ADVERTISEMENT

ಟಾಟಾ: ಹೊಸ ವಾಹನಗಳು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 19:30 IST
Last Updated 29 ಆಗಸ್ಟ್ 2018, 19:30 IST
ಹವಾನಿಯಂತ್ರಿತ 22 ಆಸನಗಳ ಸ್ಟಾರ್ ಬಸ್ ಅಲ್ಟ್ರಾ
ಹವಾನಿಯಂತ್ರಿತ 22 ಆಸನಗಳ ಸ್ಟಾರ್ ಬಸ್ ಅಲ್ಟ್ರಾ   

ಬೆಂಗಳೂರು: ಬುಧವಾರ ಇಲ್ಲಿ ಆರಂಭವಾದ ‘ಬಸ್‌ ವರ್ಲ್ಡ್‌’ ಸಮಾವೇಶದಲ್ಲಿ ವಾಹನ ತಯಾರಿಕಾ ಸಂಸ್ಥೆ, ಟಾಟಾ ಮೋಟರ್ಸ್‌ ಹೊಸ ಸಾರಿಗೆ ವಾಹನಗಳನ್ನು ಪ್ರದರ್ಶಿಸಿತು.

22 ಆಸನಗಳ ಹವಾನಿಯಂತ್ರಿತ ಸ್ಟಾರ್ ಬಸ್‌ ಅಲ್ಟ್ರಾ ಪುಷ್‌ ಬ್ಯಾಕ್‌, 12 ಆಸನಗಳ ಹವಾನಿಯಂತ್ರಿತ ಸ್ಟಾರ್ ಬಸ್‌ ಮ್ಯಾಕ್ಸಿ ಕ್ಯಾಬ್‌, 12 ಆಸನಗಳ ವಿಂಗರ್, ಟಾಟಾ 1515 ಎಂಸಿವಿ ಸ್ಟಾಫ್‌ ಬಸ್‌ ಮತ್ತು ಮ್ಯಾಗ್ನಾ ಇಂಟರ್‌ಸಿಟಿ ಕೋಚ್‌ ಎಂಬ ಐದು ವಾಹನಗಳನ್ನು ಪರಿಚಯಿಸಿತು.

‘ನಮ್ಮ ಸಂಸ್ಥೆಯು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಾಹನಗಳನ್ನು ತಯಾರಿಸುತ್ತದೆ. ಈ ಹೊಸ ವಾಹನಗಳಿಗೂ ಈ ತತ್ವ ಅನ್ವಯಗೊಳ್ಳುತ್ತದೆ’ ಎಂದು ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಣಿಜ್ಯ ವಾಹನ ತಯಾರಿಕಾ ವಿಭಾಗದ ಮುಖ್ಯಸ್ಥ ರೋಹಿತ್ ಶ್ರೀವಾತ್ಸವ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.