ADVERTISEMENT

ಶನಿ ಗ್ರಹದ ಹಿಮ್ಮುಖ ಚಲನೆ: 2026ರಲ್ಲಿ ಯಾವ ರಾಶಿಗೆ ತರಲಿದೆ ಅದೃಷ್ಟ

ಎಲ್.ವಿವೇಕಾನಂದ ಆಚಾರ್ಯ
Published 22 ಡಿಸೆಂಬರ್ 2025, 12:51 IST
Last Updated 22 ಡಿಸೆಂಬರ್ 2025, 12:51 IST
<div class="paragraphs"><p>ಎಐ ಚಿತ್ರ</p></div>

ಎಐ ಚಿತ್ರ

   

ಜ್ಯೋತಿಷ್ಯ ಶಾಸ್ತ್ರಕ್ಕೆ ಅನುಸಾರವಾಗಿ 2026ರಲ್ಲಿ ಶನಿ ವಕ್ರಗತಿಯಲ್ಲಿ ಚಲನೆ ಮಾಡುತ್ತಾನೆ. ಇದರಿಂದಾಗಿ ದ್ವಾದಶ ರಾಶಿಗಳ ಮೇಲೆ ಹಲವು ರೀತಿಯ ಪರಿಣಾಮಗಳು ಬೀರುತ್ತದೆ. ಕರ್ಮಕ್ಕೆ ತಕ್ಕ ಫಲ ನೀಡುವ ಶನಿ ನಿಧಾನವಾಗಿ ಸಂಚಾರಿಸುವ ಗ್ರಹವಾಗಿದೆ. ನಿರ್ದಿಷ್ಟ ಅವಧಿಯಲ್ಲಿ ರಾಶಿಯನ್ನು ಬದಲಾಯಿಸುವ ಶನಿಯು ಕೆಲವೊಮ್ಮೆ ಹಿಮ್ಮುಖ ಸಂಚಾರ ಮಾಡುತ್ತಾನೆ. 

ಶನಿಯ ಹಿಮ್ಮುಖ ಸಂಚಾರವು 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಉಂಟುಮಾಡುತ್ತದೆ. ಈ ಸಮಯದಲ್ಲಿ ಶನಿಯ ಸ್ಥಾನ ಬಲವಾಗಿದ್ದರೆ, ಸಂಪತ್ತು, ವೃತ್ತಿಯಲ್ಲಿ ಪ್ರಗತಿ, ಉದ್ಯೋಗ ಹಾಗೂ ಸಂತೋಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ADVERTISEMENT

ಪ್ರಸ್ತುತ ಶನಿ ಗ್ರಹ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. 2026 ರಲ್ಲಿಯೂ ಹಿಮ್ಮುಖವಾಗಿ ಸಂಚರಿಸುವುದರಿಂದ 12 ರಾಶಿಗಳ ಮೇಲೆ ಶುಭ ಹಾಗೂ ಅಶುಭ ಫಲಗಳನ್ನು ನೀಡಲಿದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.

ಮೇಷ ರಾಶಿ: ಶನಿಯ ಹಿಮ್ಮುಖ ಸಂಚಾರ ಮೇಷ ರಾಶಿಯವರಿಗೆ ಮಿಶ್ರ ಫಲಗಳನ್ನು ತಂದು ಕೊಡಲಿದೆ. ಮನೆ, ವಾಹನ, ಜಮೀನು ಮತ್ತು ಚಿನ್ನಾಭರಣ ಸೇರಿದಂತೆ ದುಬಾರಿ ವಸ್ತುಗಳನ್ನು ಖರೀದಿಸುವ ಶುಭ ಯೋಗ ಕೂಡಿ ಬರಲಿದೆ. ಮದುವೆಯ ನಿಶ್ಚಯ, ಮಕ್ಕಳ ಶಿಕ್ಷಣದಲ್ಲಿ ಪ್ರಗತಿ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶ ಲಭ್ಯವಾಗಲಿದೆ. ಪದೋನ್ನತಿ ಹಾಗೂ ಹೊಸ ಜವಾಬ್ದಾರಿಗಳು ಸಿಗಲಿದೆ.

