ADVERTISEMENT

15 ವರ್ಷಗಳ ಕಠಿಣ ಪರಿಶ್ರಮ: ಭರತನಾಟ್ಯ ರಂಗಪ್ರವೇಶ ಮಾಡಿದ ಅನನ್ಯಾ ಭಟ್‌

ರಾಘವೇಂದ್ರ ಭಟ್ಟ
Published 30 ಅಕ್ಟೋಬರ್ 2025, 11:03 IST
Last Updated 30 ಅಕ್ಟೋಬರ್ 2025, 11:03 IST
<div class="paragraphs"><p>ಅನನ್ಯಾ ಭಟ್‌ </p></div>

ಅನನ್ಯಾ ಭಟ್‌

   

ರಂಗಪ್ರವೇಶವು ಭರತನಾಟ್ಯ ನೃತ್ಯಗಾತಿಯೊಬ್ಬಳ ಔಪಚಾರಿಕ ಚೊಚ್ಚಲ ಪ್ರವೇಶವಾಗಿದ್ದು, ಶಾಸ್ತ್ರೀಯ ಕಲಾಪ್ರಕಾರದ ಕುರಿತು ಹಲವು ವರ್ಷಗಳ ಶಿಸ್ತುಬದ್ಧ ತರಬೇತಿ ಮತ್ತು ಭಕ್ತಿಯ ಪರಾಕಾಷ್ಠೆಯನ್ನು ಸೂಚಿಸುತ್ತದೆ. ಸಾಂಪ್ರದಾಯಿಕ ಮಾರ್ಗಂನಲ್ಲಿ ಹೇಳಿರುವಂತೆ ಇದು ನೃತ್ಯಗಾತಿಯೊಬ್ಬಳ ನೃತ್ಯ (ಶುದ್ಧ ನೃತ್ಯ) ಮತ್ತು ಅಭಿನಯ (ಅಭಿವ್ಯಕ್ತಿ)ದ ಮೇಲೆ ಪಾಂಡಿತ್ಯವನ್ನು ಪ್ರದರ್ಶಿಸುತ್ತದೆ.

ಅನನ್ಯಾ ಭಟ್‌

ADVERTISEMENT

ಅಕ್ಟೋಬರ್ 25, 2025ರ ಶನಿವಾರದಂದು ಮಲ್ಲೇಶ್ವರದ ಸೇವಾ ಸದನದಲ್ಲಿ ಹೆಸರಾಂತ ಹಿರಿಯ ನೃತ್ಯಗಾತಿ ವಿದುಷಿ ಶಮಾ ಕೃಷ್ಣ ಅವರ ಶಿಷ್ಯ 23 ವರ್ಷದ ಅನನ್ಯಾ ಭಟ್, ತಮ್ಮ ಹದಿನೈದು ವರ್ಷಗಳ ಕಠಿಣ ತರಬೇತಿಯನ್ನು ಪ್ರತಿಬಿಂಬಿಸುವ ಪ್ರಭಾವಶಾಲಿ ರಂಗಪ್ರವೇಶವನ್ನು ಮಾಡಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ನಂದಿನಿ.ಕೆ ಮೆಪ್ತಾ ಮತ್ತು ವಿದ್ವಾನ್ ಶ್ರೀ ಶೇಷಾದ್ರಿ ಅಯ್ಯಂಗಾರ್ ಸೇರಿದಂತೆ ಭಾರತೀಯ ಶಾಸ್ತ್ರೀಯ ನೃತ್ಯಲೋಕದ ದಿಗ್ಗಜರು ಭಾಗವಹಿಸಿದ್ದು, ಯುವನರ್ತಕಿಯ ಸಮತೋಲನ ಮತ್ತು ಪ್ರಬುದ್ಧತೆಯನ್ನು ಶ್ಲಾಘಿಸಿದರು.

