ADVERTISEMENT

ಜೆಎಲ್‌ಆರ್‌ಚಾಲಕರಹಿತ ಇವಿ

ವಿಶ್ವನಾಥ ಎಸ್.
Published 18 ಮಾರ್ಚ್ 2020, 19:30 IST
Last Updated 18 ಮಾರ್ಚ್ 2020, 19:30 IST
jlr mobility
jlr mobility   

ವಾಹನ ಉದ್ಯಮವು ವಿದ್ಯುತ್‌ ಚಾಲಿತವಾಗಿ ಬದಲಾಗುವ ಪ್ರಕ್ರಿಯೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪ್ರಮುಖ ಕಂಪನಿಗಳು ತಮ್ಮ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ.ದೇಶಿ ಮತ್ತು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನ ಮೇಳಗಳಲ್ಲಿ ವಿದ್ಯುತ್ ಚಾಲಿತ ವಾಹನಗಳೇ ಪ್ರಮುಖ ಆಕರ್ಷಣೆಗಳಾಗುತ್ತಿವೆ.

ಟಾಟಾ ಮೋಟರ್ಸ್‌ ಒಡೆತನದ ಜಾಗ್ವಾರ್‌ ಲ್ಯಾಂಡ್‌ ರೋವರ್‌ (ಜೆಎಲ್‌ಆರ್‌) ನಗರ ಸಾರಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಾಜೆಕ್ಟ್‌ ವೆಕ್ಟರ್‌ ಹೆಸರಿನಲ್ಲಿತನ್ನ ಭವಿಷ್ಯದ ವಿದ್ಯುತ್‌ಚಾಲಿತ ಚಾಲಕರಹಿತ ಕಾನ್ಸೆಪ್ಟ್‌ ಕಾರು ಅನಾವರಣಗೊಳಿಸಿದೆ.

ಸುಧಾರಿತ ಮತ್ತು ಬಹೂಪಯೋಗಿ ವಿದ್ಯುತ್ ಚಾಲಿತ ವಾಹನವನ್ನು ಯುರೋಪಿನ ಅತಿದೊಡ್ಡ ವಾಹನ ನಾವಿನ್ಯತಾ ಕೇಂದ್ರವಾದ ನ್ಯಾಷನಲ್‌ ಆಟೊಮೋಟಿವ್‌ ಇನೊವೇಷನ್‌ ಸೆಂಟರ್‌ನಲ್ಲಿ (ಎನ್‌ಎಐಸಿ) ಅಭಿವೃದ್ಧಿಪಡಿಸಲಾಗಿದೆ.

ADVERTISEMENT

‘ನಮ್ಮ ಸಮಾಜವನ್ನು ಸುರಕ್ಷಿತ, ಆರೋಗ್ಯಕರ ಹಾಗೂ ಪರಿಸರ ಸ್ನೇಹಿಯಾಗಿಸುವ ಉದ್ದೇಶದಿಂದ ನಾವೀನ್ಯತೆ ತರುವಲ್ಲಿ ಕಂಪನಿಯು ಮುಂಚೂಣಿಯಲ್ಲಿದೆ’ ಎಂದು ಜೆಎಲ್‌ಆರ್‌ ಸಿಇಒ ರಾಲ್ಫ್‌ ಸ್ಪೆತ್‌ ತಿಳಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಸಾಧಿಸುವ ಮೂಲಕ 2021ರಿಂದ ‘ಇವಿ ಮೊಬಿಲಿಟಿ’ ಸೇವೆಗೆ ಚಾಲನೆ ನೀಡುವ ಉದ್ದೇಶವನ್ನು ಕಂಪನಿ ಹೊಂದಿದೆ.

‘ನಗರೀಕರಣ ಮತ್ತು ಡಿಜಿಟಲೀಕರಣದಿಂದಾಗಿ ನಗರ ಪ್ರದೇಶದಲ್ಲಿ ಸಂಪರ್ಕಿತ ಸಾರಿಗೆ ವ್ಯವಸ್ಥೆಯು ಅಗತ್ಯ ಮತ್ತು ಅನಿವಾರ್ಯವೂ ಆಗಿದೆ. ಈ ನಿಟ್ಟಿನಲ್ಲಿ ಪ್ರಾಜೆಕ್ಟ್‌ ವೆಕ್ಟರ್‌ ಶೇರ್ಡ್‌ ಮತ್ತು ಖಾಸಗಿ ವಾಹನದ ಪರಿಕಲ್ಪನೆಯನ್ನು ರೂಪಿಸಿದ್ದು, ಸಾರ್ವಜನಿಕ ಸಾರಿಗೆ ಜಾಲಕ್ಕೆ ಸಂರ್ಪಕಿಸಲಾಗುವುದು’ ಎಂದು ಪ್ರಾಜೆಕ್ಟ್‌ ನಿರ್ದೇಶಕ ಟಿಮ್‌ ಲೆವರ್ಟನ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.