ವ್ಯವಹಾರದಲ್ಲಿ ತಪ್ಪು ನಿರ್ಧಾರ, ಮೋಸ ಅಥವಾ ಆಕಸ್ಮಿಕ ನಷ್ಟದ ಸಾಧ್ಯತೆಗಳಿರುವುದರಿಂದ ಹೆಚ್ಚಿನ ಎಚ್ಚರಿಕೆ ಅಗತ್ಯ. ಒಟ್ಟಾರೆಯಾಗಿ ಶನಿಯ ಹಿಮ್ಮುಖ ಸಂಚಾರವು ಈ ರಾಶಿಯ ಜನರನ್ನು ಪರೀಕ್ಷಿಸುವುದರ ಜೊತೆಗೆ ಶುಭವನ್ನು ತಂದು ಕೊಡಲಿದೆ.  

ವೃಷಭ ರಾಶಿ: ಈ ರಾಶಿಯವರಿಗೆ ಶನಿಯ ಸಂಪೂರ್ಣ ಅನುಗ್ರಹ ದೊರಕಲಿದೆ. ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲಿದ್ದೀರಿ. ಈ ರಾಶಿಯವರು ಕೈಗೆತ್ತಿಕೊಳ್ಳುವ ಪ್ರತಿಯೊಂದು ಕೆಲಸವು ನಿರೀಕ್ಷೆಗಿಂತ ಉತ್ತಮವಾಗಿ ಫಲ ನೀಡುವ ಸಾಧ್ಯತೆಗಳಿವೆ. ಹೆಚ್ಚಿನ ಲಾಭದ ಸಾಧ್ಯತೆ ಇದೆ. ಉದ್ಯಮಗಳಲ್ಲಿ ತೊಡಗಿರುವವರು ಹೊಸ ಒಪ್ಪಂದಗಳು, ಬಂಡವಾಳ ಹೂಡಿಕೆ ಮತ್ತು ಗ್ರಾಹಕರ ಬೆಂಬಲ ದೊರೆಯಲಿದೆ.

ಕೃಷಿ, ರಿಯಲ್ ಎಸ್ಟೇಟ್ ಹಾಗೂ ಜಮೀನು ಖರೀದಿಯಲ್ಲಿ ಲಾಭ ಉಂಟಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಶನಿಯ ಕೃಪೆಯಿಂದ ಎಲ್ಲಾ ಪ್ರಯತ್ನಗಳಿಗೆ ಫಲಶ್ರುತಿ ಸಿಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ.

ಮಿಥುನ ರಾಶಿ: ಮಿಥುನ ರಾಶಿಯಿಂದ 10ನೇ ಮನೆಯಲ್ಲಿ ಶನಿಯ ಹಿಮ್ಮುಖ ಸಂಚಾರ ಆರಂಭವಾಗುವುದರಿಂದ ಮಿಥುನ ರಾಶಿಯವರ ವೃತ್ತಿ ಜೀವನದಲ್ಲಿ ಮಹತ್ತರ ಪ್ರಗತಿ ಹಾಗೂ ವಿವಿಧ ಯೋಗಗಳು ಕೂಡಿಬರಲಿದೆ. ವಿಶೇಷವಾಗಿ ಸರ್ಕಾರಿ ಕೆಲಸ, ವಕೀಲ ವೃತ್ತಿ, ಮ್ಯಾಜಿಸ್ಟ್ರೇಟ್ ಹುದ್ದೆ ಹಾಗೂ ಪೊಲೀಸ್ ಇಲಾಖೆಯಲ್ಲಿರುವವರಿಗೆ ಶನಿ ದೇವರು ಉತ್ತೇಜನ ಇರಲಿದೆ

ದಾಂಪತ್ಯ ಜೀವನದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಹೊಸ ವಿವಾಹಿತರಿಗೆ ಪರಸ್ಪರ ಹೊಂದಾಣಿಕೆಯ ಸುಧಾರಣೆಯಾಗುತ್ತದೆ. ವಿವಾಹ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ ಬರಲಿದೆ. ಒಟ್ಟಿನಲ್ಲಿ ಶನಿಯ ಹಿಮ್ಮುಖ ಸಂಚಾರದಿಂದ ಮಿಥುನ ರಾಶಿಯವರಿಗೆ ಶ್ರಮಕ್ಕೆ ತಕ್ಕ ಶ್ರೇಯಸ್ಸು ಹಾಗೂ ಕುಟುಂಬಕ್ಕೆ ಸುಖ, ಶಾಂತಿ ಸಿಗಲಿದೆ.

