
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ: ಎಐ
ಫೆಬ್ರುವರಿ 13ರ ಶುಕ್ರವಾರದಂದು ಸರ್ವ ಏಕಾದಶಿ ಅಥವಾ ವಿಜಯ ಏಕದಾಶಿಯನ್ನು ಆಚರಣೆ ಮಾಡಲಾಗುತ್ತದೆ. ವಿಷ್ಣು ಅಥವಾ ನಾರಾಯಣನ ಭಕ್ತರು ಈ ಏಕಾದಶಿಯ ದಿನ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೆ. ನಾರಾಯಣನ ಸ್ತೋತ್ರಗಳನ್ನು ಪಠಿಸುತ್ತಾರೆ.
ಏಕಾದಶಿ ಎಂದರೇನು?
ಹಿಂದೂ ಮತ್ತು ಜೈನ ಧರ್ಮದಲ್ಲಿ ಏಕಾದಶಿಯನ್ನು ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ತಿಂಗಳಿಗೆ ಎರಡು ಬಾರಿ ಏಕಾದಶಿಯನ್ನು ಆಚರಣೆ ಮಾಡಲಾಗುತ್ತದೆ. ಚಂದ್ರನ ಚಲನೆಗೆ ಅನುಗುಣವಾಗಿ ಏಕಾದಶಿಯು ಕೃಷ್ಣ ಮತ್ತು ಶುಕ್ಲ ಪಕ್ಷದಲ್ಲಿ ಬರುತ್ತದೆ.
ಆಧ್ಯಾತ್ಮಿಕವಾಗಿ, ಏಕಾದಶಿ ಹನ್ನೊಂದು ಇಂದ್ರಿಯಗಳನ್ನು ಸಂಕೇತಿಸುತ್ತದೆ ಎಂದು ಹೇಳಲಾಗುತ್ತದೆ. ಒಂದು ವರ್ಷದಲ್ಲಿ ವಿಷ್ಣುವಿನ ವಿವಿಧ ಅವತಾರಗಳಿಗೆ ಸಂಬಂಧಿಸಿದ 24 ಏಕಾದಶಿಗಳು ಬರುತ್ತವೆ.
ಏಕಾದಶಿಯಂದು ಅನ್ನವನ್ನು ಏಕೆ ಸೇವಿಸಬಾರದು?
ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ದಿನ ಪೂರ್ತಿ ಉಪವಾಸವಿರುವುದರಿಂದ ಏಕಾದಶಿಯಂದು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಆಹಾರವನ್ನು ಸೇವಿಸುವುದು ಅಸ್ವಸ್ಥತೆಗೆ ಕಾರಣವಾಗಬಹುದು. ಅನ್ನದಲ್ಲಿ ತೇವಾಂಶ ಅಧಿಕವಾಗಿರುತ್ತದೆ. ಆದ್ದರಿಂದ ಉಪವಾಸದ ಬಳಿಕ ಅನ್ನ ಸೇವಿಸಬಾರದು ಎನ್ನಲಾಗುತ್ತದೆ.
ಪೂಜಾ ವಿಧಾನ
ಈ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮುಗಿಸಿದ ನಂತರ ಸೂರ್ಯನಿಗೆ ಮೊದಲ ಪೂಜೆ ಅರ್ಪಿಸಬೇಕು. ನಂತರ ದೇವರ ಮನೆಯನ್ನು ಸ್ವಚ್ಛಗೊಳಿಸಿ ನಾರಾಯಣನಿಗೆ ಪೂಜೆ ಸಲ್ಲಿಸಿ ಉಪವಾಸವನ್ನು ಆಚರಿಸಬೇಕು.
ತುಪ್ಪದ ದೀಪ ಹಚ್ಚುವುದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿದೆ ಎಂದು ಜ್ಯೋತಿಷ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.