ಸಾಂದರ್ಭಿಕ ಚಿತ್ರ
ಚಿತ್ರ: ಎಐ
ಮಕರ ಸಂಕ್ರಾಂತಿ ಎಂದರೆ ಕೇವಲ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗುವ ಜ್ಯೋತಿಷ್ಯ ಘಟನೆ ಮಾತ್ರವಲ್ಲ. ಅದು ಮಾನವನ ಜೀವನದ ಕರ್ಮಚಕ್ರವನ್ನು ಮರುಸಂಯೋಜನೆ ಮಾಡುವ ಮಹಾಶಕ್ತಿ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವಾಗ ಕರ್ಮ, ಧರ್ಮ, ಸ್ಥಿರತೆ, ಸಮಾಜದ ಒಪ್ಪಿಗೆ ಮತ್ತು ವಿವಾಹದ ಬಂಧನ ಇವೆಲ್ಲವನ್ನೂ ನಿಯಂತ್ರಿಸುವ ಶಕ್ತಿ ಚೇತನಗೊಳ್ಳುತ್ತದೆ. 2026ರ ಮಕರ ಸಂಕ್ರಾಂತಿ ಈ ಬಾರಿ ವಿಶೇಷ ಗ್ರಹಸಂಯೋಗಗಳೊಂದಿಗೆ ಸಂಭವಿಸುತ್ತಿರುವುದರಿಂದ, ವಿಶೇಷವಾಗಿ ವಿವಾಹದಲ್ಲಿ ತಡವಾಗುತ್ತಿರುವವರು, ನಿಶ್ಚಿತಾರ್ಥ ಮುರಿಯುತ್ತಿರುವವರು, ಕುಟುಂಬ ವಿರೋಧದಿಂದ ವಿವಾಹ ವಿಳಂಬವಾಗುತ್ತಿರುವವರ ಐದು ರಾಶಿಯವರಿಗೆ ಇದು ದೈವಿಕ ಪರಿಹಾರದ ಕಾಲವಾಗಲಿದೆ.
ಪರಾಶರ ಹೋರಾ ಶಾಸ್ತ್ರದಲ್ಲಿ ಮಕರ ಸಂಕ್ರಾಂತಿಯ ವಿವಾಹ ಸಂಬಂಧಿತ ಮಹತ್ವವನ್ನು ಹೀಗೆ ಹೇಳಲಾಗಿದೆ
’ಮಕರೇ ರವಿಸಂಚಾರೇ ಧರ್ಮಕರ್ಮವಿವಾಹದಃ ।
ವಿಘ್ನನಾಶಕರೋ ಭಾನುಃ ದಾಂಪತ್ಯಸುಖಕಾರಕಃ ’
ಅರ್ಥ: ಸೂರ್ಯ ಮಕರ ರಾಶಿಯಲ್ಲಿ ಸಂಚರಿಸುವಾಗ ಧರ್ಮ, ಕರ್ಮ ಮತ್ತು ವಿವಾಹದ ಫಲಗಳು ಸಿದ್ಧವಾಗುತ್ತವೆ. ಸೂರ್ಯ ವಿಘ್ನಗಳನ್ನು ನಾಶ ಮಾಡಿ ದಾಂಪತ್ಯ ಸುಖವನ್ನು ನೀಡುತ್ತಾನೆ.
ಈ ಶಾಸ್ತ್ರೀಯ ಆಧಾರದ ಮೇರೆಗೆ 2026ರ ಮಕರ ಸಂಕ್ರಾಂತಿ ಕಾಲದಲ್ಲಿ ಮೇಷ, ವೃಷಭ, ಕರ್ಕಾಟಕ, ತುಲಾ ಮತ್ತು ಧನು ರಾಶಿಗಳು ವಿವಾಹ ವಿಚಾರದಲ್ಲಿ ವಿಶೇಷ ಅನುಗ್ರಹ ಪಡೆಯಲಿವೆ.
