ADVERTISEMENT

ಸಂಗೀತ ವಿದುಷಿ ಶ್ಯಾಮಲಾ ಜಿ.ಭಾವೆ ನಿಧನ

​ಪ್ರಜಾವಾಣಿ ವಾರ್ತೆ
Published 22 ಮೇ 2020, 8:07 IST
Last Updated 22 ಮೇ 2020, 8:07 IST
ಉಭಯ ಗಾನ ವಿಶಾರದೆ ಶಾರದಾ ಜಿ.ಭಾವೆ
ಉಭಯ ಗಾನ ವಿಶಾರದೆ ಶಾರದಾ ಜಿ.ಭಾವೆ   
""
""
""
""
""
""
""
""
""
""
""
""
""

ಬೆಂಗಳೂರು:ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ಭಜನ್ ಮುಂತಾದ ಸಂಗೀತದ ಎಲ್ಲಾ ಪ್ರಾಕಾರಗಳಲ್ಲೂ ಅದ್ಭುತ ಗಾಯಕಿ, ಸಂಗೀತ ಸಂಯೋಜಕಿ, ಉಭಯ ಗಾನ ವಿಶಾರದೆ ಶಾಮಲಾ ಜಿ ಭಾವೆ ಇಂದು (ಮೇ 22,ಶುಕ್ರವಾರ)ಬೆಳಿಗ್ಗೆ 6.30ಕ್ಕೆ ನಿಧನರಾದರು.

ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರದವಿಧಿವಿಧಾನಗಳು ನಡೆಯಲಿವೆ. ಜನ ಸೇರುವುದಕ್ಕೆ ನಿರ್ಬಂಧವಿದೆ. ಅಭಿಮಾನಿಗಳು ಸಹಕರಿಸಬೇಕು ಎಂದು ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ.

ಶ್ಯಾಮಲಾ ಜಿ.ಭಾವೆ ಅವರ ಪಾರ್ಥಿವ ಶರೀರವನ್ನು ಸ್ವಗೃಹದಲ್ಲಿ ಇರಿಸಲಾಗಿದೆ.

ಉಭಯ ಗಾನ ವಿಶಾರದೆ ಶ್ಯಾಮಲಾ ಜಿ.ಭಾವೆ

ADVERTISEMENT

1941 ಮಾರ್ಚ್ 14 ರಂದು ಬೆಂಗಳೂರಿನಲ್ಲಿ ಶ್ಯಾಮಲಾ ಜಿ.ಭಾವೆ ಜನಿಸಿದರು. ತಂದೆ ಆಚಾರ್ಯ ಪಂಡಿತ್ ಗೋವಿಂದ್ ವಿಠಲ್ ಭಾವೆ, ತಾಯಿ ವಿದುಷಿ ಲಕ್ಷ್ಮಿ ಜಿ.ಭಾವೆ. ತಂದೆ ಗೋವಿಂದ ವಿಠಲ್ ಭಾವೆ 1930 ರಲ್ಲಿ ಶೇಷಾದ್ರಿಪುರದ ನೆಹರು ವೃತ್ತದಲ್ಲಿ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು.

1930ರಲ್ಲಿ 'ಅಮೆರಿಕನ್ ಕಾಲೋನಿ' ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶದಲ್ಲಿ ವಿದೇಶಿಯರೆ ವಾಸಿಸುತ್ತಿದ್ದರು. ಅನೇಕ ವರ್ಷಗಳ ನಂತರ ಶೇಷಾದ್ರಿಪುರ ಎಂದು ಹೆಸರಿಡಲಾಯಿತು.ಶಾಮಲಾ ಜಿ.ಭಾವೆ ಅವರು ಆರು ವರ್ಷದವರಿದ್ದಾಗಲೇ ಹಾಡುಗಾರಿಕೆ ಆರಂಭಿಸಿದರು.

ತಂದೆ ಗೋವಿಂದ್ ವಿಠಲ್ ಭಾವೆ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ವಿಷ್ಣು ದಿಗಂಬಾರ್ ಪಲುಸ್ಕರ್ ಅವರ ಬಳಿ ಅಭ್ಯಾಸ ಮಾಡಿದ್ದರು.ಗೋವಿಂದ್ ವಿಠಲ್ ಭಾವೆ ಸಂಗೀತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಪಲುಸ್ಕರ್ ಶುಲ್ಕ ಕೇಳಲಿಲ್ಲ, ತಮ್ಮ ವಿದ್ಯಾರ್ಥಿಗಳನ್ನು ದೇಶದವಿವಿಧ ಭಾಗಗಳಿಗೆ ಪ್ರಯಾಣಿಸಲು ಮತ್ತು ಹಿಂದೂಸ್ತಾನಿ ಸಂಗೀತಕ್ಕಾಗಿ ಶಾಲೆಯನ್ನು ಸ್ಥಾಪಿಸಲು ವಿನಂತಿಸಿದ್ದರು. ಗುರುಗಳ ಆಸೆಯಂತೆ ಗೋವಿಂದ್ ವಿಠಲ್ ಭಾವೆ ಅವರು ಸಂಗೀತ ಶಾಲೆ ಪ್ರಾರಂಭಿಸಿದರು.

ಅದೇ ಶಾಲೆಯಲ್ಲಿ ಶಾಮಲಾ ಜಿ ಭಾವೆ ಸಂಗೀತಾಭ್ಯಾಸ ಮಾಡಿದ್ದರು.ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತದಲ್ಲಿ ಶಾಮಲಾ ಜಿ ಭಾವೆ ಸಂಪೂರ್ಣ ಹಿಡಿತ ಸಾಧಿಸಿದರು. 1953ರ ವೇಳೆಗೆ ಶ್ಯಾಮಲಾ ಅವರು ತಂದೆಯ ಸಂಗೀತ ಶಾಲೆಯ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಹಿಂದೂಸ್ತಾನಿ ಸಂಗೀತದಲ್ಲಿ ಮುಳುಗಿರುವ ಕುಟುಂಬದಿಂದ ಬಂದ ಅವರು ಆರು ವರ್ಷದವರಿದ್ದಾಗಲೇ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದರು.

ಪ್ರಜಾವಾಣಿ ಸಂಗ್ರಹ ಚಿತ್ರಗಳಲ್ಲಿವಿದುಷಿಶ್ಯಾಮಲಾ ಜಿ.ಭಾವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.