ADVERTISEMENT

ಸವಿತಾ ನಾಗಭೂಷಣ ಅವರ ಕವಿತೆ: ತಕರಾರು

ಸವಿತಾ ನಾಗಭೂಷಣ್
Published 31 ಮಾರ್ಚ್ 2024, 12:40 IST
Last Updated 31 ಮಾರ್ಚ್ 2024, 12:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಒಂದಂಶ ಅಪ್ಪನದು ನನ್ನಲ್ಲಿದೆ
ನನ್ನಲ್ಲಿರುವ ಗಂಡು ಗುಣ ಅವನದೆ
ಹೆಮ್ಮೆ ನನಗೆ....
ಹಾಗೆ ಅವನ ದೂರಲಾರೆ!


ಒಂದಂಶ ನನ್ನದು ಮಗನಲ್ಲಿದೆ
ಅವನ ತಪ್ಪುಒಪ್ಪುಗಳಿಗೆ
ನನ್ನದೂ ಕೊಡುಗೆ ಇದೆ
ಅರೆ! ಒದ್ದರೂ ಮುದ್ದುಗರೆಯುವೆ!

ADVERTISEMENT


ಪಾಪ ಇವನು....ಕೈ ಹಿಡಿದವನು
ಹಿಂದುಳಿದರೆ ಅನುಮಾನ?
ಮುಂದೋಡಿದರೆ ಅವಮಾನ?
ಜತೆಗಿರು ಎನ್ನಲು ಬಿಗುಮಾನ!
ನನ್ನವನಾದರೂ ನನ್ನವನಲ್ಲವೆ?
ಬೆರೆತರೂ ಕಲೆತರೂ  ಭಿನ್ನಮತ, 
ಯಾಕೆ ಹೀಗೆ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.