ಮಲ್ಲೇಶ್ವರಂನ ಮೈಸೂರು ಶಿಕ್ಷಣ ಸಂಸ್ಥೆ(ಎಂಇಎಸ್) ಮತ್ತು ಸಪ್ತಕ್ ಸಹಭಾಗಿತ್ವದಲ್ಲಿ ಜುಲೈ 20ರಂದು ಶ್ರೀಮತಿ ಇಂದಿರಾ ಹಾಗೂ ನಾರಾಯಣದಾಸ್ ದತ್ತಿನಿಧಿ ಸಂಗೀತ ಕಛೇರಿ ಜರುಗಲಿದೆ.
ಕಾರ್ಯಕ್ರಮದಲ್ಲಿ ಗೀತಾ ಹೆಗ್ಡೆ ಮತ್ತು ವ್ಯಾಸಮೂರ್ತಿ ಕಟ್ಟಿಯವರ ಶಿಷ್ಯೆ ಮಾನಸ ಶಾಸ್ತ್ರಿಯವರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ರೂಪಕ್ ವೈದ್ಯ ಅವರು ತಬಲಾ, ಸೂರಜ್ ಉಪಾಧ್ಯಾಯ ಅವರು ಹಾರ್ಮೊನಿಯಂ ವಾದನ ಮಾಡಲಿದ್ದಾರೆ.
ಸಂಗೀತ ಮತ್ತು ಕೊಳಲು ಜುಗಲ್‌ಬಂಧಿಯಾಗಿ, ಬೆಂಗಳೂರಿನ ಅನಿರುದ್ದ್ ಐತಾಳ್ ಸಂಗೀತ ಕಛೇರಿ ಮಾಡಿದರೆ, ಅವರಿಗೆ ಮುಂಬೈನ ಕೊಳಲು ವಾದಕ ಎಸ್. ಆಕಾಶ್, ಬೆಂಗಳೂರಿನ ಸಾರಂಗಿ ವಾದಕ ಸರ್ಫರಾಜ್ ಖಾನ್, ಧಾರವಾಡದ ತಬಲಾ ವಾದಕ ಹೇಮಂತ್ ಜೋಷಿ ಸಾಥ್ ನೀಡಲಿದ್ದಾರೆ.
ಸಪ್ತಕ್‌ನ ಸಂಚಾಲಕ ಜಿ.ಎಸ್. ಹೆಗ್ಡೆ ಮತ್ತು ಅನುರಾಧ ಅವರು ಸಂಗೀತಾಸಕ್ತರಿಗೆ ಆಹ್ವಾಸಿದ್ದಾರೆ.
ಸ್ಥಳ: ಎಂಇಎಸ್ ಕಾಲೇಜಿನ ಹೊಸ ಸಭಾಂಗಣ, ಎಂಪಿಎಲ್ ಶಾಸ್ತ್ರಿ ರಸ್ತೆ, ಮಲ್ಲೇಶ್ವರಂ
ಸಮಯ: ಸಂಜೆ 5.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.