ADVERTISEMENT

ಪ್ರೇಮಭಾಷೆ ಧ್ವನಿಸುವ ಕವಿತೆಗಳು

​ಪ್ರಜಾವಾಣಿ ವಾರ್ತೆ
Published 9 ಮೇ 2020, 19:30 IST
Last Updated 9 ಮೇ 2020, 19:30 IST
   

ಅಮೃತಾ ಪ್ರೀತಮ್‌ ಅವರ ‘ಚುನಿ ಹುಯೀ ಕವಿತಾಯೇಂ’ ಕವನ ಸಂಕಲನದ 65 ಕವಿತೆಗಳು ಮತ್ತು ಅವರ ಬಹು ಪ್ರಸಿದ್ಧ ಕವಿತೆ ‘ಮೈ ತೆನೊ ಫಿರ್‌ ಮಿಲಾಂಗಿ’ (ನಾ ನಿನಗೆ ಮತ್ತೆ ಸಿಗುವೆ) ಸೇರಿ ಇದರಲ್ಲಿ 66 ಕವಿತೆಗಳಿವೆ. ಎಲ್ಲವೂ ಪುಟ್ಟಪುಟ್ಟ ಕವಿತೆಗಳೇ, ಆದರೆ, ಅವು ಸ್ಫುರಿಸುವ ಭಾವಾರ್ಥದ ವ್ಯಾಪ್ತಿ ಮಾತ್ರ ವಿಶಾಲವಾದುದು. ಕವಯತ್ರಿ ಮತ್ತು ಕವಿತೆಗಳ ಮೂಲ ಆಶಯಕ್ಕೆ ಚ್ಯುತಿಯಾಗದಂತೆ ಲೇಖಕಿ ಈ ಎಲ್ಲ ಕವಿತೆಗಳನ್ನು ಕನ್ನಡೀಕರಿಸಿದ್ದಾರೆ.

ಅಮೃತಾ ಅವರ ಬಹುತೇಕ ಎಲ್ಲ ಕವಿತೆಗಳು ಪ್ರೇಮಭಾಷೆ ಮತ್ತು ಮನುಷ್ಯತ್ವವನ್ನು ಧ್ವನಿಸುತ್ತವೆ. ಹೆಣ್ಣಿನ ನೂರೆಂಟು ನೋವುಗಳ ಪ್ರತಿಮೆಗಳನ್ನು ಇದರಲ್ಲಿ ಕಡೆದಿಟ್ಟಿದ್ದಾರೆ. ಬಹಳಷ್ಟು ಕವಿತೆಗಳು ಸ್ತ್ರೀಸಂವೇದನೆಯನ್ನೂ ಉದ್ದೀಪಿಸುತ್ತವೆ. ಕವಿತೆಗಳಲ್ಲಿ ಬಳಕೆಯಾಗಿರುವ ಹೊಸ ರೂಪಕಗಳು ಮತ್ತು ನವನವೀನ ಪರಿಕರಗಳು ಓದನ್ನು ಆಪ್ತಗೊಳಿಸುತ್ತವೆ. ಈ ಕವಿತೆಗಳನ್ನು ಓದುವಾಗ ಬದುಕೆಂದರೇ ಇಷ್ಟೇ, ಅದನ್ನು ಬದುಕಿರುವಾಗ ಸಾರ್ಥಕಪಡಿಸಿಕೊಳ್ಳಿ ಎನ್ನುವ ಕಿವಿಮಾತನ್ನೂ ಪಿಸುದನಿಯಲ್ಲಿ ಹೇಳಿದಂತೆ ಭಾಸವಾಗುತ್ತದೆ. ಹಾಗೆಯೇ ಪಂಜಾಬಿಗರ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ ಅರಿಯುವಲ್ಲೂ ಅಮೃತಾರವರ ಈ ಕವಿತೆಗಳು ದೀವಟಿಗೆಯಂತೆ ಕಾಣಿಸುತ್ತವೆ.

ಬಾ ಇಂದಾದರೂ ಮಾತಾಡೋಣ
(ಅಮೃತಾ ಪ್ರೀತಮ್‌ ಕವಿತೆಗಳು)
ಲೇ: ರೇಣುಕಾ ನಿಡಗುಂದಿ
ಪ್ರ: ಪಲ್ಲವ ಪ್ರಕಾಶನ
ಮೊ: 94803 53507

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.