ADVERTISEMENT

ಪ್ರದೋಷ ವ್ರತ ಆಚರಣೆ: ಮಹತ್ವ, ಹಿನ್ನಲೆ ಏನು?

ಎಲ್.ವಿವೇಕಾನಂದ ಆಚಾರ್ಯ
Published 2 ಡಿಸೆಂಬರ್ 2025, 5:22 IST
Last Updated 2 ಡಿಸೆಂಬರ್ 2025, 5:22 IST
<div class="paragraphs"><p>ಚಿತ್ರ: ಎಐ</p></div>
   

ಚಿತ್ರ: ಎಐ

2025ರ ಮಂಗಳವಾರ 2ರಂದು ಅಂಗಾರಕ ಪ್ರದೋಷ ವ್ರತ ಆಚರಿಸಲಾಗುತ್ತದೆ. ಇದನ್ನು ಭೌಮ ಪ್ರದೋಷ ವ್ರತ ಎಂದು ಕರೆಯುತ್ತಾರೆ.  ಪ್ರದೋಷ ವ್ರತದ ಮಹತ್ವ, ಪೂಜಾ ವಿಧಾನ ಹಾಗೂ ವ್ರತಾಚರಣೆಯಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಪ್ರದೋಷ ವ್ರತದ ಮಹತ್ವ

ADVERTISEMENT

ಶಿವನ ಆನುಗ್ರಹ ಪಡೆಯುವ, ಸಂತಾನ ಭಾಗ್ಯಕ್ಕಾಗಿ ಹಾಗೂ ವಾಸಿಯಾಗದ ರೋಗಗಳಿಂದ ಮುಕ್ತಿ ಪಡೆಯುವ ಉದ್ದೇಶದಿಂದ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. 

ಅಂಗಾರಕ ಪ್ರದೋಷ ಪೂಜೆ ವಿಧಾನ:

  • ಪ್ರದೋಷ ವ್ರತ ಆಚರಿಸುವವರು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿ‌, ‘ಆದ್ಯ ಅಹಂ ಮಹಾದೇವಸ್ಯ ಕೃಪಾಪ್ರಾಪ್ತ್ಯೈ ಸೋಮಪ್ರದೋಷವ್ರತಂ ಕರಿಷ್ಯೇ’ ಎಂಬ ಮಂತ್ರವನ್ನು ಪಠಿಸಿ ಉಪವಾಸ ವ್ರತವನ್ನು ಮಾಡಬೇಕು.

  • ಶಿವ ಪೂಜೆ ಮಾಡಿ ಇಡೀ ದಿನ ಉಪವಾಸ ಮಾಡಿ. ಪ್ರದೋಷ ಉಪವಾಸವನ್ನು ಆಚರಿಸುವವರು ದಿನವಿಡೀ ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಜಪಿಸಬೇಕು.

  • ಸಂಜೆ ಮತ್ತೊಮ್ಮೆ ಸ್ನಾನ ಮಾಡಿ ಶಿವನಿಗೆ ಪೂಜೆ ಸಲ್ಲಿಸಿ. ಗಂಗಾಜಲ ಹಾಗೂ ಹಾಲಿನೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಶ್ರೀಗಂಧ ಹಚ್ಚಿ.

  • ಶಿವಲಿಂಗದ ಮೇಲೆ ಬಿಲ್ವ ಪತ್ರೆ, ಅಕ್ಷತೆ, ಸಕ್ಕರೆ, ಜೇನುತುಪ್ಪ, ಹೂವು, ಹಣ್ಣು, ವಸ್ತ್ರ ಹಾಗೂ ಸಿಹಿತಿಂಡಿಗಳನ್ನು  ಅರ್ಪಿಸಿ.

  • ಶಿವಲಿಂಗವನ್ನು ಪೂಜಿಸಿದ ನಂತರ, ಅಂಗಾರಕ ಪ್ರದೋಷ ವ್ರತದ ಕಥೆಯನ್ನು ಕೇಳಿ. ‌ ಶಿವನ ಮಂತ್ರಗಳನ್ನು ಪಠಿಸಿ. ಇದಾದ ನಂತರ ಶಿವನಿಗೆ ಆರತಿ ಮಾಡಿ ಆಹಾರ ಸೇವಿಸಿ.

ಭೌಮ ಪ್ರದೋಷ ವ್ರತದ ಪ್ರಯೋಜನ:

  • ಶಿವಭಕ್ತರಲ್ಲಿ ಪ್ರದೋಷ ವ್ರತಕ್ಕೆ ಹೆಚ್ಚಿನ ಮಹತ್ವವಿದೆ. ಈ ವ್ರತವನ್ನು ಆಚರಿಸುವುದರಿಂದ ಸಾವಿರ ಯಜ್ಞಗಳಿಗೆ ಸಮನಾದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಒಬ್ಬ ವ್ಯಕ್ತಿಯು ಪದೇ ಪದೇ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಭೌಮ ಪ್ರದೋಷ ವ್ರತವು ಅವರಿಗೆ ಪ್ರಯೋಜನಕಾರಿಯಾಗಿದೆ.

  • ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಂಗಳಕರ ಫಲಿತಾಂಶಗಳನ್ನು ಪಡೆಯಲು ಭೌಮ ಪ್ರದೋಷದ ಉಪವಾಸವನ್ನು ಆಚರಿಸುವುದು ಉತ್ತಮ.

  • ಈ ಉಪವಾಸದಲ್ಲಿ ಅಂಗಾರಕನ 21 ಹೆಸರುಗಳನ್ನು ಪಠಿಸಬೇಕು. ಇದನ್ನು ಮಾಡುವುದರಿಂದ ಜಾತಕದಲ್ಲಿ ಮಂಗಳನ ಸ್ಥಾನ ಬಲವಾಗುತ್ತದೆ ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.