ಕಟಕ ರಾಶಿ: ಕಟಕ ರಾಶಿಯವರು ವಿಶೇಷವಾಗಿ ಜಾಗರೂಕತೆ ಇಂದ ಇರಬೇಕಾದ ಕಾಲವಾಗಿದೆ. ವೈದ್ಯಕೀಯ, ಪೊಲೀಸ್ ಇಲಾಖೆ, ವಕೀಲ ವೃತ್ತಿ, ಕೃಷಿ ಕ್ಷೇತ್ರ, ಕ್ರೀಡೆ, ಶಿಕ್ಷಣ, ರೈಲ್ವೆ , ಚಲನಚಿತ್ರ‌,  ಮಾಧ್ಯಮ, ಕಾರ್ಮಿಕ ವರ್ಗ ಹಾಗೂ ಸ್ವಂತ ವ್ಯಾಪಾರ, ವ್ಯವಹಾರ ನಡೆಸುತ್ತಿರುವವರಿಗೆ ಹಣಕಾಸಿನ ಸಮಸ್ಯೆಗಳು ಎದುರಾಗಲಿವೆ. ‌

ಅಯಾಸ, ಶಕ್ತಿಯ ಕುಂದುವಿಕೆ, ನಿದ್ರಾಹೀನತೆ ಹಾಗೂ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ವಿವಿಧ ಯೋಗಗಳು ಕೂಡಿಬರಲಿವೆ. ಕೆಲಸದಲ್ಲಿ ಪದೋನ್ನತಿ, ಸಂಬಳ ಹೆಚ್ಚಾಗುವಿಕೆ ಅಥವಾ ಹೊಸ ಜವಾಬ್ದಾರಿ ನಿರೀಕ್ಷಿಸುತ್ತಿರುವರಿಗೆ ತಾತ್ಕಾಲಿಕ ನಿರಾಶೆ ಉಂಟಾಗಲಿದೆ. ಮೇಲಾಧಿಕಾರಿಗಳೊಂದಿಗೆ ಸಂವಹನ, ಸಹೋದ್ಯೋಗಿಗಳೊಂದಿಗೆ ಮಾತುಕತೆ ಹಾಗೂ ಕುಟುಂಬದೊಳಗಿನ ಚರ್ಚೆಯಲ್ಲೂ ಮಾತನಾಡುವಾಗ ಎಚ್ಚರಿಕೆ ವಹಿಸಿ. ಇಲ್ಲವಾದರೆ ತಪ್ಪು ಅರ್ಥೈಸುವಿಕೆ ಉಂಟಾಗಬಹುದು. 

ಸಿಂಹ ರಾಶಿ: ಈ ವರ್ಷ ಸಿಂಹ ರಾಶಿಯವರಿಗೆ ಶನಿದೇವನ ಮಹಾನುಗ್ರಹ ದೊರೆಯಲಿದ್ದು, ಜೀವನದಲ್ಲಿ ಅನೇಕ ಅವಕಾಶಗಳು ಮತ್ತು ಅಚ್ಚರಿಯ ಬದಲಾವಣೆಗಳಾಗಲಿವೆ. ಆರ್ಥಿಕವಾಗಿ ಅತ್ಯಂತ ಬಲವಾದ ವರ್ಷವಾಗಲಿದ್ದು. ಹಣದ ಹರಿವು ಹೆಚ್ಚಾಗುತ್ತದೆ. ಹೂಡಿಕೆಯಲ್ಲಿ ಲಾಭ ದೊರೆಯಲಿದೆ. ನಿರುದ್ಯೋಗದಿಂದ ಬಳಲುತ್ತಿರುವ ಸಿಂಹ ರಾಶಿಯವರಿಗೆ ಈ ಸಂದರ್ಭದಲ್ಲಿ ತಮ್ಮ ಆಸೆಯ ಉದ್ಯೋಗ ದೊರೆಯುವ ಸಾಧ್ಯತೆ ಇದೆ.

