ADVERTISEMENT

`ಜೀವನದ ಮೂಲತತ್ವ' ವಿಶಿಷ್ಟ ನೃತ್ಯ ರೂಪಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2013, 19:59 IST
Last Updated 20 ಫೆಬ್ರುವರಿ 2013, 19:59 IST
`ಜೀವನದ ಮೂಲತತ್ವ' ವಿಶಿಷ್ಟ ನೃತ್ಯ ರೂಪಕ
`ಜೀವನದ ಮೂಲತತ್ವ' ವಿಶಿಷ್ಟ ನೃತ್ಯ ರೂಪಕ   

ಡೆಗಾ ಆರ್ಟ್ಸ್ ಸಂಸ್ಥೆಯು ಜಿಡ್ಡು ಕೃಷ್ಣಮೂರ್ತಿ ಅವರ ಬೊಧನೆಗಳಿಂದ ಪ್ರೇರೇಪಿತಗೊಂಡ ಸಂಗೀತ ಹಾಗೂ ನೃತ್ಯ ಕ್ರಾಂತಿ `ಜೀವನದ ಮೂಲತತ್ವ' ಕಾರ್ಯಕ್ರಮವನ್ನು ಗುರುವಾರ (ಫೆ.22) ನಗರದಲ್ಲಿ ಆಯೋಜಿಸಿದೆ.  ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕಲಾವಿದೆಯರು ಕಾರ್ಯಕ್ರಮ ನೀಡಲಿದ್ದು ವಿವಿಧ ಪರಂಪರೆಯ ನೃತ್ಯವನ್ನು ಪ್ರದರ್ಶಿಸಲಿದ್ದಾರೆ.

ಜನಪ್ರಿಯ ಕಲಾವಿದೆಯರಾದ ಪಾಲಿ ಚಂದ್ರ (ಕಥಕ್), ಜಪಾನ್‌ನ ಮಸಾಕೊ ಒನೊ (ಒಡಿಸ್ಸಿ), ರಶ್ಮಿ ಮೆನನ್ (ಮೋಹಿನಿಯಾಟ್ಟಂ), ಸ್ಮಿತಾ ಮಾಧವ್,  ವೈಜಯಂತಿ ಕಾಶಿ, ಪ್ರತೀಕ್ಷಾ ಕಾಶಿ (ಭರತನಾಟ್ಯ) ಭಾಗವಹಿಸಲಿದ್ದಾರೆ. `ಜೀವನದ ಮೂಲತತ್ವ'ದ ಈ ನೃತ್ಯ ರೂಪಕಗಳು ಜೀವನದ ಪ್ರಮುಖ ಅಸ್ತಿತ್ವ, ಕಷ್ಟಗಳಿಗೆ ಕಾರಣ ಹಾಗೂ  ನಮ್ಮ ಕೈಯಲ್ಲೇ ಅದರ ಪರಿಹಾರ ಎಂಬ ಸಂದೇಶಗಳನ್ನು ನಿರೂಪಿಸುತ್ತವೆ. ಬಿ. ಶಿವರಾಮಕೃಷ್ಣ ಹಾಗೂ ಡಿ.ಎ. ಶ್ರೀನಿವಾಸ್ ಅವರ ಸಂಗೀತ ಸಂಯೋಜನೆಯ ಗೀತೆಗಳನ್ನು ಹರಿಹರನ್ ಹಾಗೂ ಶರತ್ ಹಾಡಿದ್ದಾರೆ. 

ಸ್ಥಳ: ಚೌಡಯ್ಯ ಮೆಮೋರಿಯಲ್ ಹಾಲ್, ವೈಯಾಲಿಕಾವಲ್, ಮಲ್ಲೇಶ್ವರ. ಸಂಜೆ 6. ಟಿಕೆಟ್ ದರ ಮತ್ತಿತರ ಮಾಹಿತಿಗೆ ಸಂಪರ್ಕಿಸಿ: 99801 88938/ 96204 14904

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.