ADVERTISEMENT

ಮೊದಲ ಓದು: ಬರೀ ಪೇಟೆಯಲ್ಲ, ಕೌತುಕಗಳ ಕೋಟೆ

ಪ್ರಜಾವಾಣಿ ವಿಶೇಷ
Published 23 ಜುಲೈ 2022, 22:30 IST
Last Updated 23 ಜುಲೈ 2022, 22:30 IST
‘ಕೃಷ್ಣರಾಜಪೇಟೆ’... ಪುಸ್ತಕದ ಮುಖಪುಟ
‘ಕೃಷ್ಣರಾಜಪೇಟೆ’... ಪುಸ್ತಕದ ಮುಖಪುಟ   

ಮಂಡ್ಯ ಜಿಲ್ಲೆಯ ಪುಟ್ಟ ತಾಲ್ಲೂಕಿನ ಅಗಾಧತೆಯನ್ನು ಸಂಶೋಧನಾ ರೂಪದಲ್ಲಿ ತೆರೆದಿಟ್ಟಿದೆ ಈ ಕೃತಿ. ಕೆ.ಆರ್. ಪೇಟೆ ಎಂದು ಒಂದು ಸಾಲಿನಲ್ಲಿ ಓದಿಸಿಕೊಂಡು ಹೋಗುವ ಊರಿನ, ತಾಲ್ಲೂಕು ವ್ಯಾಪ್ತಿಯ ಆಚೆ ಈಚೆಗಿನ ಸಂಗತಿಗಳನ್ನು ಕೃತಿಕಾರರು ತೆರೆದಿಟ್ಟಿದ್ದಾರೆ.

ಮೊದಲ ಕೆಲವು ಪುಟಗಳಲ್ಲಿ ಭೌಗೋಳಿಕ ಮಾಹಿತಿ, ಜನಸಂಖ್ಯೆ, ಆರ್ಥಿಕ ಚಟುವಟಿಕೆ ಇತ್ಯಾದಿ ಸಾಮಾನ್ಯ ವಿವರಗಳಿವೆ. ಮುಂದೆ ಈ ಭಾಗದ ಶಿಲಾಯುಗ ಕಾಲದ ಇತಿಹಾಸವಿದೆ. ಮೈಸೂರು ಅರಸರು ಇಲ್ಲಿ ಕೆರೆ ಕಟ್ಟಿಸಿದ ನಂತರ ಈ ಊರಿಗೆ ಕೃಷ್ಣರಾಜ ಪೇಟೆ ಎಂದು ಹೆಸರಾದದ್ದರ ಕುರಿತು ವಿವರಗಳಿವೆ. ಈ ಹೆಸರು ಹಾಗೂ ಮೂಲ ಹೆಸರಿನ ಕುರಿತು ವಿವಿಧ ವಿದ್ವಾಂಸರಲ್ಲಿರುವ ಭಿನ್ನ ಅಭಿಪ್ರಾಯಗಳನ್ನೂ ಉಲ್ಲೇಖಿಸಲಾಗಿದೆ.ಕೃಷಿ, ಸಾಮಾಜಿಕ, ರಾಜಕೀಯ, ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೆ.ಆರ್‌.ಪೇಟೆಯ ಗಣನೀಯ ಕೊಡುಗೆಗಳ ಉಲ್ಲೇಖ, ವಿವಿಧ ಮಹನೀಯರ ಪರಿಚಯ ಹಾಗೂ ಸಣ್ಣ ಸಣ್ಣ ವಿವರಗಳನ್ನೂ ಒದಗಿಸಲಾಗಿದೆ. ರಾಜಧಾನಿಗೆ ಹತ್ತಿರವಿರುವ ಸದಾ ವಿವಿಧ ಕಾರಣಗಳಿಗೆ ಸುದ್ದಿಯಲ್ಲಿರುತ್ತಲೇ ಇರುವ ಕೃಷ್ಣರಾಜಪೇಟೆ ತಾಲ್ಲೂಕಿನ ಒಳಗೆ ಸುತ್ತು ಹಾಕುವ ಕುತೂಹಲವುಳ್ಳವರು ಓದಬೇಕಾದ ಕೃತಿ.

ಕೃತಿ: ಕೃಷ್ಣರಾಜಪೇಟೆ ತಾಲ್ಲೂಕು ಮಹಾದರ್ಶನ

ADVERTISEMENT

ಲೇ: ಬಲ್ಲೇನಹಳ್ಳಿ ಮಂಜುನಾಥ್‌

ಪ್ರ: ಮಣಿ ಪ್ರಕಾಶನ ಮೈಸೂರು

ಬೆಲೆ: ₹ 650

ಪುಟಗಳು: 592

ಸಂಪರ್ಕ: 96865 35465

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.