ಮೇಷ ರಾಶಿ – ಪ್ರೇಮ ಮತ್ತು ವಿವಾಹದ ತಡೆ ಕರಗುವ ಕಾಲ
ಮೇಷ ರಾಶಿಗೆ ಸೂರ್ಯ ಪಂಚಮಾಧಿಪತಿ. ಪಂಚಮ ಭಾವವು ಪ್ರೇಮ, ಮನಸ್ಸಿನ ನಿರ್ಣಯ ಮತ್ತು ಸಂಬಂಧದ ಸ್ಥಿರತೆಯನ್ನು ಸೂಚಿಸುತ್ತದೆ. ಈ ಸಂಕ್ರಾಂತಿಯಲ್ಲಿ ಪಂಚಮಾಧಿಪತಿ ಸೂರ್ಯನು ಕರ್ಮಸ್ಥಾನ ಪ್ರವೇಶ ಮಾಡುವುದರಿಂದ ಮೇಷ ರಾಶಿಯವರಲ್ಲಿ ಉಂಟಾಗಿದ್ದ ಗೊಂದಲಗಳು, ಭಯಗಳು ಮತ್ತು ನಿರ್ಣಯದ ವಿಳಂಬ ಕರಗುತ್ತವೆ.
ಫಲಿತ ಜ್ಯೋತಿಷ್ಯ ಹೇಳುತ್ತದೆ:
‘ಪಂಚಮೇಶೋ ರವಿರ್ಯುಕ್ತೇ ಪ್ರೇಮವಿವಾಹಸಿದ್ಧಿದಃ’
ಅರ್ಥ: ಪಂಚಮಾಧಿಪತಿ ಸೂರ್ಯನಾಗಿದ್ದರೆ ಪ್ರೇಮ ಮತ್ತು ವಿವಾಹ ಸಿದ್ಧವಾಗುತ್ತದೆ.
ವೃಷಭ ರಾಶಿ – ಕುಟುಂಬ ವಿರೋಧ ತಗ್ಗಿ ಮದುವೆ ಮಾರ್ಗ ತೆರೆದುಕೊಳ್ಳುತ್ತದೆ
ವೃಷಭ ರಾಶಿಗೆ ಸೂರ್ಯ ಚತುರ್ಥಾಧಿಪತಿ. ಚತುರ್ಥ ಭಾವವು ಮನೆ, ಕುಟುಂಬ ಒಪ್ಪಿಗೆ ಮತ್ತು ಗೃಹಸ್ಥಿತಿಯನ್ನು ಸೂಚಿಸುತ್ತದೆ. ವೃಷಭ ರಾಶಿಯವರ ಮದುವೆಗೆ ಮುಖ್ಯ ಅಡ್ಡಿಯಾಗಿದ್ದ ಕುಟುಂಬದ ವಿರೋಧಗಳು ಈ ಸಂಕ್ರಾಂತಿಯ ನಂತರ ನಿಧಾನವಾಗಿ ಕರಗುತ್ತವೆ.
ಬೃಹತ್ ಜಾತಕ ಹೇಳುತ್ತದೆ
’ಚತುರ್ಥೇಶೇ ರವೌ ಯುಕ್ತೇ ಕುಲಸಮ್ಮತಿವರ್ಧನಂ’
ಅರ್ಥ: ಚತುರ್ಥಾಧಿಪತಿ ಸೂರ್ಯನಾಗಿದ್ದರೆ ಕುಟುಂಬದ ಒಪ್ಪಿಗೆ ಹೆಚ್ಚಾಗುತ್ತದೆ.
ಕರ್ಕಾಟಕ ರಾಶಿ – ಮಾತಿನ ದೋಷ ಮತ್ತು ತಪ್ಪು ಅರ್ಥಗಳು ದೂರವಾಗುತ್ತವೆ
ಕರ್ಕಾಟಕ ರಾಶಿಗೆ ಸೂರ್ಯ ದ್ವಿತೀಯಾಧಿಪತಿ. ದ್ವಿತೀಯ ಭಾವವು ಕುಟುಂಬ, ಮಾತು ಮತ್ತು ಸಂಸ್ಕಾರ. ವಿವಾಹ ಮಾತುಕತೆಗಳು ಅಸಮಾಧಾನದಿಂದ ಹಾಳಾಗುತ್ತಿದ್ದರೆ, ಈ ಸಂಕ್ರಾಂತಿಯ ನಂತರ ಆ ದೋಷಗಳು ಸರಿಯಾಗುತ್ತವೆ.
