ADVERTISEMENT

ನಾವು ಭಾರತೀಯರು

ಮೌಲಾಲಿ ಕೆ ಆಲಗೂರ ಸಿಂದಗಿ
Published 17 ಆಗಸ್ಟ್ 2019, 19:31 IST
Last Updated 17 ಆಗಸ್ಟ್ 2019, 19:31 IST
ಕಲೆ: ಶಿಲ್ಪಾ ಕಬ್ಬಿಣಕಂತಿ
ಕಲೆ: ಶಿಲ್ಪಾ ಕಬ್ಬಿಣಕಂತಿ   

ಮತ, ಪಥಗಳು ಬೇಡ ನಮಗೆ

ನಾವೆಲ್ಲರೂ ಭಾರತೀಯರು

ಹಿಂದು ಮುಸ್ಲಿಮ್ ಕ್ರೈಸ್ತ ಬೌದ್ಧ

ADVERTISEMENT

ಇಲ್ಲಿ ಸಕಲರೂ ಸಮಾನರು

ನೆಲ, ಕುಲ, ಭಾಷೆ, ಆಸೆ ಬೇರೆ

ಎನ್ನದಿರೋಣ ನಾವುಗಳು

ಭಗವಂತನ ದೃಷ್ಟಿಯಲ್ಲಿ ನಾವು

ಎಲ್ಲರೂ ಗಿಡದ ಹೂಗಳು

ಗೀತೆ ಪುರಾಣ ಕುರಾನ್ ಬೈಬಲ್

ಇವುಗಳ ಸಾರ ಒಂದೇ

ಶಾಂತಿ ಸಾಮರಸ್ಯದಿಂದ ಕೂಡಿ

ಬಾಳಬೇಕು ಮುಂದೆ

ಮಂದಿರ ಮಸೀದಿ ಚರ್ಚ್‌ಗಳು

ಶಾಂತಿ ನೆಮ್ಮದಿಯ ಧಾಮ

ಜಾತಿ ಧರ್ಮಗಳ ಹಂಗು ಇಲ್ಲ

ಸರ್ವ ಜನರ ಸಂಗಮ

ದಯೆ ಕರುಣೆ ತ್ಯಾಗ ಸ್ನೇಹ ಪ್ರೀತಿ

ಇದುವೇ ನಿಜ ಧರ್ಮ

ಸಹನೆ ತಾಳ್ಮೆ ಸಾಮರಸ್ಯದಿ ಕೂಡಿ

ಬಾಳುವುದೇ ಸತ್ಯ ಜನ್ಮ

ದೇಶದ ವಿಷಯ ಬಂದಾಗ ಜಗಳ

ಏನೇ ಇರಲಿ, ಒಗ್ಗಟ್ಟು ಬರಲಿ

ವಿಶ್ವವೇ ಗೆಲ್ಲುವ ಛಲ ಬಲ ಸದಾ

ಇರಲಿ ನಮ್ಮ ಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.