ADVERTISEMENT

ಕಾಂಪ್ಯಾಕ್ಟ್‌ ವಿಲಾಸಿ ಎಸ್‌ಯುವಿ ‘ವೋಲ್ವೊ ಎಕ್ಸ್‌ಸಿ40 ಟಿ4’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 19:30 IST
Last Updated 18 ಡಿಸೆಂಬರ್ 2019, 19:30 IST
‘ವೋಲ್ವೊ ಎಕ್ಸ್‌ಸಿ40 ಟಿ4’
‘ವೋಲ್ವೊ ಎಕ್ಸ್‌ಸಿ40 ಟಿ4’   

ವೋಲ್ವೊ ಕಾರ್ಸ್‌ ತನ್ನ ಹೊಸ ಎಕ್ಸ್‌ಸಿ40 ಟಿ4 ಆರ್‌– ಡಿಸೈನ್‌ ಪೆಟ್ರೋಲ್‌ ಚಾಲಿತ ಕಾಂಪ್ಯಾಕ್ಟ್‌ ಮಾಡುಲರ್‌ ಆರ್ಕಿಟೆಕ್ಚರ್‌ (ಸಿಎಂಎ) ಮಾರುಕಟ್ಟೆಗೆ ಪರಿಚಯಿಸಿದೆ. ವಿಲಾಸಿ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ಗಳನ್ನು (ಎಸ್‌ಯುವಿ) ಮೊದಲ ಬಾರಿಗೆ ಖರೀದಿಸುವವರ ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯನ್ನು (ಎಂಟ್ರಿ ಲೆವೆಲ್‌) ಈ ‘ಎಕ್ಸ್‌ಸಿ40 ಆರ್‌– ಡಿಸೈನ್‌’ ಎಸ್‌ಯುವಿ ಸಮರ್ಥವಾಗಿ ಪೂರೈಸಲಿದೆ.

ಮೊದಲ ಬಾರಿಗೆ ಎಸ್‌ಯುವಿ ಖರೀದಿಸುವ ವಿಭಾಗದಲ್ಲಿನ ಮೊದಲ ಪೆಟ್ರೋಲ್‌ ಚಾಲಿತ ಎಸ್‌ಯುವಿ ಇದಾಗಿದೆ. ಐಸಿಒಟಿಐನಿಂದ ಪ್ರೀಮಿಯಂ ಕಾರ್‌ ಪ್ರಶಸ್ತಿ ಪಡೆದ ವಿಲಾಸಿ ಕಾರ್‌ ಕೂಡ ಇದಾಗಿದೆ.

‘ಆರ್‌–ಡಿಸೈನ್‌’ನಲ್ಲಿನ ಈ ಮಾದರಿಯ ಎಸ್‌ಯುವಿಗಳಲ್ಲಿ ನಮ್ಮ ಮಾರಾಟ ಬೆಲೆ ತುಂಬ ಆಕರ್ಷಕವಾಗಿದೆ. ಗ್ರಾಹಕರು ಬಯಸುವ ಸೌಲಭ್ಯಗಳ ಬಗ್ಗೆ ನಾವು ಹೆಚ್ಚು ಕಾಳಜಿ ಹೊಂದಿದ್ದೇವೆ. ಅದೇ ಕಾರಣಕ್ಕೆ ಈ ’ಎಂಟ್ರಿ ಲೆವೆಲ್‌‘ ಮಾದರಿಯಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಿದ್ದೇವೆ‘ ಎಂದು ವೋಲ್ವೊ ಕಾರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಚಾರ್ಲ್ಸ್‌ ಫ್ರಂಪ್‌ ಹೇಳಿದ್ದಾರೆ. ಆಕರ್ಷಕ ನೋಟದ ಜತೆ ರಾಜಿಯಾಗದ ಆಧುನಿಕ ಸೌಲಭ್ಯಗಳನ್ನೆಲ್ಲ (ಸ್ಕ್ಯಾಂಡಿನೇವಿಯಾ ಸ್ಟೈಲ್‌) ಒಳಗೊಂಡಿರುವ ಈ ಎಸ್‌ಯುವಿನಲ್ಲಿ ಸ್ಪೋರ್ಟಿ ಮತ್ತು ಡೈನಮಿಕ್‌ ವಿನ್ಯಾಸವು ಸಾಕಾರಗೊಂಡಿದೆ.

