ADVERTISEMENT

ಲಾಕ್‌ಡೌನ್: ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಲಿದ್ದಾರೆ ಖ್ಯಾತ ಸಂಗೀತ ದಿಗ್ಗಜರು

‘ಸಂಗೀತ‘ ಆಲಿಸಿ: ವಿಶಿಷ್ಟ ವರ್ಚುವಲ್ ಮ್ಯೂಸಿಕ್ ಫೆಸ್ಟಿವಲ್

​ಪ್ರಜಾವಾಣಿ ವಾರ್ತೆ
Published 9 ಮೇ 2020, 2:34 IST
Last Updated 9 ಮೇ 2020, 2:34 IST
ರಿಕಿ ಕೇಜ್
ರಿಕಿ ಕೇಜ್   

ಕೊರೊನಾ ಸೋಂಕು – ಲಾಕ್‌ಡೌನ್‌ನಿಂದಾಗಿ ದಿನಗೂಲಿ ನೌಕರರು, ಸಂಗೀತ ಕಲಾವಿದರು ತೀವ್ರ ಸಂಕಷ್ಟದಲ್ಲಿದ್ದಾರೆ. ಇಂಥ ವರ್ಗದವರಿಗೆ ‘ಸಂಗೀತ ಸಂಜೆ’ ಮೂಲಕ ನೆರವಾಗುವುದಕ್ಕಾಗಿ ವಿಶ್ವದ ಖ್ಯಾತ ಸಂಗೀತ ದಿಗ್ಗಜರು ಮುಂದಾಗಿದ್ದಾರೆ.

‘ಕಾಮನ್‌ ರೂಟ್ಸ್‌ ವರ್ಚುವಲ್‌ ವೇದಿಕೆ’ ಎಂಬ ಆನ್‌ಲೈನ್ ಫ್ಲಾಟ್‌ಫಾರಂ ಮೂಲಕ ‘ವರ್ಚುವಲ್‌ ಮ್ಯೂಸಿಕ್‌ ಫೆಸ್ಟಿವಲ್‌’ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುತ್ತಿದ್ದಾರೆ.

ಈ ಮೂಲಕ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗಲು ನಿಧಿ ಸಂಗ್ರಹಿಸುತ್ತಿರುವ ‘ಗಿವ್‌ ಇಂಡಿಯಾ’, ಇಂಡಿಯಾ ಫಾರ್‌ ದಿ ಆರ್ಟ್ಸ್‌ ಮತ್ತುದಿ ವಾಯ್ಸ್ ಆಫ್ ಸ್ಟ್ರೇ ಡಾಗ್ಸ್ ಸಂಸ್ಥೆಗಳನ್ನು ಸಂಗೀತ ದಿಗ್ಗಜರು ಬೆಂಬಲಿಸುತ್ತಿದ್ದಾರೆ.

ADVERTISEMENT

ವಿಶ್ವದ ಬೇರೆ ಬೇರೆ ಭಾಗದಲ್ಲಿರುವ ಗಾಯಕರು ತಾವಿದ್ದಲ್ಲಿಂದಲೇ ಆನ್‌ಲೈನ್ ಮೂಲಕ ಗಾಯನ ಪ್ರಸ್ತುತಪಡಿಸುತ್ತಿದ್ದಾರೆ. ಈ ಮೂಲಕ ಸಮುದಾಯದೊಂದಿಗೆ ಸಂಗೀತಗಾರರನ್ನು ಬೆಸೆಯುವುದು ಮತ್ತು ಕೊರೊನಾ ಸಂತ್ರಸ್ತರಿಗೆ ನೆರವಾಗುವುದು ಈ ವೇದಿಕೆಯ ಉದ್ದೇಶ.

