ADVERTISEMENT

ಫೋಕ್ಸ್‌ವ್ಯಾಗನ್‌ ಟೈಗುನ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 15:22 IST
Last Updated 23 ಸೆಪ್ಟೆಂಬರ್ 2021, 15:22 IST
ಫೋಕ್ಸ್‌ವ್ಯಾಗನ್‌ ಪ್ಯಾಸೆಂಜರ್‌ ಕಾರ್‌ ಇಂಡಿಯಾದ ಬ್ರ್ಯಾಂಡ್‌ ನಿರ್ದೇಶಕ ಆಶಿಶ್‌ ಗುಪ್ತಾ ಅವರು ಹೊಸ
ಫೋಕ್ಸ್‌ವ್ಯಾಗನ್‌ ಪ್ಯಾಸೆಂಜರ್‌ ಕಾರ್‌ ಇಂಡಿಯಾದ ಬ್ರ್ಯಾಂಡ್‌ ನಿರ್ದೇಶಕ ಆಶಿಶ್‌ ಗುಪ್ತಾ ಅವರು ಹೊಸ   

ಬೆಂಗಳೂರು: ಜರ್ಮನಿಯ ಫೋಕ್ಸ್‌ವ್ಯಾಗನ್‌ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ಮಾದರಿ ‘ಟೈಗುನ್‌’ ಬಿಡುಗಡೆ ಮಾಡಿದೆ. ವೇಗವಾಗಿ ಬೆಳೆಯುತ್ತಿರುವ ಮಧ್ಯಮ ಗಾತ್ರದ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುಂದಿನ ವರ್ಷದೊಳಗೆ ಶೇಕಡ 10ರಷ್ಟು ಪಾಲು ಹೊಂದಲು ಬಯಸಿದೆ.

ಹೊಸ ಟೈಗುನ್‌ ಎಸ್‌ಯುವಿ ಪರಿಚಯಾತ್ಮಕ ಬೆಲೆಯು ₹ 10.49 ಲಕ್ಷದಿಂದ ₹ 17.49 ಲಕ್ಷದವರೆಗೆ ಇರಲಿದೆ ಎಂದು ಕಂಪನಿ ತಿಳಿಸಿದೆ.

‘ಇಂಡಿಯಾ 2.0 ಪ್ರಾಜೆಕ್ಟ್‌’ ಅಡಿಯಲ್ಲಿ ಕಂಪನಿಯ ಮೊದಲ ಉತ್ಪನ್ನ ಇದಾಗಿದೆ. ಭಾರತದಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗವು ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ವಾರ್ಷಿಕ ಮಾರಾಟವು ನಾಲ್ಕು ಲಕ್ಷದಷ್ಟಿದೆ ಎಂದು ಫೋಕ್ಸ್‌ವ್ಯಾಗನ್‌ ಪ್ಯಾಸೆಂಜರ್‌ ಕಾರ್‌ ಇಂಡಿಯಾದ ಬ್ರ್ಯಾಂಡ್‌ ನಿರ್ದೇಶಕ ಆಶಿಶ್‌ ಗುಪ್ತಾ ತಿಳಿಸಿದ್ದಾರೆ.

ADVERTISEMENT

ಟೈಗುನ್‌ಗೆ ಗ್ರಾಹಕರಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಿಡುಗಡೆಗೂ ಮುನ್ನವೇ 12,221 ಬುಕಿಂಗ್‌ ಆಗಿದೆ. ಈ ಎಸ್‌ಯುವಿ 1 ಲೀಟರ್‌ ಮತ್ತು 1.5 ಲೀಟರ್‌ ಪೆಟ್ರೋಲ್‌ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.