ADVERTISEMENT

ಬರಲಿದೆ ಎಲೆಕ್ಟ್ರಿಕ್‌ ಕ್ರಾಸ್‌ಓವರ್‌ ‘ಕಿಯಾ ಇವಿ6’

ಪಿಟಿಐ
Published 21 ಏಪ್ರಿಲ್ 2022, 11:04 IST
Last Updated 21 ಏಪ್ರಿಲ್ 2022, 11:04 IST
ಕಿಯಾ ಇವಿ6
ಕಿಯಾ ಇವಿ6   

ನವದೆಹಲಿ: ಕಿಯಾ ಕಂಪನಿಯು ಪ್ರೀಮಿಯಂ ಎಲೆಕ್ಟ್ರಿಕ್‌ ಕ್ರಾಸ್‌ಓವರ್‌ ‘ಇವಿ6’ ಅನ್ನು ಶೀಘ್ರವೇ ಬಿಡುಗಡೆ ಮಾಡಲಿದ್ದು, ಆ ಮೂಲಕ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನ ಮಾರುಕಟ್ಟೆ ಪ್ರವೇಶಿಸುವುದಾಗಿ ಘೋಷಿಸಿದೆ.

ಮೇ 26ರಿಂದ ‘ಇವಿ6’ ಬುಕಿಂಗ್‌ ಆರಂಭ ಆಗಲಿದ್ದು, ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ. 2022ರಲ್ಲಿ ಕೇವಲ 100 ಕಾರುಗಳನ್ನು ಮಾರಾಟ ಮಾಡಲು ಉದ್ದೇಶಿಸಿದೆ.

‘ಜಾಗತಿಕವಾಗಿ ಹೆಚ್ಚು ಜನಪ್ರಿಯ ಆಗಿರುವ ವಿದ್ಯುತ್ ಚಾಲಿತ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲಿದ್ದೇವೆ. ಅಲ್ಟ್ರಾ–ಫಾಸ್ಟ್‌ ಚಾರ್ಜಿಂಗ್‌ ಸಾಮರ್ಥ್ಯ, ಗರಿಷ್ಠ ತಂತ್ರಜ್ಞಾನ ಇರುವ ಒಳಾಂಗಣವನ್ನು ಇದು ಹೊಂದಿರಲಿದೆ’ ಎಂದು ಕಿಯಾ ಇಂಡಿಯಾದ ಸಿಇಒ ಟೇ ಜಿನ್‌ ಪಾರ್ಕ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.