
ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹುಟ್ಟಿದ ಲಗ್ನದ ಅನುಸಾರವಾಗಿ 11ನೇ ಮನೆಯನ್ನು ಲಾಭ ಸ್ಥಾನ ಎಂದು ಕರೆಯಲಾಗುತ್ತದೆ. 11ನೇ ಮನೆಯಲ್ಲಿ ಯಾವ ಗ್ರಹಗಳಿದ್ದರೆ ಶುಭವಾಗುತ್ತದೆ ಎಂಬುದನ್ನು ನೋಡೋಣ.
11ನೇ ಮನೆಯಲ್ಲಿರುವ ಗ್ರಹಗಳು ಜಾತಕದ ಮೇಲೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ ಎಂದು ಜ್ಯೋತಿಷ ಹೇಳುತ್ತದೆ.
11ನೇ ಮನೆಯಲ್ಲಿ ಶುಕ್ರ, ಗುರು ಹಾಗೂ ರಾಹು ನಕ್ಷತ್ರಗಳಿದ್ದರೆ ಕೆಲವು ಜಾತಕದವರು ಅತ್ಯಂತ ಶ್ರೀಮಂತರಾಗುತ್ತಾರೆ. 11ನೇ ಮನೆಯಲ್ಲಿ ಸೂರ್ಯನಿದ್ದರೆ ಕೆಲಸ ಕಾರ್ಯಗಳಲ್ಲಿ ಲಾಭವಾಗಲಿದೆ. ವ್ಯಾಜ್ಯಗಳಲ್ಲಿ ಪರಿಹಾರವಾಗಲಿವೆ. ಕಲಾವಿದರು ಆಗಬಹುದು.
11ನೇ ಮನೆಯಲ್ಲಿ ಚಂದ್ರನಿದ್ದರೆ ಹಿಡಿದ ಕೆಲಸಗಳಲ್ಲಿ ಜಯ ಸಿಗುತ್ತದೆ.
11ನೇ ಮನೆಯಲ್ಲಿ ಕುಜನಿದ್ದರೆ, ಶ್ರಮವಹಿಸಿ ಕಷ್ಟಪಟ್ಟು ಜಯಶಾಲಿಗಳಾಗುತ್ತೀರಿ. ಹಟ ಸಾಧಿಸಿ ಗೆಲುವು ಪಡೆಯುತ್ತೀರಿ.
ಬುಧನಿದ್ದರೆ, ಕೆಲಸ ಕಾರ್ಯಗಳಲ್ಲಿ ವಿಜಯ ಶಾಲಿಗಳಾಗುತ್ತಾರೆ. ಇವರು ತಮ್ಮ ಕೆಲಸವನ್ನು ಮುಂಚಿತವಾಗಿ ಯಾರಿಗೂ ಹೇಳಿಕೊಳ್ಳುವುದಿಲ್ಲ, ಕೆಲಸವಾದ ನಂತರ ಇವರ ಕೆಲಸಕ್ಕೆ ಮೆಚ್ಚುಗೆ ದೊರೆಯುತ್ತದೆ.
ಗುರುವಿದ್ದಲ್ಲಿ ಒಂದಕ್ಕಿಂತ ಹೆಚ್ಚು ಲಾಭಗಳಿಸುತ್ತಾರೆ. ವಿವಿಧ ಕೆಲಸಗಳನ್ನು ಏಕಕಾಲದಲ್ಲಿ ಮಾಡಿ ಮುಗಿಸುತ್ತಾರೆ.
ಶುಕ್ರನಿದ್ದಲ್ಲಿ ಪ್ರತಿದಿನವೂ ಸಂಪತ್ತಿನ ಜೋಡಣೆ ಆಗುತ್ತಿರುತ್ತದೆ. ಸ್ತ್ರೀ ಹಾಗೂ ಪುರುಷರ ಸ್ನೇಹ ಸಂಪಾದಿಸುತ್ತೀರಿ.
11ನೇ ಮನೆಯಲ್ಲಿ ಶನಿ ಇದ್ದರೆ, ಪ್ರತಿ ಕೆಲಸಕ್ಕೂ ಒಂದು ಚೌಕಟ್ಟು ಹಾಕಿಕೊಂಡು ಕೆಲಸವನ್ನು ಬೇಗ ಮಾಡಿ ಮುಗಿಸುತ್ತಾರೆ. ನಷ್ಟದ ಪ್ರಮಾಣ ಕಡಿಮೆ ಇರುತ್ತದೆ.
ರಾಹು ಇದ್ದಲ್ಲಿ ಶಿಕ್ಷೆಗಳಿಂದ ತಪ್ಪಿಸಿಕೊಳ್ಳುತ್ತಾರೆ. ಬಾರಿ ತೊಂದರೆಗಳಿಂದ ದೂರವಿರುತ್ತಾರೆ.
11ನೇ ಮನೆಯಲ್ಲಿ ಕೇತುವಿದ್ದಲ್ಲಿ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತದೆ. ಕೇತುವಿನ ಜೊತೆ ಇತರೆ ಗ್ರಹಗಳ ಬಲವಿದ್ದರೆ, ಹಲವು ಶುಭ ಫಲಗಳನ್ನು ಲಭಿಸಲಿವೆ. ಈ ರೀತಿಯಾಗಿ 11ನೇ ಮನೆ ಜಾತಕದ ಅನುಸಾರ ಶುಭವೆಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.