ADVERTISEMENT

ಈ ವಿಭಾಗದ ಕಾರ್‌ಗಳ ಪೈಕಿ, ಎಕ್ಸ್‌ಸಿ40 ಎಸ್‌ಯುವಿ ರೇಡಾರ್‌ ಆಧಾರಿತ ಸುರಕ್ಷಿತ ಚಾಲನಾ ಸೌಲಭ್ಯಗಳನ್ನು ಒಳಗೊಂಡಿರುವುದು ಇದರ ಇನ್ನೊಂದು ವಿಶೇಷತೆ. ಪ್ರತಿ ಗಂಟೆಗೆ 50 ಕಿ.ಮೀ ವೇಗದಲ್ಲಿ ಚಲಿಸುವಾಗ ಅಡ್ಡ ಬರುವ ಇತರ ವಾಹನಗಳು, ಪಾದಚಾರಿಗಳು, ಸೈಕಲ್‌ ಸವಾರರು ಮತ್ತು ದನಕರುಗಳ ಬಗ್ಗೆ ಎಚ್ಚರಿಕೆ ನೀಡಿ ಅಪಘಾತ ತಡೆಗಟ್ಟಲು ಇದು ನೆರವಾಗಲಿದೆ.

ಎಂಜಿನ್‌ ಮತ್ತು ಪವರ್‌ಟ್ರೇನ್‌ (ಬಿಎಸ್‌–6 ಪ್ರಮಾಣೀಕೃತ): ಎಕ್ಸ್‌ಸಿ40 ಆರ್‌–ಡಿಸೈನ್‌ 2 ಲೀಟರ್‌ಗಳ 4 ಸಿಲಿಂಡರ್, ಟಿ4 ಪೆಟ್ರೋಲ್‌ ಚಾಲಿತ ಕಾರ್‌ 190 ಹಾರ್ಸ್‌ ಪವರ್‌ ಮತ್ತು 300 ಎನ್‌ಎಂನಷ್ಟು ಗರಿಷ್ಠ ಬಲ (ಟಾರ್ಕ್‌) ಹೊಂದಿದೆ. 8 ಬಗೆಯ ವೇಗದ ಗಿಯರ್‌ಟಾನಿಕ್‌ ಗಿಯರ್‌ ಬಾಕ್ಸ್‌ ಫ್ರಂಟ್‌ ವ್ಹೀಲ್‌ ಡ್ರೈವ್‌ ಮತ್ತು ಕಠಿಣ ಸ್ವರೂಪದ ಬಿಎಸ್‌–6 ಮಾಲಿನ್ಯ ನಿಯಂತ್ರಣ ಸೌಲಭ್ಯಗಳನ್ನು ಒಳಗೊಂಡಿದೆ.

ಈ ಎಲ್ಲ ತಂತ್ರಜ್ಞಾನ ಮತ್ತು ಸೌಲಭ್ಯಗಳಿಂದಾಗಿ ಎಕ್ಸ್‌ಸಿ40 ಆರ್‌–ಡಿಸೈನ್‌, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯ ಇರುವ ಕಾಂಪ್ಯಾಕ್ಟ್‌ ವಿಲಾಸಿ ಎಸ್‌ಯುವಿಗಳಲ್ಲಿಯೇ ಅತ್ಯುತ್ತಮ ಸೌಲಭ್ಯದ ಕಾರ್‌ ಆಗಿ ಗಮನ ಸೆಳೆಯಲಿದೆ. ಕ್ರಿಸ್ಟಲ್‌ ವ್ಹೈಟ್‌ ಪರ್ಲ್, ಬರ್ಸ್ಟಿಂಗ್‌ ಬ್ಲ್ಯೂ, ಗ್ಲೇಸಿಯರ್‌ ಸಿಲ್ವರ್, ಒನಿಕ್ಸ್‌ ಬ್ಲ್ಯಾಕ್‌, ಥಂಡರ್‌ ಗ್ರೇ ಮತ್ತು ಫ್ಯೂಷನ್‌ ರೆಡ್‌ ಬಣ್ಣಗಳಲ್ಲಿ ದೇಶದಾದ್ಯಂತ ಎಲ್ಲ ಡೀಲರ್‌ಶೀಪ್‌ಗಳಲ್ಲಿ ಲಭ್ಯ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.