ADVERTISEMENT

ಮಾರುತಿ ಆಲ್ಟೊ: 16ನೇ ವರ್ಷವೂ ಅತಿ ಹೆಚ್ಚು ಮಾರಾಟ

ಪಿಟಿಐ
Published 15 ಜೂನ್ 2020, 11:57 IST
Last Updated 15 ಜೂನ್ 2020, 11:57 IST
alto
alto   

ನವದೆಹಲಿ: ಸತತ 16ನೇ ವರ್ಷವೂ ಆಲ್ಟೊ ಕಾರ್‌ ಅತಿ ಹೆಚ್ಚು ಮಾರಾಟ ಆಗಿರುವ ವಾಹನವಾಗಿ ಹೊರಹೊಮ್ಮಿದೆ ಎಂದುಮಾರುತಿ ಸುಜುಕಿ ಇಂಡಿಯಾ ಕಂಪನಿ ತಿಳಿಸಿದೆ.

2019–20ರಲ್ಲಿ ಒಟ್ಟಾರೆ 1.48 ಲಕ್ಷ ಆಲ್ಟೊ ಮಾರಾಟವಾಗಿವೆ. 2000ರದ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು, 2004ರಲ್ಲಿ ಮೊದಲ ಬಾರಿಗೆ ಭಾರತದ ಅತಿ ಹೆಚ್ಚು ಮಾರಾಟ ಕಂಡ ಕಾರ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು ಎಂದು ಕಂಪನಿ ತಿಳಿಸಿದೆ.

ಕಾಲಕ್ಕೆ ತಕ್ಕಂತೆ ಮೇಲ್ದರ್ಜೆಗೇರಿಸುತ್ತಿರುವುದು ಹಾಗೂ ಬ್ರ್ಯಾಂಡ್‌ನಲ್ಲಿ ಹೊಸತನ ಅಳವಡಿಕೆಯಿಂದಾಗಿ ಗ್ರಾಹಕರಿಗೆ ಮೆಚ್ಚುಗೆಯಾಗಿದೆ ಎಂದು ಕಂಪನಿಯ ಮಾರಾಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ಅವರು ತಿಳಿಸಿದ್ದಾರೆ.

ADVERTISEMENT

ಡ್ರೈವರ್ ಸೈಡ್‌ ಏರ್‌ಬ್ಯಾಗ್‌, ಆ್ಯಂಟಿ ಕ್ಲಾಕ್‌ ಬ್ರೆಕಿಂಗ್‌ ಸಿಸ್ಟಮ್ಸ್‌ ಮತ್ತು ಎಲೆಕ್ಟ್ರಾನಿಕ್‌ ಬ್ರೇಕ್‌ ಫೋರ್ಸ್‌ ಡಿಸ್ಟ್ರಿಬ್ಯೂಷನ್‌, ರಿವರ್ಸ್ ಪಾರ್ಕಿಂಗ್‌ ಸೆನ್ಸರ್‌ ಮತ್ತು ಹೈ ಸ್ಪೀಡ್‌ ಅಲರ್ಟ್‌ ಸಿಸ್ಟಂನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಹೊಸ ನಿಯಮಗಳಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.