ಕಾಮನ್‌ರೂಟ್ಸ್‌ ವರ್ಚುವಲ್ ವೇದಿಕೆಯ ಸಂಗೀತ ದಿಗ್ಗಜರು

‘ಕಾಮನ್‌‌ರೂಟ್ಸ್‌ ವರ್ಚುವಲ್ ವೇದಿಕೆ’ಯಲ್ಲಿ ಕರ್ನಾಟಕದವರಾದ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ರಿಕಿ ಕೆಜ್; ಸಂಗೀತಗಾರ ರಘು ದೀಕ್ಷಿತ್, ಸೂಫಿ ಕಲಾವಿದ ಆಭಾ ಹಂಜುರಾ, ಅಂತರರಾಷ್ಟ್ರೀಯ ಖ್ಯಾತಿಯ ಸಿತಾರ್ ವಾದಕ ಉಸ್ತಾದ್ ಚೋಟೆ ರಹೀಮತ್ ಖಾನ್, ಜಾಝ್ ಮತ್ತು ಪಾಪ್ ಗಾಯಕ ಹಾಗೂ ಗೀತೆ ರಚನೆಕಾರ ಅಮ್ರಪಾಲಿ ಶಿಂಧೆ, ಖ್ಯಾತ ಗಾಯಕ, ಸಂಗೀತ ಸಂಯೋಜಕ, ಸಂಗೀತ ನಿರ್ದೇಶಕ ತ್ರಿಥಾ ಸಿನ್ಹಾ, ಆಸ್ಟ್ರೇಲಿಯಾದ ಸಂಗೀತಗಾರ ಅಲ್ ಪಾರ್ಕಿನ್ಸನ್, ಸಂಗೀತಗಾರ ಮತ್ತು ಚಲನಚಿತ್ರ ನಿರ್ಮಾಪಕ ಚೋಬಾ ಥಿಯಮ್ ಸೇರಿ 30 ಮಂದಿ ಸಂಗೀತ ದಿಗ್ಗಜರು ಹಾಡಲಿದ್ದಾರೆ.

ಕಾರ್ಯಕ್ರಮದಲ್ಲಿಜಾಝ್ ರಿದಮ್ & ಬ್ಲೂಸ್, ಸೂಫಿ ಮತ್ತು ಫ್ಯೂಷನ್‌ನಿಂದ ಹಿಡಿದು ರಾಕ್, ಇಂಡೀ ಕಲಾವಿದರು ಮತ್ತು ಬ್ಯಾಂಡ್‌ಗಳವರೆಗಿನ ಎಲ್ಲ ಪ್ರಕಾರಗಳ ಸಂಗೀತವೂ ಇರುತ್ತದೆ.

ಮೇ 9ರಂದು ಈ ಕಾಮನ್‌ ರೂಟ್ಸ್‌ ಆನ್‌ಲೈನ್‌ನಲ್ಲಿ ‘ಸಂಗೀತ ಸಂಜೆ’ ಆರಂಭವಾಗಲಿದೆ. ಮೇ ತಿಂಗಳ ಪೂರ್ತಿ, ಪ್ರತಿ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಸಂಗೀತ ಹಬ್ಬ ಆರಂಭವಾಗಲಿದೆ. ಪ್ರತಿ ಕಾರ್ಯಕ್ರಮದಲ್ಲೂ 30 ಗಾಯಕರು ಭಾಗವಹಿಸುತ್ತಾರೆ. ಪ್ರತಿ ಗಾಯಕರೂ 20ರಿಂದ 30 ನಿಮಿಷಗಳ ಕಾಲ ಗಾಯನ ಪ್ರಸ್ತುತಪಡಿಸುತ್ತಾರೆ. ಈ ಕಾರ್ಯಕ್ರಮವನ್ನು ಇನ್‌ಸ್ಟಾಗ್ರಾಂ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.

ವರ್ಚುವಲ್ ಮ್ಯೂಸಿಕ್ ಫೆಸ್ಟಿವಲ್‌ ಅನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿ, ಸಂಕಷ್ಟದಲ್ಲಿರುವ ದಿನಗೂಲಿ ನೌಕರರರು ಮತ್ತು ಕಲಾವಿದರಿಗೆ ನೆರವಾಗುತ್ತಿರುವ ಸಂಘಟನೆಗಳನ್ನು ಪ್ರೋತ್ಸಾಹಿಸಿ ಎಂಬುದು ಕಾಮನ್‌ ರೂಟ್ಸ್‌ ವರ್ಚುವಲ್ ವೇದಿಕೆಯ ಮನವಿ.

ನಿಧಿ ಸಂಗ್ರಹಣಾ ಸಂಸ್ಥೆ ಮಾಹಿತಿ: https://commonroots.giveindia.org ಮತ್ತುhttps:commonroots.in/ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಫೇಸ್‌ಬುಕ್:https://bit.ly/fb-cr-ss
ಇನ್‌ಸ್ಟಾಗ್ರಾಂ:www.instagram.com/ commonroots.in

ರಘುದೀಕ್ಷಿತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.