ADVERTISEMENT

ಅಷ್ಟ ನೃತ್ಯಗಳ ಮೋಹಕ ಹಬ್ಬ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 19:30 IST
Last Updated 14 ಮಾರ್ಚ್ 2011, 19:30 IST
ಅಷ್ಟ ನೃತ್ಯಗಳ ಮೋಹಕ ಹಬ್ಬ
ಅಷ್ಟ ನೃತ್ಯಗಳ ಮೋಹಕ ಹಬ್ಬ   

ನಾಟ್ಯ ಸರಸ್ವತಿ ಸಂಸ್ಥೆಯ ನೃತ್ಯಭಾರತಿ ನಾಟ್ಯ ಹಬ್ಬ ಮಲ್ಲೇಶ್ವರದ ಸೇವಾಸದನದಲ್ಲಿ ನಡೆಯಿತು. 8 ವಿಧದ ನೃತ್ಯ ಶೈಲಿಗಳ ಪ್ರದರ್ಶನದ ಈ ಹಬ್ಬದ ವಿಶೇಷ. ದಂತ ವೈದ್ಯೆ ಮತ್ತು ನೃತ್ಯಪಟು ಡಾ. ಸರಸ್ವತಿ ರಜತೇಶ್ ಅವರು ಸುಮಾರು 15 ವರ್ಷಗಳ ಹಿಂದೆ ಸ್ಥಾಪಿಸಿದ ‘ನಾಟ್ಯ ಸರಸ್ವತಿ’ ಬೇರೆ ಬೇರೆ ರಾಜ್ಯದಲ್ಲಿ ನೃತ್ಯಭಾರತಿ ನಾಟ್ಯ ಹಬ್ಬ ಆಯೋಜಿಸುತ್ತಿದೆ.

ಈ ಸಲದ ಹಬ್ಬದಲ್ಲಿ ಜಯಂತಿ ಮುಖರ್ಜಿ (ಕಥಕ್), ಬಾಲಾ ತ್ರಿಪುರ ಸುಂದರಿ (ಕೂಚಿಪುಡಿ), ಸೌಮ್ಯ ಬೋಸ್ (ಒಡಿಸ್ಸಿ), ದಿವ್ಯಾ (ಮೋಹಿನಿಆಟ್ಟಂ), ದೆಬಾಂಜಲಿ ಬಿಸ್ವಾಸ್ (ಮಣಿಪುರಿ), ಶಿಲ್ಪಾ (ಭರತನಾಟ್ಯ) ಮೃದುಸ್ಮಿತಾ (ಸತ್ರಿಯಾ), ಪ್ರಬಲ್ ಗುಪ್ತಾ (ಕಥಕ್ಕಳಿ) ವಿವಿಧ ನೃತ್ಯ ಪ್ರಕಾರಗಳನ್ನು ಸುಂದರವಾಗಿ ಪ್ರದರ್ಶಿಸಿದರು.

ನಾಟ್ಯ ಸರಸ್ವತಿ ತಂಡದ ದಿವ್ಯ, ನೇಹಾ, ಶಮಿತಾ, ವೈಷ್ಣಮಿ ಮತ್ತು ಅಂಜನ ಅವರ ಶಿವ ತಾಂಡವ ನೃತ್ಯ ಅದ್ಭುತವಾಗಿತ್ತು. ಕೊನೆಯಲ್ಲಿ ಎಲ್ಲ 8 ನೃತ್ಯ ಶೈಲಿಗಳ ಕಲಾವಿದರು ‘ವಂದೇ ಮಾತರಂ’ ಗೀತೆಗೆ ಸಾದರ ಪಡಿಸಿದ ಫ್ಯೂಷನ್ ನೃತ್ಯ ಆಕರ್ಷಕವಾಗಿತ್ತು. ಸೃಷ್ಟಿ ಡ್ಯಾನ್ಸ್‌ನ ಸತ್ಯನಾರಾಯಣ, ಮಾಜಿ ಸಚಿವ ರೇವಣ್ಣ, ಕೂಚಿಪುಡಿ ಗುರು ವೇದಾಂತಂ ರಾಮು, ಕಲಾತಜ್ಞ ಅಶಿಶ್ ಮೋಹನ್ ಕೋಚರ್, ಗುರು ಲಲಿತಾ ಶ್ರೀನಿವಾಸನ್, ಶ್ರೀದೇವಿ ಉನ್ನಿ ಮತ್ತು ವೇಣುಗೋಪಾಲ್, ಸಂಸ್ಥೆ ಸಂಸ್ಥಾಪಕಿ ಡಾ. ಸರಸ್ವತಿ ರಜತೇಶ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.