ADVERTISEMENT

ಹೊಸ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಅನಾವರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ನವೆಂಬರ್ 2021, 13:28 IST
Last Updated 23 ನವೆಂಬರ್ 2021, 13:28 IST
ರಾಯಲ್ ಎನ್‌ಫೀಲ್ಡ್ ಹೊಸ ವಿನ್ಯಾಸದ ಬೈಕ್
ರಾಯಲ್ ಎನ್‌ಫೀಲ್ಡ್ ಹೊಸ ವಿನ್ಯಾಸದ ಬೈಕ್   

ಬೆಂಗಳೂರು: ಆಕರ್ಷಕ ವಿನ್ಯಾಸ ಹೊಂದಿರುವ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಬೈಕ್ ಅನ್ನು ಅನಾವರಣ ಮಾಡಲಾಗಿದೆ.

ಡಿಜಿಟಲ್ ಗ್ರಾಫಿಕ್ಸ್ ಸಹಿತ ನೂತನ ಪರಿಕಲ್ಪನೆಯ ರಾಯಲ್ಎನ್‌ಫೀಲ್ಡ್ ಎಸ್‌ಜಿ650ಯನ್ನು ಇಐಸಿಎಂಎ 2021 ಮೋಟಾರ್‌ ಶೋದಲ್ಲಿ ಪರಿಚಯಿಸಲಾಗಿದೆ.

ಭವಿಷ್ಯದ ವಿನ್ಯಾಸ ಎಂಬ ಪರಿಕಲ್ಪನೆಯೊಂದಿಗೆ ರಾಯಲ್ ಎನ್‌ಫೀಲ್ಡ್ ನೂತನ ಎಸ್‌ಜಿ650 ಬಿಡುಗಡೆ ಮಾಡಲಿದೆ.

ADVERTISEMENT

ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಮೋಟಾರ್‌ ಬೈಕ್‌ನಲ್ಲಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮಾದರಿಯಲ್ಲಿ ಬಳಸಲಾಗಿರುವ ಎಂಜಿನ್ ಅನ್ನೇ ಬಳಸಲಾಗಿದೆ.

ಎಸ್‌ಜಿ650 ಮೋಟಾರ್‌ ಬೈಕ್‌ನಲ್ಲಿ ಹೊಸ ಮಾದರಿಯ ಹೆಡ್‌ಲೈಟ್, ಡಿಸ್ಕ್ ಬ್ರೇಕ್ ಅನ್ನು ಪರಿಚಯಿಸಲಾಗಿದೆ. ಉಳಿದಂತೆ ಹೆಚ್ಚಿನ ವಿವರವನ್ನು ಕಂಪನಿ ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.