ಚಂದ್ರಿಕಾ ಟಂಡನ್
ಚಿತ್ರ ಕೃಪೆ: @chandrikatandon
ನವದೆಹಲಿ: ಭಾರತ ಮೂಲದ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ನ್ಯೂ ಏಜ್ ಆಲ್ಬಂ ವಿಭಾಗದಲ್ಲಿ ಟಂಡನ್ ಅವರ ‘ತ್ರಿವೇಣಿ’ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಲಾಸ್ ಏಂಜಲೀಸ್‌ನಲ್ಲಿ 67ನೇ ಅತಿ ದೊಡ್ಡ ಸಂಗೀತ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದೆ.
ಟಂಡನ್ ಅವರು ಪೆಪ್ಸಿ–ಕೋ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯಾಗಿದ್ದಾರೆ. ಟಂಡನ್ ತಮ್ಮ ಸಹ ಸಂಯೋಜಕರೊಂದಿಗೆ ಪ್ರಶಸ್ತಿ ಸ್ವೀಕರಿಸಿದ್ದಾರೆ.
‘ಸಂಗೀತವೆಂದರೆ ಪ್ರೀತಿ, ಸಂಗೀತವೇ ಬೆಳಕು, ಸಂಗೀತವೇ ನಗು. ಸಂಗೀತವನ್ನು ಆರಾಧಿಸುವ ಎಲ್ಲರಿಗೂ ಧನ್ಯವಾದಗಳು’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಟಂಡನ್ ಹೇಳಿದ್ದಾರೆ.
ಈ ಹಿಂದೆ ಟಂಡನ್ ಅವರು 2009ರಲ್ಲಿ ‘ಸೋಲ್ ಕಾಲ್’ ಎನ್ನುವ ಆಲ್ಬಂಗೆ ಮೊದಲನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದರು.
2024ರ ಆಗಸ್ಟ್ 30ರಂದು ತ್ರಿವೇಣಿ ಆಲ್ಬಂ ಬಿಡುಗಡೆಯಾಗಿದೆ. ಒಟ್ಟು ಏಳು ಹಾಡುಗಳ ಈ ಆಲ್ಬಂನಲ್ಲಿ, ಪ್ರತಿಯೊಂದು ಹಾಡು ಬೇರೆ ಬೇರೆ ಕಥೆಯನ್ನು ಹೇಳುತ್ತದೆ ಎಂದು ಟಂಡನ್ ಅವರ ತಂಡ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.