
ಚಿತ್ರ: ಗೆಟ್ಟಿ
ಶುಭ ಸಮಾರಂಭಗಳಿಗೆ ಹೋಗುವಾಗ ಉಡುಗೊರೆಗಳನ್ನು ತೆಗೆದುಕೊಂಡು ಹೋಗುವುದು ಸರ್ವೇ ಸಾಮಾನ್ಯ. ಮದುವೆ, ಉಪನಯನ, ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಹೀಗೆ ಇತ್ಯಾದಿಗಳಾಗಿರಬಹುದು. ಉಡುಗೊರೆ ಕೊಡುವ ಮುನ್ನ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು ಎಂದು ಜ್ಯೋತಿಷ ಹೇಳುತ್ತದೆ.
ಗಣೇಶನನ್ನು ವಿಘ್ನ ನಿವಾರಕ ಎಂದು ಹೇಳಲಾಗುತ್ತದೆ. ಹಾಗಾಗಿ ಚಿನ್ನ, ಬೆಳ್ಳಿ, ಹಿತ್ತಾಳೆ, ತಾಮ್ರ, ಪ್ಲಾಸ್ಟಿಕ್ ಅಥವಾ ಪಿಂಗಾಣಿಯ ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು.
ಗೋಮುತಿ ಚಕ್ರ ಲಕ್ಷ್ಮೀಯ ಸಂಕೇತವೆಂದು ಹೇಳಲಾಗುತ್ತದೆ. ಇದನ್ನು ಉಡುಗೊರೆಯಾಗಿ ನೀಡುವುದು ಶುಭಕರ.
ಆಮೆಯ ವಿಗ್ರಹ ಸಹ ಉಡುಗೊರೆಯಾಗಿ ನೀಡಬಹುದು. ಇದನ್ನು ವಿಷ್ಣುವಿನ ಸ್ವರೂಪ ಎಂದು ಹೇಳಲಾಗುತ್ತದೆ.
ಆನೆಯ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು. ಆದರೆ ಮರ ಅಥವಾ ಶ್ರೀಗಂಧದಿಂದ ಮಾಡಿದ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದು ಉತ್ತಮ ಎಂದು ಹೇಳಲಾಗುತ್ತದೆ.
ವಾಸ್ತುಶಿಲ್ಪದ ಪ್ರಕಾರ ನೀರಿನ ಕಾರಂಜಿಯನ್ನು ಉಡುಗೊರೆಯಾಗಿ ಕೊಡಬಹುದು. ಇದರಿಂದ ವರುಣನ ಕೃಪೆ ಪ್ರಾಪ್ತವಾಗುತ್ತದೆ.
ಹೂವಿನ ಗಿಡಗಳನ್ನು ಉಡುಗೊರೆಯಾಗಿ ಕೊಡುವುದು ಉತ್ತಮ ಎಂದು ಹೇಳಲಾಗುತ್ತದೆ.
ಈ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು:
ಲಕ್ಷ್ಮೀ ದೇವರ ವಿಗ್ರಹ, ಕಾಮಾಕ್ಷಿ ದೀಪ ಅಥವಾ ಈಗಾಗಲೇ ನೀವು ಬಳಸಿದ ವಸ್ತುಗಳನ್ನು ಯಾವುದೇ ಕಾರಣಕ್ಕೂ ಉಡುಗೊರೆಯಾಗಿ ಕೊಡಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.