ಸಂಪತ್ತು, ಯಶಸ್ಸು, ಗೌರವ ಮತ್ತು ಜೀವನದ ಏರಿಳಿತಗಳಲ್ಲಿ ಗೆಲುವು ನಿಮ್ಮದಾಗಲಿದೆ. ಒಟ್ಟಾರೆಯಾಗಿ ಸಿಂಹ ರಾಶಿಯವರಿಗೆ ಪರಿವರ್ತನೆಯಾಗುವ ಮತ್ತು ಜಯದ ವರ್ಷ ಎಂದು ಹೇಳಲಾಗುತ್ತದೆ.

ಕನ್ಯಾ ರಾಶಿ: ಶನಿಯ ಹಿಮ್ಮುಖ ಸಂಚಾರ ಕನ್ಯಾ ರಾಶಿಯವರಿಗೆ ಅನುಕೂಲಕರವಾದ ಕಾಲವಾಗಿದೆ. ಈ ಅವಧಿಯಲ್ಲಿ ಕುಟುಂಬದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಹಲವು ಸವಾಲುಗಳು ಎದುರಾಗುತ್ತವೆ. ಕುಟುಂಬದೊಳಗಿನ ಅಸಮಾಧಾನ, ತಪ್ಪು ಕಲ್ಪನೆ ಮತ್ತು ವಿವಾದಗಳು ನಿಮ್ಮ ಮನಸ್ಸಿಗೆ ಭಾರವಾಗಬಹುದು. ಜಮೀನು, ಮನೆ ನಿರ್ಮಾಣ ಅಥವಾ ಕಾನೂನು ಸಂಬಂಧಿತ ವಿಚಾರಗಳಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಚ್ಚರವಿರಲಿ. ಉದ್ಯೋಗ ಕ್ಷೇತ್ರದಲ್ಲಿಯೂ ಈ ಸಮಯ ಹೆಚ್ಚು ಸಹಕಾರಿಯಾಗಿರುತ್ತದೆ. 

ತುಲಾ ರಾಶಿ: ಈ ರಾಶಿಯವರಿಗೆ ಕಾಡುತ್ತಿದ್ದ ಸಾಲಬಾಧೆ ಈ ಅವಧಿಯಲ್ಲಿ ಸಂಪೂರ್ಣಚವಾಗಿ ಮುಕ್ತಿಯಾಗಲಿದೆ. ಸ್ಪಷ್ಟವಾಗುತ್ತದೆ. ಹಣದ ಹರಿವು ಹೆಚ್ಚಾಗುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣಿಸಿಕೊಳ್ಳುತ್ತದೆ . ಮತ್ತು ನಿಮ್ಮ ಹಣಕಾಸು ನೆಲೆ ಬಲಪಡಿಸುತ್ತದೆ. ವ್ಯಾಪಾರ ಮಾಡುತ್ತಿರುವವರು ಹೊಸ ಒಪ್ಪಂದಗಳು. ಹೂಡಿಕೆದಾರರ ಬೆಂಬಲ. ಹಾಗೂ ಉತ್ತಮ ಲಾಭಗಳನ್ನು ಗಳಿಸುವ ಅವಕಾಶವನ್ನು ಪಡೆಯುವ ಸಾಧ್ಯತೆ ಹೆಚ್ಚು. ಈಕಾರಣಕ್ಕಾಗಿ ಇದು ವ್ಯಾಪಾರಿಗಳಿಗೆ ಅತ್ಯಂತ ಅನುಕೂಲಕರ ಸಮಯ. ಶನಿದೇವನ ಕೃಪೆಯಿಂದ ನಿಮ್ಮ ಹಣಕಾಸು ನಿರ್ವಣೆಯಲ್ಲಿ ಹೊಸ ಬದಲಾವಣೆಗಳು ಉಂಟಾಗುತ್ತದೆ ಖರ್ಚುಗಳನ್ನು ನಿಯಂತ್ರಿಸುವ ಶಕ್ತಿ ಸರಿಯಾದ ಯೋಜನೆಗಳನ್ನು ರೂಪಿಸುವ ಸಾಮರ್ಥ್ಯ. ಮತ್ತು ಹಣವನ್ನು ಸಮರ್ಥವಾಗಿ ಬಳಸುವ ಚಾತುರ್ಯ. ಒಟ್ಟಾರೆಯಾಗಿ ನಿಮ್ಮ ಜೀವನದಲ್ಲಿ ಸ್ಪಷ್ಟವಾಗಿ ಬೆಳಗಲಿದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ವ್ಯವಹಾರ ವಿಸ್ತರಿಸಲು ಮತ್ತು ಆರ್ಥಿಕ ಗುರಿಗಳನ್ನು ಸಾಧಿಸಲು. ಇದು ಸೂಕ್ತ ಸಮಯ ಎಂದು ಹೇಳಲಾಗುತ್ತದೆ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಈ ವರ್ಷ ಆರ್ಥಿಕ ಚೇತರಿಕೆ ಮತ್ತು ಸಮೃದ್ಧಿಯ ಅವಧಿಯಾಗಿದೆ. ಜೀವನದಲ್ಲಿ ಹಲವು ಉತ್ತಮ ಬದಲಾವಣೆಗಳನ್ನು ತಂದುಕೊಡಲಿರುವ ಶುಭಕಾಲವಾಗಿದೆ. ಇದು ವ್ಯಾಪಾರಿಗಳಿಗೆ ಅತ್ಯಂತ ಅನುಕೂಲಕರ ಸಮಯ. ದೇವರ ಕೃಪೆಯಿಂದ ನಿಮ್ಮ ಹಣಕಾಸು ನಿರ್ವಹಣೆಯಲ್ಲಿ ಹೊಸ ಬದಲಾವಣೆಗಳು ಉಂಟಾಗುತ್ತವೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.

