ADVERTISEMENT

ಟಾಟಾ ಆಲ್ಟ್ರೋಜ್‌ ಬಿಡುಗಡೆ

ಪಿಟಿಐ
Published 22 ಜನವರಿ 2020, 20:00 IST
Last Updated 22 ಜನವರಿ 2020, 20:00 IST
ಆಲ್ಟ್ರೋಜ್‌
ಆಲ್ಟ್ರೋಜ್‌   

ಮುಂಬೈ: ಟಾಟಾ ಮೋಟರ್ಸ್‌ ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಆಲ್ಟ್ರೋಜ್‌ ಅನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಎಕ್ಸ್‌ ಷೋರೂಂ ಬೆಲೆ ₹ 5.29 ಲಕ್ಷದಿಂದ ಆರಂಭವಾಗಲಿದೆ.

ಡಿಸೆಂಬರ್‌ನಲ್ಲಿ ಅನಾವರಣಗೊಳಿಸಿದ್ದ ಆಲ್ಟ್ರೋಜ್‌, ಬಿಎಸ್‌6ನ ಡೀಸೆಲ್‌ ಎಂಜಿನ್‌ನ ಮೊದಲ ಹ್ಯಾಚ್‌ಬ್ಯಾಕ್‌ ಆಗಿದೆ.

‘ಬಿಎಸ್‌6ಗೆ ಪೂರಕವಾದ ಹೊಸ ಪೀಳಿಗೆಯ ವಾಹನವನ್ನು ಮಾರುಕಟ್ಟೆಗೆ ತಂದಿದ್ದೇವೆ. ಇದರ ಬಿಡುಗಡೆಯ ಮೂಲಕ ಮಾರುಕಟ್ಟೆಯನ್ನೂ ವಿಸ್ತರಿಸಿಕೊಳ್ಳಲಾಗುವುದು. ಈ ವರ್ಷದಲ್ಲಿ ಇನ್ನಷ್ಟು ಹೊಸ ಮಾದರಿಗಳು ಬರಲಿವೆ’ ಎಂದು ಕಂಪನಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.