ಮಾರ್ಕ್ಸ್ ಹೇಳಿರುವಂತೆ ಬಂಡವಾಳಶಾಹಿ ಎಂಬುದು ಸಮಾಜದಲ್ಲಿನ ಸಣ್ಣದನ್ನು ಇಲ್ಲವಾಗಿಸುತ್ತಾ, ದೊಡ್ಡದನ್ನು ಇನ್ನೂ ದೊಡ್ಡದು ಮಾಡುತ್ತಾ ಉದ್ಯಮ ಜಗತ್ತಿನಲ್ಲಿ ಕೆಲವೇ ಕೆಲವು ವ್ಯಕ್ತಿ ಅಥವಾ ಉದ್ದಿಮೆಗಳ ಕೈಗೆ ಒಪ್ಪಿಸುವ ವ್ಯವಸ್ಥೆ. ಜಗತ್ತನ್ನೇ ಆವರಿಸುತ್ತಿರುವ ಕಾರ್ಪೊರೇಟ್ ಎಂಬ ಈ ಏಕಸ್ವಾಮ್ಯ ಬಂಡವಾಳಗಾರರಿಂದ ವ್ಯವಸ್ಥೆ ಹೇಗೆ ನಿಯಂತ್ರಣಕ್ಕೊಳಪಡುತ್ತದೆ ಎಂಬುದರ ಚರ್ಚೆ ಈಗ ವ್ಯಾಪಕವಾಗಿದೆ.
ಬಂಡವಾಳಶಾಹಿ, ಹೊರಗುತ್ತಿಗೆ, ನವ ಉದಾರವಾದ, ಮನೋಪ್ಸೊನಿ ಎಂಬಿತ್ಯಾದಿಗಳು ಈ ವ್ಯವಸ್ಥೆಯಲ್ಲಿ ಬಳಕೆಯಲ್ಲಿರುವ ಪದಗಳು. ನವೀನ ಆವಿಷ್ಕಾರ ಮತ್ತು ಹೊಸ ತಂತ್ರಜ್ಞಾನಗಳ ಅಲೆಗಳ ಮೇಲೆ ಸಾಗುವ ಈ ಬಂಡವಾಳಶಾಹಿಗೆ ಕೆಲವೊಮ್ಮೆ ಸುನಾಮಿ ಅಪ್ಪಳಿಸುವ ಅಪಾಯವೂ ಇರುತ್ತದೆ. ಇಂಥವುಗಳ ಅಧ್ಯಯನ ನಡೆಸಿ, ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುವ ಪ್ರಯತ್ನವನ್ನು ಲಂಡನ್‌ನಲ್ಲಿ ಪ್ರಾಧ್ಯಾಪಕರಾಗಿರುವ ಅಶೋಕ್ ಕುಮಾರ್ ಅವರು ‘ಮೋನೋಪ್ಸೋನಿ ಕ್ಯಾಪಿಟಲಿಸಂ: ಪವರ್ ಅಂಡ್ ಪ್ರೊಡಕ್ಷನ್ ಇನ್ ದ ಟ್ವೈಲೈಟ್ ಆಫ್ ಸ್ವೆಟ್‌ಶಾಪ್ ಏಜ್’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.
ಇದನ್ನು ‘ಏಕಸ್ವಾಮ್ಯ ಖರೀದಿ ಬಂಡವಾಳಶಾಹಿ: ಗ್ಲೋಬಲ್ ವ್ಯಾಲ್ಯೂ ಚೇನ್‌ಗಳ ಯುಗದಲ್ಲಿ ಅಭಿವೃದ್ಧಿ ಪಥಗಳು’ ಎಂಬ ಶೀರ್ಷಿಕೆಯಡಿ ನಾ. ದಿವಾಕರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರಿಗೆ ಅಡಿಟಿಪ್ಪಣಿಗಳಿಗೆ ವಿ.ಎಸ್.ಎಸ್.ಶಾಸ್ತ್ರಿ ನೆರವಾಗಿದ್ದಾರೆ.
ಶ್ರಮ ಬೇಡುವ ಬೆವರು ಅಂಗಡಿಗಳ ಯುಗ ಆರಂಭ ಮತ್ತು ಅಂತ್ಯ, ಜಾಗತಿಕ ಮಟ್ಟದಲ್ಲಿ ಕಾರ್ಮಿಕರ ಚೌಕಾಸಿ ಶಕ್ತಿಯ ವಿಶ್ಲೇಷಣೆ, ಬೇರೆ ಬೇರೆ ರಾಷ್ಟ್ರಗಳಲ್ಲಿ ಏಕಸ್ವಾಮ್ಯ ಬಂಡವಾಳಶಾಹಿ ಹೇಗೆ ಕೆಲಸ ಮಾಡುತ್ತಿದೆ ಎಂಬ ಚಿತ್ರಣದ ಜತೆಗೆ ಹಲವು ಕುತೂಹಲಕರ ಮಾಹಿತಿ ಈ ಕೃತಿಯಲ್ಲಿದೆ. ಭೂತಕಾಲದಲ್ಲಿ ನಡೆದ ಚಿತ್ರಣಗಳು, ವರ್ತಮಾನದ ವಾಸ್ತವ ಹಾಗೂ ಭವಿಷ್ಯದಲ್ಲಿ ಏನಾಗಲಿದೆ ಎಂಬ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
ಏಕಸ್ವಾಮ್ಯ ಖರೀದಿ ಬಂಡವಾಳಶಾಹಿ
ಲೇ: ಅಶೋಕ್ ಕುಮಾರ್
ಅನು: ನಾ. ದಿವಾಕರ
ಪ್ರ: ಆಕೃತಿ ಪುಸ್ತಕ
ಪುಟ: 442
ಬೆ: ₹495
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.