ADVERTISEMENT

ಜಯ ಏಕಾದಶಿಯ ಆಚರಣೆಯ ಉದ್ದೇಶ, ಮಹತ್ವವೇನು? ಇಲ್ಲಿದೆ ಮಾಹಿತಿ

ಎಲ್.ವಿವೇಕಾನಂದ ಆಚಾರ್ಯ
Published 29 ಜನವರಿ 2026, 4:40 IST
Last Updated 29 ಜನವರಿ 2026, 4:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ ಕೃಪೆ

ವಿಶ್ವಾವಸು ನಾಮ ಸಂವತ್ಸರದ ಮಾಘ ಮಾಸದ ಶುಕ್ಲಪಕ್ಷದಲ್ಲಿ ‘ಮಾಘ ಶುದ್ಧ ಏಕಾದಶಿ’ ಅಥವಾ ‘ಜಯ ಏಕಾದಶಿ’ಯನ್ನು ಆಚರಿಸಲಾಗುತ್ತದೆ. 2025ರ ಜನವರಿ 29ರಂದು ಜಯ ಏಕಾದಶಿಯ ದಿನವಾಗಿದೆ. ಹಾಗಾದರೆ ಜಯ ಏಕಾದಶಿಯ ಮಹತ್ವ, ಪೂಜಾ ವಿಧಾನ ಹಾಗೂ ಲಾಭಗಳ ಕುರಿತು ತಿಳಿಯೋಣ.

ADVERTISEMENT

ಪೂಜಾ ವಿಧಾನ

ಏಕಾದಶಿ ವಿಷ್ಣುವಿನ ಆರಾಧನೆಯ ದಿನ. ಈ ದಿನ ವಿಷ್ಣುವಿನ ಪೂಜೆ ಮಾಡಲು ವಿಗ್ರಹಕ್ಕೆ ನೀರಿನಿಂದ ಅಭಿಷೇಕ ಮಾಡಿ. ಫೋಟೊ ಇಟ್ಟಿದ್ದರೆ ಗಂಗಾಜಲವನ್ನು ಚಿಮುಕಿಸಿರಿ. ವಿಷ್ಣುವಿಗೆ ಶ್ರೀಗಂಧ ಮತ್ತು ಹಳದಿ ಹೂವುಗಳನ್ನು ಅರ್ಪಿಸಿ ತುಪ್ಪದ ದೀಪವನ್ನು ಹಚ್ಚಿ.
ಈ ದಿನ ಉಪವಾಸ ವ್ರತ ಮಾಡುವುದಾಗಿ ಸಂಕಲ್ಪ ತೆಗೆದುಕೊಂಡು ವ್ರತವನ್ನು ಪ್ರಾರಂಭಿಸಿ.
ವಿಷ್ಣುವಿಗೆ ಆರತಿಯನ್ನು ಬೆಳಗಿ. ಜೊತೆಗೆ ಲಕ್ಷ್ಮೀಯನ್ನು ಪೂಜಿಸಿ. ನಂತರ ಮನೆಯಲ್ಲಿರುವ ತುಳಸಿಗೆ ನೈವೇದ್ಯ ಮಾಡಿ ಪೂಜೆ ಕೊನೆಗೊಳಿಸಿ.

ಪೂಜಾ ಸಮಯ

ಏಕಾದಶಿಯ ಹಿಂದಿನ ದಿನ ರಾತ್ರಿ 12.47 ರಿಂದ 29ರ ಮಧ್ಯಾಹ್ನ 11.59ರ ವರೆಗೆ ಶುಭ ಕಾಲವಿರುತ್ತದೆ. ಈ ಸಮಯದಲ್ಲಿ ದೇವರಿಗೆ ಪೂಜೆ ಸಲ್ಲಿಸುವುದರಿಂದ ಮೋಕ್ಷ ಪ್ರಾಪ್ತವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಈ ದಿನ ನಾರಾಯಣನಿಗೆ ಪೂಜೆಯನ್ನು ಸಲ್ಲಿಸಿ, ಹರಿ ನಾಮ ಸ್ಮರಣೆ ಮಾಡಿದರೆ ಕಷ್ಟಗಳು ದೂರವಾಗಿ ಕುಟುಂಬದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸಲಿದೆ ಎಂಬ ನಂಬಿಕೆ ಇದೆ. ಈ ದಿನ ಮಾಂಸಹಾರವನ್ನು ಸೇವಿಸಬಾರದು. ಕೂದಲು ಹಾಗೂ ಉಗುರನ್ನು ಕತ್ತರಿಸಬಾರದು.

ಏಕಾದಶಿಯಂದು ಈ ಮಂತ್ರ ಜಪಿಸಿ:

ಓಂ ಶ್ರೀ ಕೃಷ್ಣಾಯ ವಾಸುದೇವಾಯ ಹರೇ ಪರಮಾತ್ಮನೇ’

‘ಪ್ರಣತ: ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.