ADVERTISEMENT

ಪುಸ್ತಕ ವಿಮರ್ಶೆ | ಹಿಂದುತ್ವದ ಅನೇಕತ್ವಕ್ಕೊಂದು ಕನ್ನಡಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 0:27 IST
Last Updated 4 ಜೂನ್ 2023, 0:27 IST
ban
ban   

ಸಾಹಿತ್ಯ ಲೋಕದಲ್ಲಿ ಚಿರಪರಿಚಿತ ಹೆಸರು ಅಜಕ್ಕಳ ಗಿರೀಶ ಭಟ್‌. ಸಾಹಿತ್ಯ ಜಗತ್ತಿನಲ್ಲಿ ರಾಷ್ಟ್ರೀಯತೆ, ಹಿಂದುತ್ವದ ಗಟ್ಟಿ ಧ್ವನಿಯಂತಿರುವ ಅವರು ‘ಬಹುವಚನಕ್ಕೊಂದೇ ತತ್ವ’ ಎಂಬ ಕೃತಿಯನ್ನು ಹೊರತಂದಿದ್ದಾರೆ. ‘ಏಕತ್ವ–ಅನೇಕತ್ವಗಳ ಹಿಂದುತ್ವ’ ಎಂಬ ಅಡಿಬರಹ ಹೊಂದಿರುವ ಈ ಹೊತ್ತಿಗೆ ಯಾಕೆ ಈ ಹೊತ್ತಿಗೆ ಎಂಬುದನ್ನು ಲೇಖಕರು ಪೀಠಿಕೆಯಲ್ಲಿಯೇ ಹೇಳಿದ್ದಾರೆ. 

‘ನಮ್ಮ ಸಂಸ್ಕೃತಿಗಳ ಸ್ವರೂಪವನ್ನು ತಕ್ಕಮಟ್ಟಿಗಾದರೂ ಅರ್ಥ ಮಾಡಿಕೊಳ್ಳಬೇಕು. ಹೀಗೆ ಅರ್ಥ ಮಾಡಿಕೊಳ್ಳುವಲ್ಲಿ ಇರುವ ತೊಡಕುಗಳ ಬಗ್ಗೆ ಈಚಿನ ವರ್ಷಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಸಂಸ್ಕೃತಿಯನ್ನು ಗ್ರಹಿಸುವಲ್ಲಿ ನಮ್ಮ ಶಿಕ್ಷಣ ಪದ್ಧತಿ ಮತ್ತು ಭಾಷೆಯ ಪಾತ್ರ ಬಹಳ ದೊಡ್ಡದು. ಆ ನಿಟ್ಟಿನಲ್ಲಿ ಒಂದಷ್ಟು ಆಧಾರಗಳನ್ನು, ಹೇಳಿಕೆಗಳನ್ನು ಇಟ್ಟುಕೊಂಡು ಈ ಕೃತಿ ರಚಿಸಲಾಗಿದೆ’ ಎಂದು ಲೇಖಕರು ಪೀಠಿಕೆಯಲ್ಲಿಯೇ ಹೇಳುತ್ತಾರೆ. ಈ ಕೃತಿ ಏಕೆ ಮತ್ತು ಹೇಗೆ ರಚಿತವಾಗಿದ್ದು ಎಂಬ ಕುರಿತು ಆರಂಭದಲ್ಲಿಯೇ ಹತ್ತು ಸ್ಪಷ್ಟನೆಗಳನ್ನು ನೀಡಿದ್ದಾರೆ. ಕೃತಿಯ ಕೊನೆಗೆ ತಮ್ಮ ಬರಹಗಳಿಗೆ ಆಧಾರವನ್ನು, ಟಿಪ್ಪಣಿಯನ್ನು ನೀಡಿದ್ದಾರೆ.

ಕೃತಿಯಲ್ಲಿ ಒಟ್ಟು15 ಅಧ್ಯಾಯಗಳಿವೆ. ಭಾಷಾಂತರಗೊಂಡ ಪದಗಳು ಮತ್ತು ಪರಿಕಲ್ಪನೆಗಳು ಎಂಬ ಮೊದಲ ಅಧ್ಯಾಯದಲ್ಲಿ ‘ಗಾಡ್‌’, ‘ರಿಲಿಜನ್‌’ ಇತ್ಯಾದಿ ಪದಗಳ ಕುರಿತಾದ ವಿಶ್ಲೇಷಣೆ, ಅವು ನಮ್ಮ ನಂಬಿಕೆಯನ್ನು ಹೇಗೆ ಕುಗ್ಗಿಸುತ್ತವೆ ಎಂಬ ವಿವರಣೆ ಸಿಗುತ್ತದೆ. ಹಿಂದುತ್ವ ಎಂದರೇನು ಎಂಬ ಅಧ್ಯಾಯ ನೈಜ ಹಿಂದುತ್ವದ ದರ್ಶನ ಮಾಡಿಸುತ್ತದೆ. ಸುಮಾರು 160 ಪುಟದ ಕೃತಿಯಲ್ಲಿ ಪ್ರತಿ ಪುಟವೂ ಅತ್ಯಂತ ಮಾಹಿತಿಯುತವಾಗಿದೆ. ಇಡೀ ಕೃತಿ ಆಳವಾದ ಅಧ್ಯಯನದಿಂದ ರೂಪುಗೊಂಡಿದ್ದು ಎಂಬುದನ್ನು ಅಲ್ಲಿನ ನೀಡಲಾದ ಟಿಪ್ಪಣಿ, ಆಕರ ಗ್ರಂಥಗಳು, ಉಲ್ಲೇಖಗಳು ಹೇಳುತ್ತವೆ. 

ADVERTISEMENT

‘ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು’ ಎಂಬ ಭಗವಾನ್‌ ಶ್ರೀಕೃಷ್ಣನ ಮಾತಿನೊಂದಿಗೆ ಕೃತಿಯನ್ನು ಪೂರ್ಣಗೊಳಿಸಿದ್ದಾರೆ. 

ಬಹುವಚನಕ್ಕೊಂದೇ ತತ್ವ

ಲೇ:ಅಜಕ್ಕಳ ಗಿರೀಶ ಭಟ್‌

ಪ್ರ:ಸಾಹಿತ್ಯ ಪ್ರಕಾಶನ

ಸಂ:9448110034 ಬೆ:160 ಪು:176

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.