ADVERTISEMENT

ಸ್ಕೋಡಾ: 5 ಹೊಸ ಕಾರ್‌

ಕೆ.ಎಂ.ಸಂತೋಷ್‌ ಕುಮಾರ್‌
Published 3 ಫೆಬ್ರುವರಿ 2020, 18:49 IST
Last Updated 3 ಫೆಬ್ರುವರಿ 2020, 18:49 IST
ಸಮಾರಂಭದಲ್ಲಿ ಪರಿಚಯಿಸಿದ ಪೋರ್ಷೆ 911 ಕ್ಯಾಬ್ರಿಯೊಲೆಟ್
ಸಮಾರಂಭದಲ್ಲಿ ಪರಿಚಯಿಸಿದ ಪೋರ್ಷೆ 911 ಕ್ಯಾಬ್ರಿಯೊಲೆಟ್   

ನವದೆಹಲಿ: ಸ್ಕೋಡಾ ಆಟೊ ಪೋಗ್ಸ್‌ವ್ಯಾಗನ್ ಇಂಡಿಯಾ ಕಂಪನಿಯು ತನ್ನ ನೂತನ ಐದು ಮಾದರಿಯ ಕಾರುಗಳನ್ನು ಸೋಮವಾರ ಇಲ್ಲಿ ಭಾರತದ ಮಾರುಕಟ್ಟೆಗೆ ಪರಿಚಯಿಸಿತು.

ಸ್ಕೋಡಾ ವಿಷನ್ ಇನ್ ಮತ್ತು ಫೋಗ್ಸ್‌ವ್ಯಾಗನ್ ಕಾಂಪ್ಯಾಕ್ಟ್ (ಟೈಗುನ್) ಎಸ್‌ಯುವಿ ಐಷಾರಾಮಿ ಕಾರುಗಳು, ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿರುವ ಔಡಿ ಎ8ಎಲ್, ಲ್ಯಾಂಬೊರ್ಗಿನಿ ಹುರಾಕೆನ್ ಹಾಗೂ ಪೋರ್ಷೆ 911 ಕ್ಯಾಬ್ರಿಯೊಲೆಟ್ ಕಾರುಗಳು ಬಿಡುಗಡೆಯಾದವು.

ಇದರಲ್ಲಿ ಔಡಿ ಎ8ಎಲ್ ಕಾರಿನ ಬೆಲೆ ₹ 1.56 ಕೋಟಿ ( ಎಕ್ಸ್ ಷೋ ರೂಂ) ಇದೆ. ಉಳಿದ ಮಾದರಿಯಕಾರುಗಳ ಬೆಲೆಯನ್ನು ಕಂಪನಿ ಘೋಷಿಸಿಲ್ಲ.

ADVERTISEMENT

‘ಭಾರತದಲ್ಲಿ ಹೊಸದಾಗಿ ಸ್ಕೋಡಾ ಆಟೊ ಡಿಜಿ ಲ್ಯಾಬ್ ಮತ್ತು ಸಾಫ್ಟವೇರ್ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತಿದೆ. 'ಇಂಡಿಯಾ 2.0 ಯೋಜನೆ'ಯಡಿ ಕಂಪನಿಯು ದೇಶದಲ್ಲಿ ಆಟೊಮೊಬೈಲ್ ಉದ್ಯಮಕ್ಕೆ ₹ 7,900 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ’ ಎಂದು ಸ್ಕೋಡಾ ಆಟೊ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಬರ್ನಾರ್ಡ್ ಮೇಯಿರ್ ತಿಳಿಸಿದರು.

(ಕಂಪನಿ‌ಯ ಆಹ್ವಾನದ ಮೇರೆಗೆ ವರದಿಗಾರ ದೆಹಲಿಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.