ಧನಸ್ಸು ರಾಶಿ: ಈ ರಾಶಿಯವರಿಗೆ ಜೀವನದಲ್ಲಿ ಹಲವು ಉತ್ತಮ ಬದಲಾವಣೆಗಳನ್ನು ತಂದು ಕೊಡಲಿರುವ ಶುಭಕಾಲವಾಗಿದೆ. ಸರ್ಕಾರಿ ಉದ್ಯೋಗಿಗಳ, ಪೊಲೀಸ ಇಲಾಖೆ,ಮ್ಯಾಜಿಸ್ಟ್ರೇಟ್, ವಕೀಲ ವೃತ್ತಿಯಲ್ಲಿ ತೊಡಗಿರುವವರಿಗೆ ಅತ್ಯಂತ ಪ್ರಗತಿಯುತ ಸಮಯವಾಗಿದೆ. ನಿಮ್ಮನ್ನು ಉನ್ನತ ಹುದ್ದೆಯ ಕಡೆಗೆ ಕರೆದೊಯ್ಯುವ ಯೋಗ ಕೂಡಿ ಬರಲಿದೆ. 2026ರಲ್ಲಿ ಧನಸ್ಸು ರಾಶಿಯವರಿಗೆ ಸಮೃದ್ಧಿಯನ್ನು ತಂದು ಕೊಡುವ ಶುಭಕಾರಿ ವರ್ಷ ಎಂದು ಹೇಳಲಾಗುತ್ತದೆ.

‌ಮಕರ ರಾಶಿ: ಈ ಹೊಸ ವರ್ಷ ಮಕರ ರಾಶಿಯವರಿಗೆ ಅನೇಕ ಪ್ರಯೋಜನಗಳು ಆಗಲಿವೆ. ಈ ರಾಶಿಯವರ ಆರ್ಥಿಕ ಪರಿಸ್ಥಿತಿಯು ಕಳೆದ ವರ್ಷಗಳಿಗಿಂತ ಗಮನಾರ್ಹವಾಗಿ ಸುಧಾರಿಸುವುದು ಮಾತ್ರವಲ್ಲದೆ, ಕೆಲವು ಅನಿರೀಕ್ಷಿತ ಬದಲಾವಣೆಗಳು ಜೀವನಕ್ಕೆ ದುಪ್ಪಟ್ಟು ಲಾಭವನ್ನು ತಂದು ಕೊಡಲಿದೆ. ಶನಿದೇವನ ಅನುಗ್ರಹದಿಂದಾಗಿ ಹಣಕಾಸಿನ ಭದ್ರತೆ ಹೆಚ್ಚಾಗುವುದು. ಹೂಡಿಕೆಗಳು ಲಾಭ ತರುತ್ತವೆ ಮತ್ತು ಆರ್ಥಿಕತೆ ಬಲವಾಗುತ್ತದೆ. ಈ ಸಮಯ ಸ್ವಂತ ಉದ್ಯೋಗ ಅಥವಾ ಹೊಸ ವೃತ್ತಿ ಆರಂಭಿಸಲು ಅತ್ಯುತ್ತಮ.

