ಛಂದ ಪುಸ್ತಕ
ಬೆಂಗಳೂರು: ‘ಛಂದ ಪುಸ್ತಕ’ ಪ್ರಕಾಶನ, ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕೆ ಹಸ್ತಪ್ರತಿ ಆಹ್ವಾನಿಸಿದೆ.
ಈವರೆಗೆ ಕಥಾಸಂಕಲನ ಪ್ರಕಟಿಸದ ಲೇಖಕರಿಗೆ ಮಾತ್ರ ಅವಕಾಶ ಇದೆ. ಆದರೆ, ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳನ್ನು ಪ್ರಕಟಿಸಿದವರೂ ಹಸ್ತಪ್ರತಿ ಕಳುಹಿಸಬಹುದು. ಆಯ್ಕೆಯಾದ ಕಥೆಗಾರರಿಗೆ ₹40 ಸಾವಿರ ಬಹುಮಾನ ನೀಡಲಿದ್ದು, ಕಥಾಸಂಕಲನ ವನ್ನು ಪ್ರಕಟಿಸಲಾಗುತ್ತದೆ.
ಕಥೆಗಳನ್ನು ಕೊರಿಯರ್ ಮೂಲಕ ಡಿ.30ರೊಳಗೆ ಛಂದ ಪುಸ್ತಕ, C/O ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು–560 076 ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ಕೋರಿದೆ.
ಸಂಪರ್ಕಕ್ಕೆ: me@vasudhendra.com ಇ–ಮೇಲ್ ಅಥವಾ, ವಾಟ್ಸ್‌ಆ್ಯಪ್ ಸಂ: 98444 22782.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.