ನಮ್ಮಾತ್ಮಗಳೂ ಒಸರುತ್ತವೆ
ಸಬೂತು ತೋರಿಸುವುದೆಂತು
ಆತ್ಮಗಳಿಗೂ ಚಡ್ಡಿಯಿಲ್ಲ ನಿಮ್ಮಂತೆ
ನಾವು ತಾಯಂದಿರಲ್ಲಿ ಮಾತ್ರ ಹುಟ್ಟಿದವರು
ಯೋನಿರಸ ಜಿನುಗುತ್ತದೆ ಆಗಾಗ
ಮುಟ್ಟಿದಾಗ ಮುಟ್ಟದಾಗ
ಅಥವಾ ಆತ್ಮಕ್ಕೆ ಸುಳಿಗಾಳಿ ತಗುಲಿದಾಗ
ಬಣ್ಣವಿಲ್ಲ, ರುಚಿಯಿದೆ
ವಾಸನೆಯಲ್ಲ, ಶಕ್ತಿಯಿದೆ
ಭೂಮಿಯ ಹೊಟ್ಟೆಯೂ
ತಳಮಳಿಸಿ ಕಿಬ್ಬೊಟ್ಟೆಯ ಕೆಳಗೆ
ಮಾರಣಾಂತಿಕ ನೋವು
ಬೇರು ಬಿಟ್ಟು ಹಸಿರಾಗಿ ಹೂವಾಗಿ
ದುಂಬಿ ಮುಟ್ಟಿಸಿಕೊಂಡು
ಕಾಯಾಗಿ ಹಣ್ಣಾಗಿ
ಇಡೀ ಇಹದ ತುಂಬ
ಯೋನಿರಸ ಯೋನಿಬೀಜ ಯೋನಿತಂತು
ಓಡಿರಿ ಓಡಿರಿ
ದೂರ ದೂರ
ನಮ್ಮ ದೇವರುಗಳ ಬಿಡುತ್ತೇವೆ
ನಿಮ್ಮ ದೇವರುಗಳ ಮುಚ್ಚಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.