ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಮರ್ಸಿಡಿಸ್ ಬೆಂಜ್ ಕಂಪನಿಯು ಹೊಸ ಎಸ್–ಕ್ಲಾಸ್ ಸೆಡಾನ್ ಬಿಡುಗಡೆ ಮಾಡಿದೆ. ಇದರ ಬೆಲೆ ₹ 2.17 ಕೋಟಿಯಿಂದ ಆರಂಭವಾಗಲಿದೆ.
ಏಳನೇ ಪೀಳಿಗೆಯ ಈ ಸೆಡಾನ್ ಡೀಸೆಲ್ ಎಸ್400ಡಿ 4 ಮ್ಯಾಟಿಕ್ ಮತ್ತು ಪೆಟ್ರೋಲ್ ಎಸ್450 4ಮ್ಯಾಟಿಕ್ ಆವೃತ್ತಿಗಳಲ್ಲಿ ಲಭ್ಯವಿದೆ.
ಮೊದಲ ಹಂತದಲ್ಲಿ 150 ಕಾರುಗಳನ್ನು ಮಾತ್ರವೇ ಮಾರಾಟ ಮಾಡಲು ಆಲೋಚಿಸಲಾಗಿದೆ. ಶೇಕಡ 50ರಷ್ಟು ಕಾರುಗಳ ಬುಕಿಂಗ್ ಈಗಾಗಲೇ ಆಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್ ಶ್ವೆಂಕ್ ತಿಳಿಸಿದ್ದಾರೆ.
ಕಂಪನಿಯು 2021ರಲ್ಲಿ ಒಟ್ಟಾರೆ 15 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದು, ಇಲ್ಲಿಯವರೆಗೆ ಒಟ್ಟಾರೆ 8 ವಾಹನಗಳನ್ನು ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.