದರ ಗಳಿಕೆ, ಅವರು ಭೇಟಿಯಾದ ವ್ಯಕ್ತಿಗಳ ಕುರಿತು, ತಾವು ಭೇಟಿ ನೀಡಿದ ಊರು, ಸ್ಥಳಗಳ ಬಗ್ಗೆ ತಮ್ಮ ಆತ್ಮಕಥನದಲ್ಲಿ ಬಾಳಪ್ಪ ದಾಖಲಿಸಿದ್ದಾರೆ.

ಕುಟುಂಬದ ಪ್ರೀತಿ; ರಂಗಸಂಸ್ಥೆಗಳೊಂದಿಗಿನ ಒಡನಾಟ; ಭಾಷಣ–ಪ್ರಶಸ್ತಿಗಳು; ಹೀಗೆ ಮೂರು ಭಾಗಗಳಾಗಿ ಅವರ ರಂಗಯಾತ್ರೆಯ ನೆನಪುಗಳು ಈ ಕೃತಿಯಲ್ಲಿ ಆವರಿಸಿಕೊಂಡಿವೆ. ಏಣಗಿ ಬಾಳಪ್ಪ ಅವರ ಕುರಿತು ಇದುವರೆಗೆ ಪ್ರಕಟವಾದ ಕೃತಿಗಳಿಗಿಂತ ಇದು ವಿಭಿನ್ನ ಮತ್ತು ವಿಶಿಷ್ಟವಾಗಿದೆ ಎನ್ನಬಹುದು. ಏಕೆಂದರೆ ಬಾಳಪ್ಪ ಅವರ ನೆನಪುಗಳನ್ನು ಸ್ವತಃ ದಾಖಲಿಸಿದ್ದು, ಪಾರ್ಶ್ವವಾಯುವಿಗೆ ತುತ್ತಾದ ನಂತರ ರಂಗಚಟುವಟಿಕೆಯ ಅನುಭವಗಳನ್ನು ಅವರು ತಮ್ಮ ಮೊಮ್ಮಕ್ಕಳ ನೆರವಿನಿಂದ ದಾಖಲು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.