ಪ್ರಾತಿನಿಧಿಕ ಚಿತ್ರ
ವಯೋಲಿನ್ ವಾದನ ಚತುರ ವಿದ್ವಾನ್ ಬಸವನಗುಡಿ ಜಿ.ನಾಗರಾಜ್ ಅವರ 80ನೇ ಜನ್ಮದಿನೋತ್ಸವ-ಸಂಸ್ಮರಣೆ ಪ್ರಯುಕ್ತ ವಿಶೇಷ ಸಂಗೀತ ಕಛೇರಿಯನ್ನು ಜುಲೈ 14ರಂದು ಭಾನುವಾರ ಆಯೋಜಿಸಲಾಗಿದೆ.
ಆವಾಹನ ಕಲ್ಚರಲ್ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿದ್ದು, ವಿದ್ವಾನ್ ಬಿ.ಯು. ಗಣೇಶ್ ಪ್ರಸಾದ್ ಮತ್ತು ವಿದ್ವಾನ್ ಬಿ.ಕೆ.ರಘು ಅವರಿಂದ ದ್ವಂದ್ವ ವಯೋಲಿನ್ ವಾದನವಿರಲಿದೆ. ವಿದ್ವಾನ್ ಅಮೃತ್ ಎನ್. ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಜಿ.ಓಂಕಾರ್ ಘಟಂನಲ್ಲಿ ಸಹಕರಿಸುವರು.
ಬಳಿಕ ಯದುಗಿರಿ ಮಠದ ಯತಿರಾಜ ನಾರಾಯಣ ರಾಮಾನುಜ ಜೀಯಾರ್ ಸ್ವಾಮೀಜಿ ಹಾಗೂ ಮೃದಂಗ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮಾ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
80ನೇ ವರ್ಷಕ್ಕೆ ಕಾಲಿರಿಸಿರುವ ಮೃದಂಗ ವಿದ್ವಾನ್ ಎಂ.ವಾಸುದೇವ ರಾವ್ ಹಾಗೂ ಸಂಗೀತ ಕ್ಷೇತ್ರದಲ್ಲಿ 80 ವರ್ಷ ಸೇವೆ ಸಲ್ಲಿಸಿರುವ ವಿದ್ವಾನ್ ಎ.ವಿ.ಆನಂದ್ ಅವರಿಗೆ ಗುರುವಂದನೆ ಹಮ್ಮಿಕೊಳ್ಳಲಾಗಿದೆ. ಸಂಗೀತಾಸಕ್ತರಿಗೆ ಮುಕ್ತ ಪ್ರವೇಶವಿದೆ ಎಂದು ಟ್ರಸ್ಟ್‌ನ ಅಮೃತ್ ಎನ್. ಮತ್ತು ಸಂಧ್ಯಾ ತಿಳಿಸಿದ್ದಾರೆ
ಕಾರ್ಯಕ್ರಮ ನಡೆಯುವ ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಬೆಳಿಗ್ಗೆ 9.45ರಿಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.