ಎಐ ಚಿತ್ರ
ಭೌತಿಕ ಅಸ್ತಿತ್ವ ಇರದೇ ಇದ್ದರೂ ರಾಹು ಕೇತುಗಳು ಭಾರತೀಯ ಜ್ಯೋತಿಷ್ಯ ವಿಜ್ಞಾನದಲ್ಲಿ ಪ್ರಮುಖ ಗ್ರಹಗಳ ಸಾಲಿಗೆ ಸೇರುತ್ತವೆ. ಸೂರ್ಯ ಹಾಗೂ ಚಂದ್ರ ಗ್ರಹಗಳು ತಮ್ಮ ಸುತ್ತುವಿಕೆಯ ಕಾರಣದಿಂದಾಗಿ ನೇರಳನ್ನು ಉಂಟು ಮಾಡುತ್ತವೆ. ಈ ನೆರಳಿನಿಂದಾಗಿ ವಿಚಿತ್ರದ ಚಿತ್ರಗಳು ಮೂಡುತ್ತವೆ. ಇದನ್ನು ವಿಜ್ಞಾನ ಜಗತ್ತು ವೈಜ್ಞಾನಿಕವಾಗಿ ಹೇಳುತ್ತದೆ.
ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ದಟ್ಟವಾದ ಕಪ್ಪು ನೆರಳನ್ನು ರಾಹು ಹಾಗೂ ಕೇತು ಗ್ರಹಗಳೆಂದು ಗುರುತಿಸಲಾಗುತ್ತದೆ. ಉಪನಿಷತ್ತಿನಲ್ಲಿ ‘ನಿರ್ಗುಣಾಯ ಗುಣಾತ್ಮನೇ‘ ಎಂದು ಬ್ರಹ್ಮನ ಬಗ್ಗೆ ವರ್ಣನೆ ಇದೆ. ಅಂದರೆ ನಿರ್ಗುಣನಾದರೂ ಬ್ರಹ್ಮ ಗುಣಾತ್ಮನಾಗಿದ್ದಾನೆ.
ನೇರ ಗೋಚರಕ್ಕೆ ಸಿಗದೆ, ಅವುಗಳ ಅಸ್ತಿತ್ವವನ್ನು ನಿರಾಕರಿಸಲಾಗದೇ ನೇರಳಿನ ಗ್ರಹಗಳಾಗಿಯೇ ರಾಹು ಹಾಗೂ ಕೇತು ಗ್ರಹಗಳು ಇವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಾಖ್ಯಾನಿಸಲಾಗುತ್ತದೆ.
ಭಾರತೀಯ ಪರಂಪರೆಯಲ್ಲಿ ರಾಹು ಕೇತುಗಳ ಉಪಟಳಗಳ ಬಗೆಗೆ ವಿಸ್ತಾರವಾದ ವಿಶ್ಲೇಷಣೆಗಳನ್ನು ಮಾಡಬಹುದು. ರಾಹು ಕೇತುಗಳು ಒಲಿದರೆ ಅವಿರತವಾದ ಅನುಗ್ರಹವನ್ನು ನೀಡಬಲ್ಲವು ಎಂಬುದನ್ನು ತರ್ಕಬದ್ಧವಾಗಿ ಹಾಗೂ ಆಧಾರ ಸಹಿತವಾಗಿ ಪಟ್ಟಿ ಮಾಡಬಹುದು.
ನೆಹರು ಕುಟುಂಬಕ್ಕೆ ರಾಹು ದೆಸೆ:
ನೆಹರು ಅವರು ನಿಷ್ಕಾಳಜಿಯನ್ನು ತೋರುವಂತಾದದ್ದು ರಾಹುವಿನ ದೆಸೆಯಿಂದ. ಇದೇ ರಾಹು ದೆಸೆಯಿಂದ ನೆಹರು ಅವರು ವಿಸ್ವಸಂಸ್ಥೆಯ ಖಾಯಂ ಸದಸ್ಯತ್ವವನ್ನು ಚೀನಾ ದೇಶಕ್ಕೆ ಬಿಟ್ಟುಕೊಟ್ಟರು ಎಂಬುದನ್ನು ತಳ್ಳಿ ಹಾಕುವಂತಿಲ್ಲ.
ಚೀನಾದ ಜತೆಗಿನ ಭಾರತದ ಸಂಬಂಧಗಳು, ಮ್ಯಾಕ್ ಮೋಹನ್ ರೇಖೆಯ ಅಸಮಾಧಾನ, ಚೀನಾದ ಟಿಬೆಟ್‌ನ ಅತಿಕ್ರಮಣ, ದಲೈಲಾಮಾಗೆ ಭಾರತ ಆಶ್ರಯ ನೀಡಿದ್ದರಿಂದ ಚೀನಾ ಸಿಟ್ಟಾಗಿದ್ದು ಸೇರಿದಂತೆ ನೆಹರು ಅವರ ನಿದ್ದೆ ಇರದ ರಾತ್ರಿಗಳು ಶುರುವಾಗಿದ್ದು ರಾಹು ದೆಸೆಯಿಂದ. ಇದನ್ನು ಅಷ್ಟಮ ಶನಿ ಕಾಟವೆಂದು ಕರೆಯಬಹುದು. ರಾಹು ದೆಸೆಯ ಕಾಲದಲ್ಲಿಯೆ ನೆಹರು ನಿಧನರಾದರು.
