ADVERTISEMENT

ರಾಘಣ್ಣ ಅಪರೂಪದ ಗಾಯಕ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 20:00 IST
Last Updated 15 ಏಪ್ರಿಲ್ 2019, 20:00 IST
ಕೆಪಿಟಿಸಿಎಲ್ ಪದಾಧಿಕಾರಿಗಳ ಸಂಘದ ಬೆಳ್ಳಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಗಜಾನನ ಶರ್ಮಾ, ಗರ್ತಿಕೆರೆ ರಾಘಣ್ಣ, ಪೂರ್ಣಿಮಾ ಗೋಪಾಲ, ವಾಸುದೇವ ಕಾರಂತ, ವಿ.ಜಿ. ಪಂಡಿತ್, ಕೊಪ್ಪರಂ ಅನ್ನಪೂರ್ಣ ಪಾಲ್ಗೊಂಡಿದ್ದರು. 
ಕೆಪಿಟಿಸಿಎಲ್ ಪದಾಧಿಕಾರಿಗಳ ಸಂಘದ ಬೆಳ್ಳಿಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಗಜಾನನ ಶರ್ಮಾ, ಗರ್ತಿಕೆರೆ ರಾಘಣ್ಣ, ಪೂರ್ಣಿಮಾ ಗೋಪಾಲ, ವಾಸುದೇವ ಕಾರಂತ, ವಿ.ಜಿ. ಪಂಡಿತ್, ಕೊಪ್ಪರಂ ಅನ್ನಪೂರ್ಣ ಪಾಲ್ಗೊಂಡಿದ್ದರು.    

‘ಗ್ರಾಮೀಣ ಬದುಕಿನ ಚಿತ್ರಣ ನೀಡುತ್ತ, ಅನೇಕ ಖ್ಯಾತ ಸಂಗೀತಗಾರರಿಗೆ ಗುರುಸ್ವರೂಪರಾಗಿರುವ ಗರ್ತಿಕೆರೆ ರಾಘಣ್ಣನವರು ಸಂಗೀತಕ್ಕೆ ಹೊಸ ಶೈಲಿಯನ್ನೇ ನೀಡಿದ್ದಾರೆ. ಅವರೊಬ್ಬ ಅಪರೂಪದ ಗಾಯಕ’ ಎಂದು ಸಾಹಿತಿ ಗಜಾನನ ಶರ್ಮಾ ಹೇಳಿದರು.

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಈಚೆಗೆ ನಡೆದ ಸಾಹಿತ್ಯ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಾಗರ್ ಆಸ್ಪತ್ರೆಯ ಡಾ.ಕಲ್ಯಾಣಿ ಕರ್ಕರೆ ಅಪಸ್ಮಾರದ ಬಗ್ಗೆ ವಿವರವಾದ ಮಾಹಿತಿ ನೀಡಿದರು. ನಂತರ ಗರ್ತಿಕೆರೆ ರಾಘಣ್ಣ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಶಂಕರ ಕುಲಕರ್ಣಿ, ಹಾರ್ಮೋನಿಯಂನಲ್ಲಿ ವಸುಧೇಂದ್ರ ವೈದ್ಯ ಸಹಕರಿಸಿದರು.

ADVERTISEMENT

ಪತ್ರಕರ್ತ ಟಿ.ಎ.ಪಿ.ಶೆಣೈ,ಅನುವಾದಕಿ ಪೂರ್ಣಿಮಾ ಗೋಪಾಲ, ಕಾರ್ಯಕ್ರಮದ
ಸಂಘಟಕ ವಾಸುದೇವ ಕಾರಂತ, ಸಂಘದ ಮಾಜಿ ಅಧ್ಯಕ್ಷ ವಿ.ಜಿ.ಪಂಡಿತ್, ಕವಯತ್ರಿ ಕೊಪ್ಪರಂ ಅನ್ನಪೂರ್ಣ, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.