ADVERTISEMENT

ಮಕ್ಕಳ ಅಭ್ಯುದಯಕ್ಕಾಗಿ ಸಂಗೀತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 19:46 IST
Last Updated 11 ಜನವರಿ 2019, 19:46 IST
   

ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಮಕ್ಕಳ ‘ವಿದ್ಯಾರಣ್ಯ’ ಹಾಗೂ ಏಕ ಪೋಷಕರನ್ನು ಹೊಂದಿರುವ ಮಕ್ಕಳು ಇರುವ ‘ವಾತ್ಸಲ್ಯ’ ನಿಲಯಗಳ ಅಭ್ಯುದಯಕ್ಕಾಗಿ ನಗರದಲ್ಲಿ ಶನಿವಾರ ’ಅನ್‌ಮೋಲ್‌ ಮೋಥಿಯಾ’ಸಂಗೀತ ಕಾರ್ಯಕ್ರಮ ನಡೆಯಲಿದೆ.

ಚರಾಗ್‌ ವಿಷನ್‌ನ ರಾಜೀವ್ ಕುಲಕರ್ಣಿ ಹಾಗೂ ಚಂದ್ರಿಕಾ ರಾವ್‌ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಬಡ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

ಹಿಂದಿ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿರುವ ಗಾಯಕ, ಗಾಯಕಿಯರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕದವರಾದ ಸಮನ್ವಿತಾ ಶರ್ಮಾ, ಶ್ರುತಿ ಭಿಡೆ, ಮನೋಜ್‌ ವಸಿಷ್ಠ, ಅರುಂಧತಿ ವಸಿಷ್ಠ, ಅನಿಕೇತ್‌ ಪ್ರಭಾ, ಲಾಲಿತ್ಯಾ ಅವನೇಕರ್‌ ಹಾಡಲಿದ್ದಾರೆ.

ADVERTISEMENT

ದಯಾನಂದ್‌ ಸಾಗರ್‌ ಆಡಿಟೋರಿಯಂನಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಟಿಕೆಟ್‌ ಬೆಲೆ ₹500ರಿಂದ ಆರಂಭವಾಗುತ್ತದೆ.

ಸಂಪರ್ಕ ಸಂಖ್ಯೆ: 97398 20374

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.