ADVERTISEMENT

ಮೊದಲ ಓದು:‘ಕೃಷ್ಣಾಚಾರ್‌’ ಪ್ರಸಂಗ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 19:30 IST
Last Updated 19 ಫೆಬ್ರುವರಿ 2022, 19:30 IST
ಕೃಷ್ಣಾಚಾರ್‌ ಕಿಷ್ಕಿಂದಾ ಬಾರ್‌ ಪುಸ್ತಕ
ಕೃಷ್ಣಾಚಾರ್‌ ಕಿಷ್ಕಿಂದಾ ಬಾರ್‌ ಪುಸ್ತಕ   

ವೃತ್ತಿಯಲ್ಲಿ ಪತ್ರಕರ್ತರಾಗಿರುವ ನರಸಿಂಹಮೂರ್ತಿ ಪ್ಯಾಟಿ ಅವರ ಎರಡನೇ ಪ್ರಬಂಧ ಸಂಕಲನ ‘ಕೃಷ್ಣಾಚಾರ್‌ @ ಕಿಷ್ಕಿಂದಾ ಬಾರ್‌’. ಇದರಲ್ಲಿ ಒಟ್ಟು ಎಂಟು ಪ್ರಬಂಧಗಳಿವೆ. ಎಲ್ಲವೂ ಚಿಕ್ಕ, ಚೊಕ್ಕ. ಕಥೆಗಳಾದರೂ ಇಲ್ಲಿನ ಹಲವು ವಿಷಯಗಳು, ಘಟನೆಗಳು ಅನೇಕರ ಅನುಭವಗಳು.

ಇವುಗಳ ನಾಯಕ ಅಥವಾ ಪ್ರಧಾನ ಪಾತ್ರದಾರಿ ‘ಕೃಷ್ಣಾಚಾರ್‌’ ಎಂಬ ಪುರೋಹಿತ. ಹಲಗೇರಿ ಹಳ್ಳಿಯ ಕೃಷ್ಣಾಚಾರ್‌ ಹನುಮಂತ ದೇವರ ಗುಡಿಯ ಅರ್ಚಕ. ವ್ಯಕ್ತಿತ್ವ, ಮಾತು, ಜಾಣ್ಮೆ, ನಗುವಿನ ಟಾನಿಕ್‌ನಿಂದಲೇ ಜನರಿಗೆ ಕೃಷ್ಣಾಚಾರ್‌ ಅಚ್ಚುಮೆಚ್ಚು. ಪುರೋಹಿತನಾಗಿದ್ದರೂ ಆ ಪಾತ್ರವೇ ವರ್ಣರಂಜಿತ. ‘ರೈಟ್‌ ರೈಟ್‌ ಯಂಕಣ್ಣ’, ‘ಕಾಕಪಿಂಡ’, ‘ಭೂ ಪ್ರಹಸನ’ದಲ್ಲಿ ಎದುರಾಗುವ ಪ್ರಸಂಗ, ಅದಕ್ಕೆ ಕೃಷ್ಣಾಚಾರ್‌ ಅವರ ಉಪಾಯ, ಪರಿಹಾರ ಪಾತ್ರಕ್ಕೆ ಜೀವ ತುಂಬುತ್ತವೆ. ಇಲ್ಲಿ ಹಾಸ್ಯ ಶೈಲಿಯ ಬರವಣಿಗೆಯಲ್ಲಿ ಲವಲವಿಕೆಯಿದೆ. ಕಥೆಯೊಳಗೆ ಕಥೆಗಳು ಅಡಗಿವೆ. ಕೃಷ್ಣಾಚಾರ್‌ ಪಾತ್ರದ ಪ್ರತೀ ಮಾತಿನಲ್ಲಿ ಆಲೋಚನೆಗಳಿಗೂ ಅವಕಾಶವಿದೆ.

ಕೃತಿ: ಕೃಷ್ಣಾಚಾರ್‌ @ ಕಿಷ್ಕಿಂದಾ ಬಾರ್‌

ADVERTISEMENT

ಲೇ: ನರಸಿಂಹಮೂರ್ತಿ ಪ್ಯಾಟಿ

ಪ್ರ: ಸಂಗಾತ ಪುಸ್ತಕ, ಗದಗ

ಸಂ: 9341757653

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.