ರಾಹು ಗ್ರಹದ ಪ್ರಬಲವಾದ ಕಾಟವು ಇಂದಿರಾಗಾಂಧಿ, ಫಿರೋಜ್ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿಯ ಅವರು ಅನುಭವಿಸಬೇಕಾಯಿತು. ರಾಹು ಕೇತುಗಳ ಉಪಟಳ ನೆಹರು ಕುಟುಂಬಕ್ಕೆ ಇದ್ದವು ಎಂದು ಹೇಳಬಹುದು. ನೆಹರು ಅವರನ್ನು ರಾಹು ಕೇತುಗಳು ನೇರವಾಗಿ ಕಾಡಿದ್ದರೆ, ಇಂದಿರಾ, ರಾಜೀವ್ ಹಾಗೂ ಸಂಜಯ್ ಗಾಂಧಿಯವರ ವಿಷಯದಲ್ಲಿ ಇತರ ಗ್ರಹಗಳನ್ನು ಕಾಡುವಂತೆ ಉತ್ತೇಜಿಸಿವೆ.
ಧೋನಿ, ವೀರೇಂದ್ರ ಸೆಹ್ವಾಗ್‌ಗೆ ಬಲ ತಂದುಕೊಟ್ಟ ರಾಹು:
ಎದುರಾಳಿ ಬೌಲರ್‌ಗಳ ಮಾರಕ ಎಸೆತಗಳನ್ನು ಲೀಲಾಜಾಲವಾಗಿ ಸಿಕ್ಸರ್, ಬೌಂಡರಿಗಳಿಗೆ ತಳ್ಳುತ್ತಿದ್ದ ಸೆಹ್ವಾಗ್ ಅವರಿಗೆ ರಾಹುವಿನ ಅನುಗ್ರಹವಿತ್ತು.
ಗಾಂಧಿ ಮನೆತನಕ್ಕೆ ರಾಹು ಸಮಸ್ಯೆಗಳನ್ನು ಉಂಟು ಮಾಡಿದರೆ, ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್ ವಿಷಯದಲ್ಲಿ ಒಳಿತು ಮಾಡಿದ್ದನು. 2011ರ ವಿಶ್ವಕಪ್‌ನಲ್ಲಿ ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ ಬೇಕಿದ್ದಾಗ ರನ್ ಬಾರಿಸಿದ ಧೋನಿಗೆ ರಾಹು ಗ್ರಹದ ಬೆಂಬಲವಿತ್ತು.
ವರವಾದ ಕೇತು:
ಪ್ರಕಾಶ್ ಪಡುಕೋಣೆ ಅವರು ಜಗತ್ತಿನ ಬಹು ದೊಡ್ಡ ಬ್ಯಾಡ್ಮಿಂಟನ್ ಆಟಗಾರರಾಗಿ ಹೊರ ಹೊಮ್ಮಿದ್ದು ಕೇತು ಗ್ರಹದ ಬೆಂಬಲದಿಂದ ಎಂಬುದು ಗಮನಾರ್ಹ. ಥಿಯರಿ ಆಫ್ ರಿಲೇಟಿವಿಟಿ ಮಂಡನೆಯ ಮೂಲಕ ಜಾಗತಿಕ ಮಟ್ಟದ ಬಹು ದೊಡ್ಡ ವಿಜ್ಞಾನಿಗಳ ಸಾಲಿಗೆ ಸೇರಿದ ನೊಬೆಲ್ ಪುರಸ್ಕಾರ ಪಡೆದ ಐನ್‍ಸ್ಟೈನ್‌ಗೆ ಕೇತುವಿನ ಬೆಂಬಲವಿತ್ತು.
ವರವಾದ ರಾಹು:
ಸಚಿನ್ ಅವರಿಗೆ ರಾಹು ದೆಸೆ ಶುರುವಾದಂತೆ ತೊಡಕುಗಳು ಆರಂಭವಾದವು. ಸಚಿನ್ ತೆಂಡೂಲ್ಕರ್ ಅವರು ಟೆನಿಸ್ ಎಲ್ಬೊ ಕಾಯಿಲೆಯ ನೋವಿನಿಂದ ತತ್ತರಿಸಿ ಹೋಗಿದ್ದರು. ರಾಹುವಿನ ಉಪಟಳದ ನಿವಾರಣೆಗಾಗಿ ಕುಕ್ಕೆ ಸುಬ್ರಹ್ಮಣ್ಯನ ಸನ್ನಿಧಿಗೂ ಬಂದರು. ಕಾಯಿಲೆಯಿಂದ ಚೇತರಿಸಿಕೊಂಡ ಸಚಿನ್ ಅವರು ನಂತರ ಹತ್ತು ವರ್ಷದ ಕಾಲ ಭಾರತಕ್ಕೆ ಶಕ್ತಿಯಾಗಿ ಆಡಿದರು.
ನೆರಳಿನ ಗ್ರಹಗಳಾಗಿ ಭಾರತೀಯ ಜ್ಯೋತಿಷ್ಯದಲ್ಲಿ ಸ್ಥಾನ ಪಡೆದುಕೊಂಡ ರಾಹು ಕೇತುಗಳು ಅನೇಕರ ಬದುಕಿನ ಏಳು ಬೀಳುಗಳನ್ನು ರೂಪಿಸುತ್ತವೆಯೆ? ಹೌದು ರೂಪಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.