ADVERTISEMENT

'ಒಂದು ಕೊಲಾಜ್' ಮಕ್ಕಳ ಕವನ

ಡಾ.ಲಕ್ಷ್ಮಣ ವಿ.ಎ.
Published 7 ಸೆಪ್ಟೆಂಬರ್ 2019, 19:30 IST
Last Updated 7 ಸೆಪ್ಟೆಂಬರ್ 2019, 19:30 IST
ಕಲೆ: ವಿಜಯಕುಮಾರಿ ಆರ್.
ಕಲೆ: ವಿಜಯಕುಮಾರಿ ಆರ್.   

ಒಂದು ಕೊಲಾಜ್ ಪುಟ್ಟನು ಗೀಚಿದ
ಗೋಡೆಯ ಮೇಲಿನ ನದಿಯ
ಚಿತ್ರಕೆ
ಇರುವೆಗಳು ಸೇತುವೆ ಕಟ್ಟುತಿವೆ.

ಯೋಧನ ಹಸಿರು ಎಲೆ ಬಳ್ಳಿಯ
ಮಿಲಿಟರೀ ಯೂನಿಫಾರ್ಮಿನ ಮೇಲೆ
ಇದ್ದಕ್ಕಿದ್ದಂತೆ ಗುಲಾಬಿಯೊಂದು ಅರಳಿ
ನಿಂತಿದೆ

ಕಚ್ಚಾ ಬಾಂಬು ಹೊತ್ತೇ
ಬೆನ್ನು ಬಾಗಿದ ಜಿಹಾದಿ ಮಕ್ಕಳ
ಬೆನ್ನಿಗೆ ಹೂ ಹಗುರ
ಪಾಟೀ ಚೀಲ ನೇತಾಡಿದೆ

ADVERTISEMENT

ಜೈಲಿನ ದೊಡ್ಡ ಬಾಗಿಲುಗಳೆಲ್ಲಾ
ತೆರೆದು
ವೃದ್ಧಾಶ್ರಮದ ತಾಯಿ
ಮನೆಯ ದಾರಿ ತುಳಿದಿದ್ದಾಳೆ

ಬಣ್ಣ ಬಣ್ಣದ ಗಡಿ ರೇಖೆಗಳ
ಬರೆದ
ಕುಂಚವೊಂದು ನೀರಿನ ಬಟ್ಟಲಿನಲಿ
ಎಲ್ಲ ಬಣ್ಣಗಳ ತುಸು ತುಸುವೇ ಕರಗಿಸಿ

ಒಂದಾಗಿಸುತಿದೆ ಎಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.