ಎರಡೂವರೆ ಗಂಟೆಗಳ ಕಾಲ ನಡೆದ ಈ ಪ್ರದರ್ಶನವು ಆಕರ್ಷಕ ಪುಷ್ಪಾಂಜಲಿಯೊಂದಿಗೆ ಪ್ರಾರಂಭವಾಯಿತು. ತದನಂತರ ಕಲಾಸರಸ್ವತಿ ಶಾರದೆಯ ಕುರಿತು ಕೀರ್ತನೆ, ಸಂಕೀರ್ಣ ಜತಿಸ್ವರದಲ್ಲಿ ಸ್ತ್ರೀಯ 3 ಹಂತಗಳಾದ ಬಾಲ್ಯ, ಯೌವನ ಹಾಗೂ ಗೃಹಿಣಿಯಾಗಿ ಬದಲಾವಣೆ, ಸುಬ್ಬುಡು ವಿರಚಿತ ವರ್ಣಂ, ಓಂಕಾರ, ತಾಯಿಯ ವಾತ್ಸಲ್ಯ ಪ್ರದರ್ಶಿಸುವ ದೇವರನಾಮವನ್ನು ಹಾಗೂ ಕೊನೆಯದಾಗಿ ಉತ್ಸಾಹಭರಿತ ತಿಲ್ಲಾನವನ್ನು ಭಾವಪೂರ್ಣವಾಗಿ ಪ್ರದರ್ಶಿಸಿದರು. ಸ್ತ್ರೀ ವ್ಯಕ್ತಿತ್ವದ ಗೌರವ ಸೂಚಕವಾಗಿ ‘ಬಹುಮುಖಿ’ ವಿಷಯಾಧಾರಿತ ಪ್ರದರ್ಶನವು ಕುಮಾರಿ ಅನನ್ಯಾ ಅವರ ಲಯ, ಅಭಿನಯ ಮತ್ತು ಪ್ರಸ್ತುತಿಯ ಮೇಲಿನ ಹಿಡಿತವನ್ನು ಬಹಿರಂಗಪಡಿಸಿತು.

ಅನನ್ಯಾ ಭಟ್‌

ಹಿಮ್ಮೇಳದಲ್ಲಿ ನೃತ್ಯಗುರು ವಿದುಷಿ ಶ್ರೀಮತಿ ಶಮಾ ಕೃಷ್ಣ ನಟುವಾಂಗ, ಗಾಯನದಲ್ಲಿ ವಿದ್ವಾನ್ ಶ್ರೀ ಅಭಿಷೇಕ ಶ್ರೀಧರ್, ಮೃದಂಗದಲ್ಲಿ ವಿದ್ವಾನ್ ಶ್ರೀ ಕಾರ್ತಿಕ್ ವೈಧಾತ್ರಿ, ಕೊಳಲಿನಲ್ಲಿ ವಿದ್ವಾನ್ ಶ್ರೀ ಮಹೇಶ ಸ್ವಾಮಿ, ವೀಣೆಯಲ್ಲಿ ವಿದ್ವಾನ್ ಶ್ರೀ ಶಂಕರರಾಮನ್ ಹಾಗೂ ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಶ್ರೀ ಭಾರ್ಗವ ಹಾಲಂಬಿ ಇವರು ಪ್ರದರ್ಶನಕ್ಕೆ ಮೆರುಗು ತಂದರು.

ಸಂಜೆಯ ಕಾರ್ಯಕ್ರಮದ ಒಂದು ವಿಶಿಷ್ಟ ಲಕ್ಷಣವೆಂದರೆ, ತಿಲ್ಲಾನದಲ್ಲಿ ತರಂಗಂ ತಟ್ಟೆಯ ಮೇಲೆ ನೃತ್ಯ ಪ್ರದರ್ಶಿಸುವ ಮೂಲಕ ನೃತ್ಯಗುರು ವಿದುಷಿ ಶ್ರೀಮತಿ ಶಮಾ ಕೃಷ್ಣ ಇವರು ಹೊಸದೊಂದು ಪ್ರಯೋಗಕ್ಕೆ ನಾಂದಿಹಾಡಿದರು. ಇವೆಲ್ಲವೂ ಅನನ್ಯಾ ಅವರ ಬಹುಮುಖಿ ಪ್ರತಿಭೆ ಮತ್ತು ನೃತ್ಯ ಗುರುಗಳ ಸೃಜನಶೀಲ ದೃಷ್ಟಿ ಎರಡನ್ನೂ ಪ್ರದರ್ಶಿಸುತ್ತದೆ.

ಅನನ್ಯಾಳ ಚೊಚ್ಚಲ ಪ್ರವೇಶವು ಅವರ ಅದ್ಭುತ ಪ್ರತಿಭೆ, ಪಾಂಡಿತ್ಯ ಹಾಗೂ ಪ್ರದರ್ಶನದ ಅಭಿವ್ಯಕ್ತಿಯಾಗಿದ್ದು, ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಮನಸೂರೆಗೈದರು ಹಾಗೂ ಈ ನರ್ತನವು ಭರತನಾಟ್ಯ ಕಲೆಯಲ್ಲಿ ಒಂದು ಉಜ್ವಲ ಪ್ರಯಾಣದ ಭರವಸೆ ನೀಡುವ ಶುಭ ಆರಂಭವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.