
ಸಾಂದರ್ಭಿಕ ಚಿತ್ರ
ಚಿತ್ರ ಕೃಪೆ; ಎಐ
ಕನಸಿನ ಮನೆ ನಿರ್ಮಿಸುವುದು ಬಹುತೇಕ ಮಧ್ಯವರ್ಗದವರ ಕನಸು. ಮನೆ ಆಧುನಿಕವಾಗಿಯೂ ಹಾಗೂ ಶಾಸ್ತ್ರಬದ್ದವಾಗಿಯೂ ಇರಲು ಬಯಸುತ್ತಾರೆ. ಆ ಕಾರಣಕ್ಕಾಗಿಯೇ ಮನೆ ನಿರ್ಮಾಣಕ್ಕೆ ಮೊದಲು ವಾಸ್ತು ಶಾಸ್ತ್ರಜ್ಞರನ್ನು ಸಂಪರ್ಕಿಸುತ್ತಾರೆ. ಅನೇಕರು ಮನೆಯನ್ನು ವಾಸ್ತು ಪ್ರಕಾರ ನಿರ್ಮಿಸಲು ಬಯಸುತ್ತಾರೆ.
ವಾಸ್ತುಶಾಸ್ತ್ರ ವ್ಯಾಖ್ಯಾನ
ವಾಸ್ತು ಶಾಸ್ತ್ರ = ವಾಸ್ತು (ವಸ್ತು) + ಶಾಸ್ತ್ರ (ಅದರ ವಿಜ್ಞಾನ). ಈ ಪದವೇ ಸೂಚಿಸುವಂತೆ, ಇದು ಒಂದು ವಸ್ತುವಿನ ಜ್ಞಾನವನ್ನು ಅರಿಯುವ ವಿಜ್ಞಾನವಾಗಿದೆ. ಈ ಬ್ರಹ್ಮಾಂಡದಲ್ಲಿನ ಪ್ರತಿ ವಸ್ತುವಿನ ಹಿಂದೆ ವಿಜ್ಞಾನದ ತತ್ತ್ವಗಳು ಅಡಕವಾಗಿವೆ. ಅವುಗಳ ಹಿಂದೆ ಇರುವ ಸತ್ಯ ಮತ್ತು ವಿಜ್ಞಾನವನ್ನು ತಿಳಿಯಲು ಪರಿಣತಿ ಮತ್ತು ಸೂಕ್ಷ್ಮ ದೃಷ್ಟಿ ಅಗತ್ಯ. ಹೀಗಾಗಿ, ವಾಸ್ತು ಶಾಸ್ತ್ರ ಪ್ರತಿಯೊಂದು ವಸ್ತುವಿನ ವಿಜ್ಞಾನವನ್ನು ವಿವರಿಸುತ್ತದೆ. ಕಟ್ಟಡ, ರಚನೆ ಹಾಗೂ ಪಟ್ಟಣಗಳು ಅವುಗಳಲ್ಲಿನ ಕೇವಲ ಒಂದು ಭಾಗ ಮಾತ್ರ.
ಕಟ್ಟಡಗಳಿಗೆ ವಾಸ್ತುಶಾಸ್ತ್ರವನ್ನು ಅನ್ವಯಿಸುವಾಗ ಮುಖ್ಯವಾಗಿ 3 ಪ್ರಮುಖ ಅಂಶಗಳನ್ನು ಗುರುತಿಸುತ್ತೇವೆ. ಅವು, ಯಜಮಾನ, ಸ್ಥಾನ, ಮತ್ತು ಸೌಹಾರ್ದಪೂರ್ಣ ವಾಸಸ್ಥಳವನ್ನು ಸಾಧಿಸುವ ವಿಧಾನವೆಂದು ಹೇಳಲಾಗುತ್ತದೆ. ಅಂದರೆ, ಯಜಮಾನ (ಜ್ಯೋತಿಷ್ಯ) + ಸ್ಥಾನ (ವಾಸ್ತು ಶಾಸ್ತ್ರ) + ಸಾಧನ, ವಿಧಾನ (ವಾಸ್ತುಶಿಲ್ಪ, ಆರ್ಕಿಟೆಕ್ಚರ್) = ಸಮತೋಲನಯುತ, ಸೌಹಾರ್ದಪೂರ್ಣ ಜೀವನ (ಸುಸ್ಥಾನ)ವಾಗಿದೆ. ಯಜಮಾನನ ಸ್ವಭಾವ, ಕ್ಷೇತ್ರದ ಶಕ್ತಿ ಮತ್ತು ಸಮನ್ವಯದಿಂದ ನಿರ್ಮಾಣವಾಗುವ ವಾಸಸ್ಥಳವೇ ಸುಸ್ಥಾನ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ಮೇಷ ರಾಶಿಯವರು ಮನೆ ನಿರ್ಮಿಸುವ ಜಾಗವನ್ನು ಹೇಗೆ ನಿರ್ಧರಿಸಬಹುದು?
ಮೇಷ ರಾಶಿಯವರ ಜಾತಕದ ಪ್ರಕಾರ ಚಂದ್ರನು ಮೇಷ ರಾಶಿಯಲ್ಲಿ ಇರುತ್ತಾನೆ. ಇವರು ತಮ್ಮ ಆಸಕ್ತಿಗೆ ತಕ್ಕಂತೆ ಯೋಜನೆಗಳನ್ನು ನಿಯಂತ್ರಿಸಲು ಬಯಸುತ್ತಾರೆ. ಇವರಿಗೆ ಸಹನೆ ಕಡಿಮೆ. ತಕ್ಷಣ ಪ್ರತಿಕ್ರಿಯೆ ಬೇಕೆಂದು ಬಯಸುವ ವ್ಯಕ್ತಿತ್ವವುಳ್ಳವರಾಗಿದ್ದಾರೆ.
ಪೂರ್ವಮುಖ ಜಾಗ, ಪೂರ್ವಮುಖ ದ್ವಾರ ಅಥವಾ ಪೂರ್ವದ ಭಾಗಗಳು ಉತ್ತಮ
ಯಜಮಾನ ಮತ್ತು ಕ್ಷೇತ್ರದ ಮಧ್ಯೆ ಅಗ್ನಿ ತತ್ವದ ಸಮನ್ವಯವನ್ನು ಸಾಧಿಸಿದಾಗ, ಯಜಮಾನನಿಗೆ ಅನುಕೂಲಕರವಾದ ಸ್ಥಳವನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಹೀಗೆ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದ ತತ್ವಗಳನ್ನು ಅನ್ವಯಿಸಿ ಕುಜ ಪ್ರಾಬಲ್ಯವಿರುವ ಮೇಷ ರಾಶಿಯ ವ್ಯಕ್ತಿಗೆ ಸರಿ ಹೊಂದುವ ಜಾಗವನ್ನು ನಿರ್ಧರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.