ಬೆಂಗಳೂರಿನ ರಾಜಾಜಿನಗರ 2ನೇ ಹಂತದಲ್ಲಿರುವ ಶಿವಶಕ್ತಿ ನೃತ್ಯ ಶಾಲೆ ಸ್ಥಾಪನೆಯಾಗಿ 25 ವರ್ಷಗಳು ತುಂಬಿರುವ ಪ್ರಯುಕ್ತ ರಜತ ಮಹೋತ್ಸವ ಸಮಾರಂಭವನ್ನು ಇದೇ ಏಪ್ರಿಲ್ 25ರಂದು ಶುಕ್ರವಾರ ಸಂಜೆ 5 ಗಂಟೆಗೆ ಆಯೋಜಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಡಾ. ಸಿ.ಎನ್.ಅಶ್ವಥ್ ನಾರಾಯಣ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ವಿಧಾನ ಪರಿಷತ್ತಿನ ಸದಸ್ಯರಾದ ಡಿ.ಟ.ಶ್ರೀನಿವಾಸ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಚಲನಚಿತ್ರ ನಿರ್ಮಾಪಕರಾದ ಡಿ.ಸುರೇಶ್ ಗೌಡ , ಹಿರಿಯ ಪತ್ರಕರ್ತರಾದ ಎಸ್.ಆರ್. ಆರಾಧ್ಯ ಉಪಸ್ಥಿತರಿರುವರು.
ಕಲಾಯೋಗಿ ಗುರು ಪುಲಿಕೇಶಿ ಕಸ್ತೂರಿ, ಸಂಸ್ಕೃತಿ ಚಿಂತಕರಾದ ಪ್ರೊ. ಎಂ. ಕೃಷ್ಣೇಗೌಡ ಹಾಗೂ ಕಲಾ ನಿರ್ದೇಶಕರಾದ ವಿದ್ವಾನ್ ಹರೀಶ್ ರಾಮನ್ ಭಾಗವಹಿಸಲಿದ್ದಾರೆ. ಶಿವಶಕ್ತಿ ನೃತ್ಯ ಶಾಲೆಯ ಸಂಸ್ಥಾಪಕ ನಿರ್ದೇಶಕರಾ ಕೆ.ಆರ್.ಗುಣವತಿ ಅವರ ಶಿಷ್ಯ ವೃಂದದಿಂದ ಶಿವನಾಮಾಮೃತ ನೃತ್ಯ ರೂಪಕ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.