ಬೆಂಗಳೂರು: ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಫೇಸ್‌ಬುಕ್ ಮೂಲಕ 'ಪ್ರಜಾವಾಣಿ ನಾಡ ಹಬ್ಬ 2020' ಅನಾವರಣಗೊಳ್ಳಲಿದ್ದು, ಇಂದು ಮನಸ್ಸು ಹಗುರಾಗಿಸುವ ಸಾಹಿತ್ಯ-ಸಂಗೀತ-ನೃತ್ಯಗಳ ಸಮ್ಮಿಲನ - ಕನ್ನಡ ಕಾವ್ಯ ನರ್ತನ ಕಾರ್ಯಕ್ರಮ ನಡೆಯುತ್ತಿದೆ.
ಸಂಜೆ 7 ಗಂಟೆಯಿಂದ 8ಗಂಟೆವರೆಗೆ ‘ಸಮನ್ವಯ ಡ್ಯಾನ್ಸ್ ಕಂಪನಿ’ ಅರ್ಪಿಸುವ ಡಾ.ವೀಣಾಮೂರ್ತಿ ವಿಜಯ್ ಸಂಯೋಜನೆಯ ‘ಕೂಚುಪುಡಿ ಕಾವ್ಯ ವೈಭವಂ’ ಕಾರ್ಯಕ್ರಮ ನಡೆಯುತ್ತಿದೆ.
ಜಯಚಾಮರಾಜೇಂದ್ರ ಒಡೆಯರ್, ಅಲ್ಲಮ ಪ್ರಭು, ಅಕ್ಕಮಹಾದೇವಿ, ಪುರಂದರದಾಸರು, ಕನಕದಾಸರು ಹಾಗೂ ಡಿ.ವಿ.ಜಿ. ಕೃತಿಗಳಿಗೆ ಕಾವ್ಯನರ್ತನ ನಡೆಸಿಕೊಡುತ್ತಿದ್ದಾರೆ.
Live ವೀಕ್ಷಿಸಲು ಲಿಂಕ್: fb.com/prajavani.net
ಇಲ್ಲಿಯೂ ವೀಕ್ಷಿಸಬಹುದು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.