ADVERTISEMENT

ಔಡಿ ಇ–ಟ್ರಾನ್‌, ಇ–ಟ್ರಾನ್‌ ಸ್ಪೋರ್ಟ್‌ಬ್ಯಾಕ್‌ ಬುಕಿಂಗ್‌ ಆರಂಭ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 11:49 IST
Last Updated 29 ಜೂನ್ 2021, 11:49 IST
ಔಡಿ ಇ–ಟ್ರಾನ್‌
ಔಡಿ ಇ–ಟ್ರಾನ್‌   

ಬೆಂಗಳೂರು: ಐಷಾರಾಮಿ ಕಾರು ತಯಾರಿಸುವ ಔಡಿ ಕಂಪನಿಯವಿದ್ಯುತ್ ಚಾಲಿತ ಎಸ್‌ಯುವಿಗಳಾದ ಇ–ಟ್ರಾನ್‌ ಮತ್ತು ಇ–ಟ್ರಾನ್‌ ಸ್ಪೋರ್ಟ್‌ಬ್ಯಾಕ್‌ನ ಬುಕಿಂಗ್‌ ಆರಂಭವಾಗಿದೆ. ಈ ಎರಡೂ ಎಸ್‌ಯುವಿಗಳು ಜುಲೈ 22ರಂದು ಮಾರುಕಟ್ಟೆಗೆ ಬರಲಿವೆ.

ಒಂದು ಎಸ್‌ಯುವಿಗೆ ಆರಂಭಿಕ ಮೊತ್ತ ₹ 5 ಲಕ್ಷ ಪಾವತಿಸಿ ಬುಕ್‌ ಮಾಡಬಹುದು. ಕಂಪನಿಯ ಜಾಲತಾಣದಲ್ಲಿ ಅಥವಾ ಸ್ಥಳೀಯ ಔಡಿ ಇಂಡಿಯಾ ಡೀಲರ್‌ಶಿಪ್‌ ಬಳಿ ಬುಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ. ಇ–ಟ್ರಾನ್ ಬ್ರ್ಯಾಂಡ್‌ ಅಡಿಯಲ್ಲಿ ಇನ್ನೂ ಹಲವು ಹೊಸ ಮಾದರಿಗಳನ್ನು ಕಂಪನಿಯು ಬಿಡುಗಡೆ ಮಾಡಲಿದೆ ಎಂದು ಔಡಿ ಇಂಡಿಯಾದ ಪ್ರಕಟಣೆ ತಿಳಿಸಿದೆ.

ಎರಡೂ ಎಸ್‌ಯುವಿಗಳನ್ನು 11ಕೆಡಬ್ಲ್ಯು ಎ.ಸಿ. ಹೋಮ್‌ ಚಾರ್ಜರ್‌ ಮೂಲಕ ಎಂಟೂವರೆ ಗಂಟೆಗಳಲ್ಲಿ ಚಾರ್ಜ್‌ ಮಾಡಬಹುದು. ನಾಲ್ಕು ಹಂತದ ಹವಾ ನಿಯಂತ್ರಣ ವ್ಯವಸ್ಥೆಯನ್ನು ಇದು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

‘ಭವಿಷ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳೇ ಇರಲಿವೆ. ಈ ನಿಟ್ಟಿನಲ್ಲಿ ಎರಡು ವಿದ್ಯುತ್ ಚಾಲಿತ ಎಸ್‌ಯುವಿಗಳ ಬುಕಿಂಗ್‌ ಆರಂಭಿಸಲು ರೋಮಾಂಚನ ಆಗುತ್ತಿದೆ’ ಎಂದು ಕಂಪನಿಯ ಭಾರತದ ಮುಖ್ಯಸ್ಥ ಬಲ್ಬೀರ್ ಸಿಂಗ್‌ ಧಿಲ್ಲೋನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.