ADVERTISEMENT

ವಾಯು ಮಾಲಿನ್ಯ ನಿಯಂತ್ರಣದ ಕಠಿಣ ಮಾನದಂಡ: ಕಾರು ಬೆಲೆ ಏರಿಕೆ ಸಾಧ್ಯತೆ

ಪಿಟಿಐ
Published 9 ಅಕ್ಟೋಬರ್ 2022, 15:47 IST
Last Updated 9 ಅಕ್ಟೋಬರ್ 2022, 15:47 IST
   

ನವದೆಹಲಿ: ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಕಠಿಣ ಮಾನದಂಡಗಳು 2023ರ ಏಪ್ರಿಲ್‌ನಿಂದ ಜಾರಿಗೆ ಬರಲಿದ್ದು, ಆಟೊಮೊಬೈಲ್‌ ಕಂಪನಿಗಳು ವಾಹನಗಳನ್ನು ಮೇಲ್ದರ್ಜೆಗೇರಿಸಲು ಹೂಡಿಕೆ ಮಾಡಲಿವೆ. ಇದರಿಂದಾಗಿ ಪ್ರಯಾಣಿಕ ಹಾಗೂ ವಾಣಿಜ್ಯ ವಾಹನಗಳ ಬೆಲೆಯು ಹೆಚ್ಚಾಗುವ ಸಾಧ್ಯತೆ ಇದೆ.

ಎರಡನೆಯ ಹಂತದ ಬಿಎಸ್‌–6 ಮಾನದಂಡಗಳಿಗೆ ಅನುಗುಣವಾಗಿ ವಾಹನಗಳು ಇರುವಂತೆ ಮಾಡಲು ದೇಶದ ಆಟೊಮೊಬೈಲ್ ಉದ್ಯಮ ಗಮನಹರಿಸಿದೆ. ಇದು ಸಾಧ್ಯವಾಗಬೇಕು ಎಂದಾದರೆ ವಾಹನಗಳಲ್ಲಿ ಸುಧಾರಿತ ಉಪಕರಣಗಳನ್ನು ಬಳಸಬೇಕು.

ವಾಹನಗಳ ಉತ್ಪಾದನಾ ವೆಚ್ಚದಲ್ಲಿ ಆಗುವ ಹೆಚ್ಚಳವನ್ನು ಮುಂದಿನ ವರ್ಷದ ಆರಂಭದಿಂದ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.