ಜಾತಕ ಪಾರಿಜಾತ:
’ದ್ವಿತೀಯೇಶೋ ರವಿರ್ಯತ್ರ ವಾಗ್ದೋಷೋ ವಿನಶ್ಯತಿ’
ತುಲಾ ರಾಶಿ – ಮದುವೆ ಪ್ರಸ್ತಾಪಗಳು ಯಶಸ್ವಿಯಾಗುವ ಯೋಗ
ತುಲಾ ರಾಶಿಗೆ ಸೂರ್ಯ ಏಕಾದಶಾಧಿಪತಿ. ಏಕಾದಶ ಭಾವವು ಆಸೆ, ಸಾಧನೆ ಮತ್ತು ಫಲಪ್ರಾಪ್ತಿ. ಮದುವೆ ಸಂಬಂಧಿತ ಆಸೆಗಳು ಈ ಸಂಕ್ರಾಂತಿಯ ನಂತರ ನೆರವೇರುತ್ತವೆ.
ಸರಾವಳಿ ಗ್ರಂಥ:
‘ಲಾಭೇಶೋ ಭಾಸ್ಕರೋ ಯಸ್ಯ ವಿವಾಹಸಿದ್ಧಿರ್ಭವೇತ್।’
ಧನು ರಾಶಿ – ಭಾಗ್ಯದಿಂದ ವಿವಾಹ ಬಂಧನ
ಧನು ರಾಶಿಗೆ ಸೂರ್ಯ ನವಮಾಧಿಪತಿ. ಭಾಗ್ಯಸ್ಥಾನಾಧಿಪತಿ ಸೂರ್ಯ ಕರ್ಮಸ್ಥಾನ ಪ್ರವೇಶ ಮಾಡಿದಾಗ, ದೀರ್ಘಕಾಲದ ವಿವಾಹ ವಿಳಂಬ ಮುಕ್ತಿಯಾಗುತ್ತದೆ.
ಫಲದೀಪಿಕಾದಲ್ಲಿ ತಿಳಿಸಿದಂತೆ
‘ನವಮೇಶೇ ರವೌ ಯುಕ್ತೇ ವಿವಾಹವಿಘ್ನನಾಶನಂ।’
ಮಕರ ಸಂಕ್ರಾಂತಿ ವಿವಾಹ ಪರಿಹಾರ ವಿಧಾನ
ಹತ್ತಿರದ ದೇವಾಲಯದಲ್ಲಿ ನವಗ್ರಹಗಳ ಮುಂದೆ ಮಣ್ಣಿನ ಹಣತೆಯಲ್ಲಿ 6 ತುಪ್ಪದ ದೀಪ ಹಚ್ಚುವುದು
ಸೂರ್ಯೋದಯದಲ್ಲಿ ‘ಓಂ ಸೂರ್ಯ ನಾರಾಯಣಾಯ ನಮಃ’ – 333 ಬಾರಿ ಪಠಣೆ
ಕೆಂಪು ವಸ್ತ್ರದಲ್ಲಿ ಗೋಧಿ ದಾನ
ಎಕ್ಕೆ ಗಿಡ ಪೂಜೆ
ಸ್ಕಂದ ಪುರಾಣ ಹೇಳುತ್ತದೆ:
‘ದೀಪದಾನಂ ವಿವಾಹಾರ್ಥಂ ಸೂರ್ಯಾರಾಧನಮುತ್ತಮಂ।’
ವಿಶೇಷ ದೈವಿಕ ಪರಿಹಾರ
ಈ ಸಂಕ್ರಾಂತಿ ನಂತರ ಬರುವ ಅಮಾವಾಸ್ಯೆ ದಿನ ಸ್ವಯಂವರಾ ಪಾರ್ವತಿ ಹೋಮದಲ್ಲಿ ಅಭಿಮಂತ್ರಿಸಲಾದ ‘ರಾಜವರ್ಧನ ಮಣಿ’ ಉಂಗುರವನ್ನು ಧರಿಸಿದರೆ ವಿವಾಹ ವಿಳಂಬ, ನಿಶ್ಚಿತಾರ್ಥ ಮುರಿತ ಹಾಗೂ ಅಜ್ಞಾತ ತಡೆಗಳು ಬಹಳ ಶೀಘ್ರವಾಗಿ ನಿವಾರಣೆಯಾಗುವ ಶಕ್ತಿ ದೊರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.