ಕುಂಭ ರಾಶಿ: ಶನಿಯ ಹಿಮ್ಮುಖ ಸಂಚಾರದ ಅವಧಿಯಲ್ಲಿ ಕುಂಭ ರಾಶಿಯವರಿಗೆ ವಿಶೇಷ ಜಾಗೃಕತೆ ಮತ್ತು ಸಮತೋಲವನ್ನು ಪಾಲಿಸಬೇಕಾದ ಸಮಯವಾಗಿದೆ. ಹಣಕಾಸು ಸಂಬಂಧಿತ ವಿಷಯಗಳಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪು, ಪ್ರತಿಯೊಂದು ವೆಚ್ಚ ಹೂಡಿಕೆ ಮತ್ತು ಹೊಸ ಯೋಜನೆಗಳ ಬಗ್ಗೆ ಯೋಚಿಸಿ ನಂತರವೇ ಜಾರಿಗೆ ತರುವುದು ಶ್ರೇಯಸ್ಕರ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಹೊಸ ಉದ್ಯೋಗ ಹೊಸ ವ್ಯವಹಾರ ಅಥವಾ ಸ್ವಂತ ಹುದ್ದೆಯನ್ನು ಪ್ರಾರಂಭಿಸುವುದು ಅನುಕೂಲಕರವಾಗದೆ ಇರಬಹುದು. ಏಕೆಂದರೆ ಗ್ರಹ ಚಲನೆಯ ಪರಿಣಾಮದಿಂದಾಗಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ.

ಮೀನ ರಾಶಿ: ‌ಶನಿಯ ಹಿಮ್ಮುಖ ಚಲನೆಯ ಈ ಅವಧಿಯಲ್ಲಿ ಮೀನ ರಾಶಿಯವರಿಗೆ ಮಂಗಳಕರ ಸಮಯವಲ್ಲವೆಂಬುದು ಸ್ಪಷ್ಟ. ಈ ಸಮಯದಲ್ಲಿ ಆರೋಗ್ಯದ ಕಡೆ ವಿಶೇಷ ಗಮನ ನೀಡುವುದು ಅತ್ಯಂತ ಅಗತ್ಯ. ದೇಹದಲ್ಲಿ ಅಸಹಜವಾದ ದೌರ್ಬಲ್ಯ, ಆಯಾಸ, ಜೀರ್ಣಕ್ರಿಯೆ ಸಮಸ್ಯೆ, ರಕ್ತದೊತ್ತಡ, ಹೃದಯ ಸಂಬಂಧಿತ ತೊಂದರೆಗಳು ಅಥವಾ ಮಾನಸಿಕ ಒತ್ತಡ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ, ಆರೋಗ್ಯದ ವಿಷಯದಲ್ಲಿ ಲಘುವಾಗಿ ತೆಗೆದುಕೊಳ್ಳುವುದು ಮುಂದಿನ ದಿನಗಳಲ್ಲಿ ಹೆಚ್ಚಿನ ತೊಂದರೆಗಳಿಗೆ ಕಾರಣವಾಗಬಹುದು

ಒಟ್ಟಿನಲ್ಲಿ ಮೀನ ರಾಶಿಯವರು ಈ ಸಮಯದಲ್ಲಿ ನಿಧಾನ ಜಾಗರೂಕತೆ ಮತ್ತು ವಿವೇಚನಾ ಪೂರ್ಣವಾಗಿ ನಡೆದುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.