ADVERTISEMENT

ಉರ್ದು ಕವಿ ಕೈಫಿ ಅಜ್ಮಿ ಜನ್ಮ ದಿನಕ್ಕೆ ಗೂಗಲ್‌ ಡೂಡಲ್‌ ಗೌರವ

ಏಜೆನ್ಸೀಸ್
Published 14 ಜನವರಿ 2020, 6:23 IST
Last Updated 14 ಜನವರಿ 2020, 6:23 IST
ಕೈಫಿ ಅಜ್ಮಿ ಅವರ ಜನ್ಮದಿನದ ಅಂಗವಾಗಿ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಲಾಗಿದೆ.
ಕೈಫಿ ಅಜ್ಮಿ ಅವರ ಜನ್ಮದಿನದ ಅಂಗವಾಗಿ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಲಾಗಿದೆ.   

ನವದೆಹಲಿ: ಖ್ಯಾತ ಉರ್ದು ಕವಿ, ಚಲನಚಿತ್ರ ಗೀತರಚನೆಕಾರ ಕೈಫಿ ಅಜ್ಮಿ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.

ಕೈಫಿ ಅಜ್ಮಿ1919ರಲ್ಲಿ ಉತ್ತರ ಪ್ರದೇಶದ ಅಜಮ್‌ಗಡ ಜಿಲ್ಲೆಯಲ್ಲಿ ಜನಿಸಿದರು. ಇವರುಉರ್ದು ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

1951ರಲ್ಲಿ ತೆರೆಕಂಡ ಶಹೀದ್‌ ಲತೀಫ್‌ ನಿರ್ದೇಶನದ ‘ಬುಜ್ದಿಲ್‌’ ಚಿತ್ರಕ್ಕೆ ಮೊದಲ ಬಾರಿಗೆ ಸಾಹಿತ್ಯ ಬರೆದಿದ್ದರು. ಇದಕ್ಕೂ ಮೊದಲು ನಿರ್ದೇಶಕ ನನುಭಾಯ್‌ ವಾಕಿಲ್‌ ಅವರ ‘ಯಾಹೂದಿ ಕಿ ಬೇಟಿ’ (1956), ಪರ್ವಿನ್‌ (1957), ಮಿಸ್‌ ಪಂಜಾಬ್‌ ಮೇಲ್‌ (1958) ಮತ್ತು ಇಡ್‌ ಕಾ ಚಂದ್‌ (1958) ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ.

ADVERTISEMENT

ನಿರ್ದೇಶಕ ಖ್ವಾಜಾ ಅಹ್ಮದ್‌ ಅಬ್ಬಾಸ್ ಮತ್ತು ಬಿಮಲ್ ರಾಯ್ ಅವರಂತಹ ನಿರ್ದೇಶಕರು 'ಹೊಸ ಸಿನಿಮಾ' ರಚಿಸಲು ಶ್ರಮಿಸುತ್ತಿದ್ದರೆ, ಇತ್ತ ಸಾಹಿರ್‌ ಲುಧಿಯಾನ್ವಿ, ಜಾನ್ ನಿಸಾರ್ ಅಖ್ತರ್ ಹಾಗೂ ಕೈಫಿಯಂತಹ ಲೇಖಕರು ಹಿಂದಿ ಚಲನಚಿತ್ರ ಹಾಡಿನ ಸ್ವರ ಮತ್ತು ಶಬ್ದಕೋಶವನ್ನು ಬದಲಾಯಿಸಿ ಹಿಂದಿ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದರು.

ಕೈಫಿಯವರಿಗೆಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.